ಸುಳ್ಯ : ಹೊಳೆಗೆ ಸ್ನಾನಕ್ಕಿಳಿದ ವ್ಯಕ್ತಿ ನೀರಲ್ಲಿ ಮುಳುಗಿ ಸಾವು

Share the Article

ಸುಳ್ಯ: ಇಲ್ಲಿನ ಉಬರಡ್ಕ ಗ್ರಾಮದ ಕುತ್ತಮೊಟ್ಟೆಯಲ್ಲಿ ವ್ಯಕ್ತಿಯೊಬ್ಬರು ಹೊಳೆಗೆ ಸ್ನಾನಕ್ಕಿಳಿದು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಅ.24 ರಂದು ‌ನಡೆದಿದೆ.

ಉಬರಡ್ಕ ಕುತ್ತಮೊಟ್ಟೆ ನಿವಾಸಿ ರಾಮ (63 ವರ್ಷ) ಎಂಬವರು ಮನೆಯ ಪಕ್ಕದಲ್ಲಿರುವ ಹೊಳೆಗೆ ಸ್ಥಾನಕ್ಕೆಂದು ತೆರಳಿದ್ದರು ಅವರು ವಾಪಸು ಬಾರದೆ ಇದ್ದಾಗ ಮನೆಯವರು ಅವರನ್ನು ಹುಡುಕಾಡಿದಾಗ ಹೊಳೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮೃತದೇಹವನ್ನು ಹೊಳೆಯಿಂದ ಮೇಲೆತ್ತಲು ಪೊಲೀಸರೊಂದಿಗೆ ರಾಜ್ ಸೌಂಡ್ಸ್ ನ ರಾಜೇಶ್, ಪ್ರಗತಿ ಅಂಬ್ಯುಲೇನ್ಸ್ ನ ಅಚ್ಚು ಪ್ರಗತಿ,ಗುರುವ,ಲೊಕೇಶ್,ರೋಹಿತ್ ಸಹಕರಿಸಿದ್ದಾರೆ.

ಸುಳ್ಯ ಠಾಣಾ ಪೋಲಿಸರು ಸ್ಥಳಕ್ಕೆ ಆಗಮಿಸಿ, ಮಹಜರು ಮಾಡಿ ಸರಕಾರಿ ಆಸ್ಪತ್ರೆ ತಂದು ಶವಪರೀಕ್ಷೆ ನಡೆಸಿ ಬಳಿಕ ಕೊಡಿಯಾಲ್‌ಬೈಲ್ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ

Leave A Reply