ಕಪೋಕಲ್ಪಿತ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಮೆಚ್ಚುಗೆ | ಚಿತ್ರತಂಡದ ಮೊಗದಲ್ಲಿ ಮಂದಹಾಸ

Share the Article

ಹೊಸಬರು ಸೇರಿಕೊಂಡು ನಟಿಸಿ ನಿರ್ಮಿಸಿರುವ” ಕಪೋ‌ಕಲ್ಪಿತ” ಚಿತ್ರಕ್ಕೆ ಸೆನ್ಸಾರ್ ಮಂಡಳಿ ಮೆಚ್ಚುಗೆಯ ಮಾತು ಚಿತ್ರತಂಡದ ಮುಖದಲ್ಲಿ ಮಂದಹಾಸ ಮನೆ ಮಾಡಿದೆ.

ಕುತೂಹಲಕಾರಿ ಹಾರರ್ ಕಥಾ ಹಂದರವಿರುವ ಚಿತ್ರಕ್ಕೆ ಯು/ ಎ ಪ್ರಮಾಣ ಪತ್ರ ನೀಡಿದೆ. ಸುಮಿತ್ರಾರಮೇಶ್‌ಗೌಡ ನಾಯಕಿ,ನಿರ್ಮಾಪಕಿ ಹಾಗು ನಿರ್ದೇಶಕಿಯ ಜವಾಬ್ದಾರಿ ಹೊತ್ತಿದ್ದಾರೆ.

ಚಿತ್ರವನ್ನು ದಕ್ಷಿಣ ಕನ್ನಡ, ಉಡುಪಿ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂದು ಮಂಡ್ಯದ ಕೆ.ಆರ್.ಪೇಟೆ ಮೂಲದ ಸುಮಿತ್ರಾ ರಮೇಶ್‌ಗೌಡ ಮಾಹಿತಿ ಹಂಚಿಕೊಂಡರು.

ಚಿತ್ರದಲ್ಲಿ ಪತ್ರಕರ್ತೆಯಾಗಿ ಕಾಣಿಸಿಕೊಂಡಿದ್ದೇನೆ. ಸ್ವಯಂ ಕಲ್ಪನೆ ಎಂಬುದು ಶೀರ್ಷಿಕೆ ಅರ್ಥ ಕೊಡುತ್ತದೆ. ಯಾವುದೇ ವಿಷಯ ಒಬ್ಬರಿಂದ ಮತ್ತೊಬ್ಬರಿಗೆ ತಲುಪುವಾಗ ಹೆಚ್ಚಿಗೆ ಸೇರಿಕೊಂಡು ಸಂಶಯಕ್ಕೆ ನಾಂದಿಯಾಗುತ್ತದೆ. ಹೀಗಾಯಿತಂತೆ, ಹಾಗಾಯಿತಂತೆ, ಅಂಗಾಯ್ತು, ಇಂಗಾಯ್ತು ಎಂಬಂತೆ ಬಿಂಬಿತವಾಗುತ್ತದೆ. ಯುವಕರ ತಂಡಮನೆಗೆ ಹೋಗುತ್ತಾರೆ. ಅಲ್ಲಿ ಭೂತವಿದೆ ಅಂತ ತಿಳಿದು ಅದರಿಂದ ಹೇಗೆ ತಪ್ಪಿಸಿಕೊಂಡು ಹೊರಗೆ ಬರುತ್ತಾರೆ ಇಲ್ಲವೆ ಎನ್ನುವುದು ಚಿತ್ರದ ತಿರುಳು ಎಂದು ಮಾಹಿತಿ ಹಂಚಿಕೊಂಡರು.

ಸಣ್ಣ ಪುಟ್ಟ ಪಾತ್ರದಲ್ಲಿ ಅಭಿನಯಿಸಿದ್ದ ಪ್ರೀತಂಮಕ್ಕಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.ಚಿತ್ರಸಲ್ಲಿ ಸಂದೀಪ್‌ಮಲಾನಿ, ಗೌರೀಶ್‌ಅಕ್ಕಿ. ಶಿವರಾಜ್‌ಕರ್ಕೆರ, ರಾಜೇಶ್‌ಕಣ್ಣೂರ್, ವಿನೀತ್, ವಿಶಾಲ್, ಅಮೋಘ್, ಚೈತ್ರಾ ದೀಕ್ಷಿತ್‌ಗೌಡ ಮುಂತಾದವರ ತಾರಗಣವಿದೆ.

ಮಗಳ ಸಾಧನೆಗೆ ರಮೇಶ್‌ ಚಿಕ್ಕೇಗೌಡ ಬಂಡವಾಳ ಹೂಡಿದ್ದಾರೆ. ಕವಿತಾಕನ್ನಿಕಾಪೂಜಾರಿ ಸೇರಿಕೊಂಡಿದ್ದಾರೆ ಮಂಗಳೂರಿನ ಗಣಿ ದೇವ್‌ಕಾರ್ಕಳ ಸಂಗೀತ ನೀಡುವ ಜೊತೆಗೆ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ.ಛಾಯಾಗ್ರಹಣ-ಸಂಕಲನ ಬಾತುಕುಲಾಲ್ ಚಿತ್ರಕ್ಕಿದೆ.

Leave A Reply