ರಾಜ್ಯ ಮಟ್ಟದ 45 ಕೆ.ಜಿ.ಜೂನಿಯರ್ ವಿಭಾಗದ ವೈಟ್ ಲಿಪ್ಟಿಂಗ್ ಸ್ಪರ್ಧೆ : ಕಾಣಿಯೂರಿನ ಹರ್ಷಿತಾ ಎಲುವೆ ಪ್ರಥಮ ಸ್ಥಾನ

Share the Article

ಕಾಣಿಯೂರು : ಕರ್ನಾಟಕ ರಾಜ್ಯ ವೈಟ್ ಲಿಪ್ಟರ್ಸ್ ಅಸೋಸಿಯೇಷನ್, ದಾವಣಗೆರೆ ಜಿಲ್ಲಾ ವೈಟ್ ಲಿಪ್ಟರ್ಸ್ ಅಸೋಸಿಯೇಷನ್, ದಾವಣಗೆರೆ ಮಹಾನಗರ ಪಾಲಿಕೆ ಇವರ ಸಂಯುಕ್ತ ಆಶ್ರಯದಲ್ಲಿ
ದಾವಣಗೆರೆಯಲ್ಲಿ ನಡೆದ ರಾಜ್ಯ ಮಟ್ಟದ ವೈಟ್ ಲಿಪ್ಟಿಂಗ್ ನ 45 ಕೆಜಿ ಜೂನಿಯರ್‌ ವಿಭಾಗದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕಾಣಿಯೂರಿನ ಹರ್ಷಿತಾ ಎಲುವೆ ಪ್ರಥಮ ಸ್ಥಾನ ಪಡೆದಿದ್ದಾರೆ.ಪುತ್ತೂರು ಸಂತ ಫಿಲೋಮಿನ ಕಾಲೇಜನ್ನು ಪ್ರತಿನಿಧಿಸಿದ ಇವರು 69 ಕೆಜಿ ಭಾರ ಎತ್ತಿ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ.

ಕಾಣಿಯೂರು ಗ್ರಾಮದ ಎಲುವೆ ಬೆಳಿಯಪ್ಪ ಗೌಡ ಮತ್ತು ಚೇತನಾ ರವರ ಪುತ್ರಿಯಾಗಿರುವ ಇವರು ಪಿಲೋಮಿನಾ ಕಾಲೇಜಲ್ಲಿ ಪದವಿ ವ್ಯಾಸಂಗ ಮಾಡುತಿದ್ದು,ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಹೈಸ್ಕೂಲ್, ಸ.ಹಿ.ಪ್ರಾಥಮಿಕ ಶಾಲೆ ಕಾಣಿಯೂರು ಇಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದಿರುತ್ತಾರೆ.

Leave A Reply