ಬೆಳ್ತಂಗಡಿ | ಆಕಸ್ಮಿಕವಾಗಿ ಸಿಡಿದ ಗುಂಡು, ವ್ಯಕ್ತಿಗೆ ಗಾಯ

Share the Article

ಆಕಸ್ಮಿಕವಾಗಿ ಗುಂಡು ಸಿಡಿದ ಪರಿಣಾಮ ವ್ಯಕ್ತಿಯೊಬ್ಬರು ಗಾಯಗೊಂಡ ಘಟನೆ ಬೆಳ್ತಂಗಡಿ ತಾಲೂಕಿನಲ್ಲಿ ಮಚ್ಚಿನದಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಮಚ್ಚಿನ ಗ್ರಾಮದ ಮಾಯಿಲೋಡಿ ಎಂಬಲ್ಲಿ ವಿಶ್ವನಾಥ ನಾಯ್ಕ ಎಂಬವರು ತನ್ನ ಜಮೀನಿಗೆ ಬಂದಿರುವ ಕಾಡು ಪ್ರಾಣಿಗಳನ್ನು ಓಡಿಸಲು ಪರವಾನಿಗೆ ಹೊಂದಿರುವ ಎಸ್‌ಬಿಎಂಎಲ್ ಕೋವಿ ನೆಲಕ್ಕೆ ಬಿದ್ದ ಪರಿಣಾಮ ಆಕಸ್ಮಿಕವಾಗಿ ಗುಂಡು ಸಿಡಿದು ಅಂಗಳದಲ್ಲಿ ನಿಂತಿದ್ದ ಕುಮಾರಯ್ಯ ನಾಯ್ಕ ಎಂಬವರ ಕಾಲಿಗೆ ಗುಂಡು ತಗುಲಿದೆ.

ವಿಶ್ವನಾಥ ನಾಯ್ಕ ರವರು ಗಾಯಾಳುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಮುಂದುವರೆದಿದೆ.

ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply