ಬೆಳ್ತಂಗಡಿ: ಸ್ನೇಹಿತನನ್ನು ಭೇಟಿಯಾಗುವುದಾಗಿ ತಿಳಿಸಿ ಮನೆಯಿಂದ ತೆರಳಿದ್ದ ಯುವತಿ ನಾಪತ್ತೆ

Share the Article

ಅಜ್ಜ-ಅಜ್ಜಿಯೊಂದಿಗೆ ಇದ್ದ ಯುವತಿಯೊಬ್ಬಳು ಸ್ನೇಹಿತನ ಮನೆಗೆ ಹೋಗುವ ನೆಪದಲ್ಲಿ ಮನೆ ಬಿಟ್ಟು ನಾಪತ್ತೆಯಾಗಿರುವ ಘಟನೆ ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದಲ್ಲಿ ನಡೆದಿದೆ.

ಶಿರ್ಲಾಲು ಗ್ರಾಮದ ಮಾಣಿಲದ ಗೋಜ ಮೇರ ಎಂಬವರ ಪುತ್ರಿ ಕುಸುಮಾವತಿ (23) ಕಾಣೆಯಾದ ಯುವತಿ.

ಕುಸುಮಾವತಿ ಚಿಕ್ಕಂದಿನಿಂದಲೂ ನಿಡ್ಲೆ ಗ್ರಾಮದ ಬೂಡುಜಾಲು ಎಂಬಲ್ಲಿನ ಅಜ್ಜ ಅಜ್ಜಿಯ ಮನೆಯಲ್ಲಿ ವಾಸವಾಗಿದ್ದಳು. ಅಕ್ಟೋಬರ್ 24 ರಂದು ಉಪ್ಪಿನಂಗಡಿಯಲ್ಲಿರುವ ತನ್ನ ಸ್ನೇಹಿತನನ್ನು ಭೇಟಿಯಾಗುವುದಾಗಿ ತನ್ನ ಚಿಕ್ಕಮ್ಮ ಶೋಭಿತಾಗೆ ಹೇಳಿ ಮನೆಯಿಂದ ಹೋಗಿ ಬಳಿಕ ನಾಪತ್ತೆಯಾಗಿದ್ದಾಳೆ.

ಚಿಕ್ಕಮ್ಮ ಶೋಭಿತಾ ನೀಡಿದ ದೂರಿನ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply