ಕುಮಾರಮಂಗಲ,ಬಂಬಿಲ : ತೋಟಗಳಿಗೆ ನುಗ್ಗಿದ ಕಾಡುಕೋಣಗಳ ಹಿಂಡು,ಕೃಷಿಕರಿಗೆ ಆತಂಕ

Share the Article

ಸವಣೂರು : ಕಾಡು ಪ್ರಾಣಿಗಳಿಂದ ಕೃಷಿಕ ತನ್ನ ಕೃಷಿ ರಕ್ಷಿಸುವಲ್ಲಿ ನಿರಂತರವಾಗಿ ಹೋರಾಟ ಮಾಡುವಂತಹ ಪರಿಸ್ಥಿತಿ ಮುಂದುವರೆದಿದೆ.
ಕಾಡುಹಂದಿ,ನವಿಲು,ಮಂಗಗಳ ಉಪಟಳದಿಂದ ಬಾಳೆ,ಅಡಿಕೆ,ಭತ್ತದ ಕೃಷಿಕರಿಗೆ ನಿರಂತರ ತೊಂದರೆ ತಪ್ಪಿದಲ್ಲ.ಇದೀಗ ಪಾಲ್ತಾಡಿ ಗ್ರಾಮದ ಬಂಬಿಲ,ಪುಣ್ಚಪ್ಪಾಡಿ ಗ್ರಾಮದ ಕುಮಾರಮಂಗಲದಲ್ಲಿ ಕಾಡುಕೋಣಗಳ ಹಿಂಡು ಕಾಣಿಸಿಕೊಂಡಿದೆ.

ಇದು ಕೃಷಿಕರಿಗೆ ಹಾಗೂ ಸಾರ್ವಜನಿಕರಿಗೆ ಆತಂಕಕ್ಕೆ ಕಾರಣವಾಗಿದೆ. ಶಾಲೆಗಳು ಆರಂಭಗೊಂಡಿರುವುದರಿಂದ ಶಾಲಾ ಮಕ್ಕಳಿಗೂ ಇದರಿಂದ ಆತಂಕ ಶುರುವಾಗಿದೆ.

ಬಂಬಿಲ ಬೈಲಾಡಿಯ ಕೃಷಿಕ ಅನ್ನಪೂರ್ಣ ಪ್ರಸಾದ್ ರೈ ಅವರ ತೋಟದಲ್ಲಿ ಬುಧವಾರ ಕೆಲಸ ಮಾಡಿಕೊಂಡಿದ್ದ ಕಾರ್ಮಿಕರಿಗೆ ಮರಿ ಸಹಿತ ಇರುವ ಕಾಡುಕೋಣದ ಹಿಂಡು ಕಾಣಿಸಿಕೊಂಡಿದೆ.

Leave A Reply