Home News ಕರ್ನಾಟಕ-ಕೇರಳ ಅಂತರಾಜ್ಯ ಬಸ್ ಸಂಚಾರ ಸದ್ಯಕ್ಕಿಲ್ಲ

ಕರ್ನಾಟಕ-ಕೇರಳ ಅಂತರಾಜ್ಯ ಬಸ್ ಸಂಚಾರ ಸದ್ಯಕ್ಕಿಲ್ಲ

Hindu neighbor gifts plot of land

Hindu neighbour gifts land to Muslim journalist

ಮಂಗಳೂರು : ಕರ್ನಾಟಕ-ಕೇರಳ ಅಂತರಾಜ್ಯ ಬಸ್‌ ಸಂಚಾರ ಸದ್ಯ ಆರಂಭವಾಗದು.ಒಂದು ವಾರ ಯಥಾಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ.

ಮಂಗಳೂರು-ಕಾಸರಗೋಡು ಮಾರ್ಗದಲ್ಲಿ ನ.1ರಿಂದ ಬಸ್‌ ಸಂಚಾರ ಪುನರಾರಂಭವಾಗುವು ಸಾಧ್ಯತೆ ಇದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳು ಹರಿದಾಡುತ್ತಿವೆ.

ಒಂದು ವಾರಗಳ ಕಾಲ ಅಂತರಾಜ್ಯ ಬಸ್‌ ಸಂಚಾರ ಪುನರಾರಂಭವಾಗದು ಎಂದು ದ.ಕ ಜಿಲ್ಲಾಡಳಿತ ಹೇಳಿದೆ.

ಈ ವಿಚಾರವಾಗಿ ಕೇರಳ ಕೆಎಸ್‌ಆರ್‌ಟಿಸಿಯ ಅಧಿಕಾರಿಗಳು ತಿಳಿಸಿದ್ದು, “ಕರ್ನಾಟಕ ಬಸ್‌ಗಳು ರಾಜ್ಯ ಪ್ರವೇಶಿಸುವುದಕ್ಕಾಗಲಿ, ನಮ್ಮ ಬಸ್‌ಗಳನ್ನು ಕರ್ನಾಟಕಕ್ಕೆ ಬಿಡುವುದಕ್ಕಾಗಲಿ ನಮ್ಮದೇನೂ ಅಭ್ಯಂತರವಿಲ್ಲ. ಕರ್ನಾಟಕ ಸರ್ಕಾರ ನಿಷೇಧ ಹೇರಿರುವ ಹಿನ್ನೆಲೆ ಬಸ್‌ಗಳ ಗಡಿ ದಾಟಲು ಸಾಧ್ಯವಾಗುತ್ತಿಲ್ಲ. ಕರ್ನಾಟಕ ಸರ್ಕಾರ ಅವಕಾಶ ನೀಡಿದ ತಕ್ಷಣವೇ ನಮ್ಮಲ್ಲಿಂದ ಬಸ್‌‌ ಪ್ರಾರಂಭಿಸಲಾಗುವುದು” ಎಂದು ಹೇಳಿದ್ದಾರೆ.

“ಕೇರಳದಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇ.5ಕ್ಕಿಂತ ಕೆಳಗೆ ಬಾರದೇ ಇದ್ದಲ್ಲಿ ಅಂತರಾಜ್ಯ ಬಸ್‌ ಪುನರಾರಂಭಿಸಲು ಸಾಧ್ಯವಿಲ್ಲ. ಈ ಬಗ್ಗೆ ಇನ್ನೂ ಒಂದು ವಾರ ಕಾದು ಪರಿಸ್ಥಿತಿ ಅವಲೋಕಿಸಿ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳಲಾಗುವುದು” ಎಂದು ದ.ಕ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ. ವಿ ತಿಳಿಸಿದ್ದಾರೆ.