ಕಾರ್ಕಳ : ತೆಂಗಿನ ಮರದಿಂದ ಆಯತಪ್ಪಿ ಬಿದ್ದು ವ್ಯಕ್ತಿ ಸಾವು

Share the Article

ತೆಂಗಿನ ಕಾಯಿ ಕೊಯ್ಯಲೆಂದು ಮರವೇರಿದ್ದ ವ್ಯಕ್ತಿ ಆಯತಪ್ಪಿ ನೆಲಕ್ಕೆ ಬಿದ್ದು ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಪಳ್ಳಿ ಗ್ರಾಮದಲ್ಲಿ ಸಂಭವಿಸಿದೆ.

ನಿತ್ಯಾನಂದ ಪ್ರಭು(41) ಘಟನೆಯಲ್ಲಿ ಮೃತ ದುರ್ದೈವಿಯಾಗಿದ್ದಾರೆ.

ಕೃಷಿ ಕೂಲಿ ಕೆಲಸ ಮಾಡಿಕೊಂಡಿದ್ದ ಅವರು ಮನೆಯ ತೆಂಗಿನ ಮರಕ್ಕೇರಿದ್ದರು. ಈ ವೇಳೆ ಆಕಸ್ಮಿಕವಾಗಿ ಮರದಿಂದ ನೆಲಕ್ಕೆ ಬಿದ್ದ ಅವರ ತಲೆಗೆ, ಕೈ,ಕಾಲಿಗೆ ಗಂಭೀರ ಗಾಯ ಉಂಟಾಗಿತ್ತು. ಕೂಡಲೇ ಆಸ್ಪತ್ರೆಗೆ ದಾಖಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

Leave A Reply