ನಾಳೆ 41 ಮಂದಿಗೆ,17 ಸಂಘ ಸಂಸ್ಥೆಗಳಿಗೆ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ
ಮಂಗಳೂರು : ವಿವಿಧ ಕ್ಷೇತ್ರಗಳ 41 ಮಂದಿ ಸಾಧಕರು ಮತ್ತು 17 ಸಂಘ-ಸಂಸ್ಥೆಗಳಿಗೆ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಲಾಗಿದ್ದು, ನ. 1ರಂದು ಬೆಳಗ್ಗೆ 9 ಗಂಟೆಗೆ ನಗರದ ನೆಹರೂ ಮೈದಾನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಚಿವ ಎಸ್. ಅಂಗಾರ ಧ್ವಜಾರೋಹಣ ನೆರವೇರಿಸುವರು.ಬಳಿಕ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಪ್ರಶಸ್ತಿ ವಿಜೇತರ ವಿವರ
ಎಸ್.ಎಸ್. ನಾಯಕ್, ಕೂಸಪ್ಪ ಶೆಟ್ಟಿಗಾರ್, ವಿವೇಕ್ ವಿನ್ಸೆಂಟ್ ಪಾಯಸ್, ಕೆ. ರಾಮ ಮೊಗರೋಡಿ, ಡಾ| ಅಶೋಕ್ ಶೆಟ್ಟಿ ಬಿ.ಎನ್., ತಾರಾನಾಥ ಶೆಟ್ಟಿ (ಸಮಾಜಸೇವೆ), ಉದಯ ಚೌಟ, ದಿನೇಶ್ ಕುಂದರ್, ಸತೀಶ್ ಬೋಳಾರ, ಅನಿಲ್ ಮೆಂಡೋನ್ಸಾ, ಜಯಲಕ್ಷ್ಮೀ ಜಿ., ವೆನಿಜಿಯಾ ಆನ್ನಿ ಕಾರ್ಲೊ, ವಿನ್ಸೆಂಟ್ ಪ್ರಕಾಶ್ ಕಾರ್ಲೊ (ಕ್ರೀಡೆ), ರವಿ ಕುಮಾರ್ (ಕಂಬಳ), ಪಿ.ಕೆ. ದಾಮೋದರ (ಸ್ಯಾಕ್ಸೊಫೋನ್ ವಾದಕರು), ಶಿವರಾಮ ಶೇರಿಗಾರ ಮತ್ತು ನಾಗೇಶ್ ಶೇರಿಗಾರ (ನಾಗಸ್ವರ ವಾದಕರು), ಎ.ಕೆ. ಉಮಾನಾಥ ದೇವಾಡಿಗ (ನಾದಸ್ವರ ವಾದಕ), ಶಂಕರ ಜೆ. ಶೆಟ್ಟಿ, ಲಿಂಗಪ್ಪ ಗೌಡ ಕಡೆಂಗ, ಡಾ| ಅರುಣ್ ಉಳ್ಳಾಲ (ಸಾಂಸ್ಕೃತಿಕ), ಅಣ್ಣಿ ಸುವರ್ಣ (ತಾಸೆ ವಾದಕ), ಪದ್ಮನಾಭ ಶೆಟ್ಟಿಗಾರ್ (ತಾಳಮದ್ದಳೆ), ರವಿ ರಾಮಕುಂಜ (ನಾಟಕ), ಜಯಾನಂದ ಸಂಪಾಜೆ (ಯಕ್ಷಗಾನ), ಪುತ್ತೂರು ಪಾಂಡುರಂಗ ನಾಯಕ್ (ಸಂಗೀತ), ಪ. ರಾಮಕೃಷ್ಣ ಶಾಸ್ತ್ರಿ (ಸಾಹಿತ್ಯ), ಉಮೇಶ್ ಪಂಬದ, ಕೃಷ್ಣ ಪೂಜಾರಿ, ಭಾಸ್ಕರ ಬಂಗೇರ (ಜಾನಪದ), ಡಾ| ಗೋಪಾಲಕೃಷ್ಣ ಭಟ್ ಸಂಕಬಿತ್ತಿಲು, ಡಾ| ಶಶಿಕಾಂತ ತಿವಾರಿ (ವೈದ್ಯಕೀಯ), ಶೀನ ಪೂಜಾರಿ (ನಾಟಿ ವೈದ್ಯ), ಶಿವಪ್ರಸಾದ್ ಬಿ., ವಿದ್ಯಾಧರ ಶೆಟ್ಟಿ, ಬಿ. ಶ್ರೀನಿವಾಸ ಕುಲಾಲ್ (ಪತ್ರಿಕೋದ್ಯಮ), ರಾಘವ ಬಲ್ಲಾಳ್ (ಗಡಿನಾಡು ಯಕ್ಷಗಾನ), ಕಮಲಾಕ್ಷ ಅಮೀನ್ (ಹೊರನಾಡು), ದೇವಿಕಿರಣ್ ಗಣೇಶಪುರ (ಚಿತ್ರಕಲೆ), ಕಡಮಜಲು ಸುಭಾಸ್ ರೈ ಬಿ.ಎ. (ಕೃಷಿ), ಅಶೋಕ್ (ಸಮಾಜಸೇವೆ).
ಸಂಘ ಸಂಸ್ಥೆಗಳು
ವೀರ ನಾಯಕ ಜನಸೇವಾ ಟ್ರಸ್ಟ್ (ಸಮಾಜಸೇವೆ), ಬಿಲ್ಲವ ಸಮಾಜಸೇವಾ ಸಂಘ ಮೂಲ್ಕಿ (ಸಮಾಜಸೇವೆ), ಬಾಲಕರ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಟ್ರಸ್ಟ್ (ಸಮಾಜಸೇವೆ), ಯುವಶಕ್ತಿ ಕಡೇಶಿವಾಲಯ (ಸಮಾಜಸೇವೆ), ಮಲ್ಲಿಕಾರ್ಜುನ ಸೇವಾ ಸಂಘ (ಸಮಾಜಸೇವೆ), ಸ್ಪಂದನಾ ಫ್ರೆಂಡ್ಸ್ ಸರ್ಕಲ್ ಕುಳಾç (ಸಮಾಜಸೇವೆ), ಬೈಕಂಪಾಡಿ ವಿದ್ಯಾರ್ಥಿ ಯುವಕ ಮಂಡಲ (ಸಮಾಜಸೇವೆ), ಸ್ವಾಮಿ ಶ್ರೀ ವಿವೇಕಾನಂದ ಸೇವಾಶ್ರಮ (ಸಮಾಜಸೇವೆ), ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಯುವಕ ಮಂಡಲ (ಸಮಾಜಸೇವೆ), ಹೆಲ್ತ್ ಇಂಡಿಯಾ ಫೌಂಡೇಶನ್ ಉಳ್ಳಾಲ (ಸಮಾಜಸೇವೆ), ವೈಟ್ ಡೌಸ್ (ಸಮಾಜಸೇವೆ), ಕೇಸರಿ ಮಿತ್ರವೃಂದ (ಸಮಾಜಸೇವೆ), ಸನಾತನ ನಾಟ್ಯಾಲಯ (ಭರತನಾಟ್ಯ), ಸಾಯಿ ಪರಿವಾರ್ ಟ್ರಸ್ಟ್ (ಸಮಾಜಸೇವೆ), ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ನ್ಪೋರ್ಟ್ಸ್ ಕ್ಲಬ್ ತೋಕೂರು, ಶ್ರೀ ನಾಗಬ್ರಹ್ಮ ಯುವಕ ಮಂಡಲ (ಸಮಾಜಸೇವೆ), ಕಂಕನಾಡಿ ಯುವಕ ವೃಂದ (ಸಮಾಜಸೇವೆ) ಪ್ರಶಸ್ತಿ ಸ್ವೀಕರಿಸಲಿದ್ದಾರೆ.