45 ವರ್ಷದ ವ್ಯಕ್ತಿಯ ಜೊತೆ 25 ವರ್ಷದ ಯುವತಿ ಮದುವೆ | ಇದು ಈಗಿನ ಧಾರಾವಾಹಿಗಳ ಕಥೆ ಅಲ್ಲ, ರಿಯಲ್ ಸ್ಟೋರಿ !!

Share the Article

ತುಮಕೂರು: ಯಾರು ಯಾರನ್ನ ಮದುವೆ ಆಗಬೇಕು ಎಂಬುದು ದೇವರ ಸೃಷ್ಟಿ ಅಂತ ಮಾತಿದೆ.ವಿವಾಹಕ್ಕೂ ಇಂತಹುದೇ ಒಂದು ಋಣಾನುಬಂಧ ಮುಖ್ಯ.ಆದ್ರೇ.. ಇಲ್ಲೊಬ್ಬ 45 ವರ್ಷದ ವ್ಯಕ್ತಿಯೊಂದಿಗೆ 25 ವರ್ಷದ ಯುವತಿಯೊಬ್ಬಳು ದಾಂಪತ್ಯಕ್ಕೆ ಕಾಲಿಟ್ಟಿರುವಂತ ಘಟನೆ ನಡೆದಿದೆ.

ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಚೌಡನಕುಪ್ಪೆ ಗ್ರಾಮದ ಬಳಿಯಲ್ಲಿನ ಅಕ್ಕಿಮರಿಪಾಳ್ಯದ ಶಕರಣ್ಣ(45) ಎಂಬುವರ ಜೊತೆಗೆ ಮೇಘನಾ(25) ದೇವಾಲಯದಲ್ಲಿ ಮದುವೆಯಾದಂತ ಜೋಡಿಯಾಗಿದ್ದಾರೆ. ಹೀಗೆ 45 ವರ್ಷದ ವ್ಯಕ್ತಿ 25 ವರ್ಷಯ ಯುವತಿಯೊಂದಿಗೆ ವಿವಾಹವಾಗಿರುವಂತ ಪೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿದೆ.

ಕಳೆದ ಎರಡು ವರ್ಷಗಳ ಹಿಂದೆ ಮೇಘನಾ ಮದುವೆಯಾಗಿದ್ದರು. ಆದ್ರೇ ಅವರ ಪತಿ ಕಾಣೆಯಾಗಿದ್ದರು. ಹೀಗಾಗಿ ಶಂಕರಣ್ಣ ಅವರನ್ನು ಮೇಘನಾ ಅವರೇ ಹೋಗಿ ಕೇಳಿಕೊಂಡಾಗ ಅವರು ಮದುವೆಯಾಗಿದ್ದಾಗಿ ತಿಳಿದು ಬಂದಿದೆ.ಮೇಘನಾ ಮಾತಿಗೆ ಒಪ್ಪಿದಂತ ಶಂಕರಣ್ಣ ಅವರು, ಇದುವರೆಗೆ ಮದುವೆಯಾಗದ ಅವರು, ಮೇಘನಾ ಜೊತೆಗೆ ಸಪ್ತಪತಿ ತುಳಿದಿದ್ದಾರೆ. ಊರಿನ ಸಮೀಪದಲ್ಲಿನ ದೇವಾಲಯದಲ್ಲಿ ಇಬ್ಬರು ಮದುವೆಯಾಗಿದ್ದಾರೆ.

Leave A Reply