ಸವಣೂರು ಮುಗೇರು ಶ್ರೀ ಮಹಾವಿಷ್ಣು ಮೂರ್ತಿ ದೇವಾಲಯದದ ಗೌರವಾಧ್ಯಕ್ಷ ಮುರಳಿ ಮೋಹನ್ ಶೆಟ್ಟಿ ನಿಧನ

Share the Article

ಕಡಬ : ಸವಣೂರು ಮುಗೇರು ಶ್ರೀ ಮಹಾ ವಿಷ್ಣು ಮೂರ್ತಿ ದೇವಾಲಯದ ಗೌರವಾಧ್ಯಕ್ಷ ಎಂ.ಮುರಳಿ ಮೋಹನ್ ಶೆಟ್ಟಿ ( 76 ವ) ರವರು ಅಲ್ಪಕಾಲದ ಅಸೌಖ್ಯದಿಂದ ಅ. 23 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಪತ್ನಿ ಸುಮನಾ ಎಂ.ಶೆಟ್ಟಿ, ಪುತ್ರ ರಾಮ್ ಗಣೇಶ್ ರವರನ್ನು ಅಗಲಿದ್ದಾರೆ. ಮುರಳಿಮೋಹನ್ ಶೆಟ್ಟಿ ರವರು ಅರೇಲ್ತಡಿ ದೈವಸ್ಥಾನದ ಅಧ್ಯಕ್ಷ, ಗೌರವಾಧ್ಯಕ್ಷರಾಗಿ, ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ಟ್ರಸ್ಟಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಇಂಜಿನಿಯರ್ ಆಗಿದ್ದ ಮುರಳಿಮೋಹನ್ ಶೆಟ್ಟಿ ರವರ ನಿಧನಕ್ಕೆ ಹಲವು ಮಂದಿ ಶೋಕ ವ್ಯಕ್ತಪಡಿಸಿದ್ದಾರೆ.

Leave A Reply