ದೇಶಾದ್ಯಂತ 300ಕ್ಕೂ ಹೆಚ್ಚು ಜನರನ್ನು ತಮ್ಮ ಹನಿಟ್ರ್ಯಾಪ್ ಬಲೆಗೆ ಬೀಳಿಸಿದ ಖತರ್ನಾಕ್ ದಂಪತಿ | ಒಂದು ವರ್ಷದಲ್ಲಿ ಬರೋಬ್ಬರಿ 20 ಕೋಟಿ ಸುಲಿಗೆ ಮಾಡಿದ ಜೋಡಿ !!

ಈಗಿನ ಡಿಜಿಟಲ್ ಯುಗ ಹೇಗೆ ಮುಂದುವರೆದಿದೆಯೋ ಹಾಗೆಯೇ ಅದರಿಂದ ಸುಲಿಗೆಗೆ ಒಳಗಾಗುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಹಲವು ಕಡೆಗಳಲ್ಲಿ ಹನಿಟ್ರ್ಯಾಪ್ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಹಾಗೆಯೇ ಇಲ್ಲೊಂದು ಬಹುದೊಡ್ಡ ಹನಿಟ್ರ್ಯಾಪ್ ಪ್ರಕರಣ ಇದೀಗ ಬೆಳಕಿಗೆ ಬಂದಿದೆ.

 

ಉದ್ಯಮಿಗಳು ಮತ್ತು ಶ್ರೀಮಂತರನ್ನು ಹನಿಟ್ರ್ಯಾಪ್ ಜಾಲಕ್ಕೆ ಬೀಳಿಸಿ ಸುಲಿಗೆ ಮಾಡುತ್ತಿದ್ದ ದಂಪತಿಯನ್ನು ಗಾಜಿಯಾಬಾದ್ ಪೊಲೀಸರು ಬಂಧಿಸಿದ್ದಾರೆ. ಯೋಗೇಶ್ ಮತ್ತು ಸಪ್ನಾ ಗೌತಮ್ ದಂಪತಿ ಬಂಧಿತ ಆರೋಪಿಗಳಾಗಿದ್ದಾರೆ. ಇವರು ಗಾಜಿಯಾಬಾದ್ ಮೂಲದವರಾಗಿದ್ದಾರೆ.

ಇವರು 30 ಮಹಿಳೆಯರನ್ನಿಟ್ಟುಕೊಂಡು ಹನಿಟ್ರ್ಯಾಪ್ ದಂಧೆ ನಡೆಸುತ್ತಿದ್ದರು. ಈ ದಂಪತಿ ದೇಶಾದ್ಯಂತ ಸುಮಾರು 300ಕ್ಕೂ ಹೆಚ್ಚು ಮಂದಿಗೆ ಹನಿಟ್ರ್ಯಾಪ್ ಮಾಡಿದ್ದು, ಒಂದೇ ವರ್ಷದಲ್ಲಿ 20 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಸುಲಿಗೆ ಮಾಡಿದ್ದಾರೆ.

ಯೋಗೇಶ್ ಶ್ರೀಮಂತರು, ಉದ್ಯಮಿಗಳನ್ನು ಟಾರ್ಗೆಟ್ ಮಾಡಿ ಮೊದಲು ಅವರ ಬ್ಯಾಂಕ್ ವಹಿವಾಡಿನ ಜೊತೆಗೆ ಫೋನ್ ನಂಬರ್ ಸಹಿತ ವಿವರ ತಿಳಿದುಕೊಳ್ಳುತ್ತದ್ದರು. ನಂತರ ಯೋಗೇಶ್ ಪತ್ನಿ ಸಪ್ನಾ ಜಾಲತಾಣಗಳಲ್ಲಿ ನಕಲಿ ಖಾತೆ ತೆಗೆದು, ಅವರೊಂದಿಗೆ ಚಾಟ್ ಮಾಡುತ್ತಿದ್ದಳು. ಅಲ್ಲದೆ ಈ ಕೆಲಸಕ್ಕೆ ಕೆಲ ಮಹಿಳೆಯರನ್ನೂ ನೇಮಿಸಿದ್ದಳು ಎಂಬುದು ತನಿಖೆ ವೇಳೆ ತಿಳಿದು ಬಂದಿದೆ. ಇನ್ನು ವೆಬ್‍ಸೈಟ್ ಒಂದರಲ್ಲಿ ಸೆಕ್ಸ್ ಚಾಟ್ ನಡೆಸಿಯೂ ಕಮೀಷನ್ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.

Leave A Reply

Your email address will not be published.