ಯುವ ಕ್ರಿಕೆಟ್‌ ಆಟಗಾರ್ತಿಗೆ ಕೋಚ್‌‌ನಿಂದ ಲೈಂಗಿಕ ಕಿರುಕುಳ | ಪ್ರೀತಿಸುವಂತೆ ಪೀಡಿಸಿ,ಮೆಸೆಜ್‌ಗೆ ರಿಪ್ಲೈ ಕೊಡದಿದ್ದರೆ ತರಬೇತಿ ನೀಡಲ್ಲ ಎಂದ ಕೋಚ್‌ ವಿರುದ್ದ ಪ್ರಕರಣ ದಾಖಲು

Share the Article

ಕ್ರಿಕೆಟ್‌ ತರಬೇತಿಗಾಗಿ ಬಂದಿರುವ ಯುವ ಆಟಗಾರ್ತಿಗೆ ಕೋಚ್ ಒಬ್ಬ ಲೈಂಗಿಕ ಕಿರುಕುಳ ನೀಡಿದ್ದು,ಆತನ ವಿರುದ್ಧ ಪ್ರಕರಣ ದಾಖಲಾಗಿದೆ.

16 ವರ್ಷದ ಯುವ ಕ್ರಿಕೆಟ್‌ ಆಟಗಾರ್ತಿಗೆ ಭಾರತ ತಂಡ ಕ್ರಿಕೆಟ್‌ ತರಬೇತುದಾರ ಓರ್ವರು ಲೈಂಗಿಕ ಕಿರುಕುಳ ನೀಡಿದ್ದಾನೆ. ಪೊಲೀಸರು ಇದೀಗ ವಿರುದ್ದ ಪೊಕ್ಸೊ ಕಾಯ್ದೆಯಂತೆ ಪ್ರಕರಣ ದಾಖಲಿಸಿದ್ದಾರೆ.

ಪುದುಚೇರಿಯ ಕ್ರಿಕೆಟ್ ಅಸೋಸಿಯೇಷನ್ ​​(ಸಿಎಪಿ)ನ ತರಬೇತುದಾರ ತಮ್ಮರೈಕಣ್ಣನ್‌ ಎಂಬಾತನೇ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ತರಬೇತುದಾರ. ಕೋಚ್ ಕಮ್ ಕ್ರಿಕೆಟರ್ ಆಗಿರುವ ತಮ್ಮರೈಕಣ್ಣನ್‌ ತನ್ನ ಭುಜ, ಬೆನ್ನು ಮತ್ತು ಎದೆಯನ್ನು ಸ್ಪರ್ಶಿಸಿ ಕಿರುಕುಳ ನೀಡಿದ್ದಾರೆ ಎಂದು ಯುವ ಆಟಗಾರ್ತಿ ಆರೋಪಿಸಿದ್ದಾಳೆ.

ನನ್ನನ್ನು ತಮ್ಮರೈಕಣ್ಣನ್‌ ಪ್ರೀತಿಸುತ್ತಿರುವುದಾಗಿ ಹಲವಾರು ಸಂದೇಶಗಳನ್ನು ಕಳುಹಿಸಿದ್ದರು. ತಾನು ಅವರ ಪ್ರೀತಿಗೆ ಮರು ಪ್ರತಿಕ್ರಿಯಿಸದೇ ಇದ್ದಾಗ, ತನಗೆ ಕ್ರಿಕೆಟ್‌ ತರಬೇತಿಯನ್ನೇ ನೀಡುವುದಿಲ್ಲ ಎಂದು ಬೆದರಿಕೆಯೊಡ್ಡಿದ್ದಾರೆ. ತನ್ನ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯದ ವಿಷಯವನ್ನು ಕ್ರಿಕೆಟ್‌ ಅಸೋಸಿಯೇಶನ್‌ ಮುಂದೆಯೂ ತಂದಿದ್ದೇನೆ. ಆದರೆ ಅಸೋಸಿಯೇಶನ್‌ ಅವರು ಯಾವುದೇ ಕ್ರಮವನ್ನೂ ಕೈಗೊಂಡಿಲ್ಲ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾರೆ.

ಯುವ ಕ್ರಿಕೆಟ್‌ ಆಟಗಾರ್ತಿ ಯಾರ ವಿರುದ್ಧವೂ ಲೈಂಗಿಕ ಕಿರುಕುಳದ ದೂರು ನೀಡಿಲ್ಲ ಎಂದು ಪುದುಚೇರಿಯ ಕ್ರಿಕೆಟ್ ಅಸೋಸಿಯೇಷನ್ ​​(ಸಿಎಪಿ) ಕಾರ್ಯದರ್ಶಿ ಚಂದ್ರು ಹೇಳಿದ್ದಾರೆ. ಆದರೆ ಕೋಚ್‌ ತಮೈರಕ್ಕಣ್ಣನವರು ತಮ್ಮ ಮಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಹುಡುಗಿಯ ತಾಯಿ ದೂರು ನೀಡಿದ್ದಾರೆ. ಬಾಲಕಿ ದೂರು ನೀಡಿದರೆ ದೂರಿನ ಹಿನ್ನೆಲೆಯಲ್ಲಿ ಕೋಚ್‌ ಮಾತ್ರವಲ್ಲದೇ ಕ್ರಿಕೆಟ್ ಅಸೋಸಿಯೇಶನ್ ಆಫ್ ಪುದುಚೇರಿಯ (ಸಿಎಪಿ) ನಾಲ್ವರು ಪದಾಧಿಕಾರಿಗಳ ವಿರುದ್ಧವೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಕ್ರಿಕೆಟ್ ಅಸೋಸಿಯೇಶನ್ ಆಫ್ ಪುದುಚೇರಿಯ (ಸಿಎಪಿ) ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಯನ್ನು ನಡೆಸಿದ್ದು, ತಮ್ಮರೈಕ್ಕನನ್ ಅವರನ್ನು ಒಂದು ವರ್ಷಗಳ ಕಾಲ ಅಮಾನತು ಮಾಡಿದೆ. ಚೈಲ್ಡ್ ಲೈನ್ ಬಾಲಕಿಯ ದೂರನ್ನು ಮೆಟ್ಟುಪಾಳ್ಯಂ ಪೊಲೀಸರಿಗೆ ರವಾನಿಸಿದ್ದು, ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Leave A Reply