ಬಂಟ್ವಾಳ : ಬಿಜೆಪಿ ಮುಖಂಡ ಮೇಲೆ ದುಷ್ಕರ್ಮಿಗಳಿಂದ ತಲವಾರು ದಾಳಿ

Share the Article

ಬಂಟ್ವಾಳ: ಬಿಜೆಪಿ ಮುಖಂಡನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ ಘಟನೆ ಬಂಟ್ವಾಳ ತಾಲೂಕಿನ ಬಡಗಬೆಳ್ಳೂರಿನಲ್ಲಿ ನಡೆದಿದೆ.

ಹಲ್ಲೆಗೊಳಗಾದವರನ್ನು ಬಡಗಬೆಳ್ಳೂರು ನಿವಾಸಿ ಬಿಜೆಪಿ ಅಮ್ಹಾಡಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಎನ್ನಲಾಗಿದೆ.

ದುಷ್ಕರ್ಮಿಗಳು ತಲವಾರು ಸಹಿತ ಮನೆಗೆ ನುಗ್ಗಿ ತಲವಾರಿನಿಂದ ಮಾರಣಾಂತಿಕ ದಾಳಿ ನಡೆಸಿ ಕೊಲೆಯತ್ನ ನಡೆದಿಸಿದ್ದು, ಇದನ್ನು ತಡೆಯಲು ಬಂದ ತಾಯಿ ಮತ್ತು ಅಣ್ಣನಿಗೂ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಗಲಭೆಯ ಸಂದರ್ಭ ಸಾರ್ವಜನಿಕರು ಸೇರಿದನ್ನೂ ಕಂಡು ಆರೋಪಿಗಳು ಪರಾರಿಯಾಗಿದ್ದು, ಮಾರಣಾಂತಿಕ ದಾಳಿಗೊಳಗಾದ ಪ್ರಕಾಶ್ ಬೆಳ್ಳೂರು ಬಂಟ್ವಾಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Leave A Reply