ಪೇಪರ್ ಕಪ್‌ನಲ್ಲಿ ಚಹಾ,ಕಾಫಿ ಹೀರಿದರೆ ದೇಹಕ್ಕೆ ಪ್ಲಾಸ್ಟಿಕ್ !
ಬಳಸಿ ಎಸೆಯುವ ಪೇಪರ್ ಕಪ್ ನಲ್ಲಿಚಾ ಅಥವಾ ಕಾಫಿ ಕುಡಿಯುವವರಿಗೆ ಇದೊಂದು ಮುನ್ನೆಚ್ಚರಿಕೆಯ ಕರೆಗಂಟೆ.
ಪೇಪರ್ ಕಪ್ ಮೂಲಕ ನಮ್ಮ ದೇಹದ ಒಳಕ್ಕೆ ಪ್ಲಾಸ್ಟಿಕ್ ಕಣಗಳು ಸೇರಿಕೊಳ್ಳುತ್ತವೆ. ಖರಗ್‌ಪುರ ಐಐಟಿ ನಡೆಸಿದ ಸಂಶೋಧನೆಯ ಪ್ರಕಾರ, ಪ್ರತಿನಿತ್ಯ ಪೇಪರ್ ಕಪ್‌ನಲ್ಲಿ ಚಹಾ ಸೇವಿಸುವುದರಿಂದ 75,000 ಸೂಕ್ಷ್ಮ ಪ್ಲಾಸ್ಟಿಕ್ ಕಣಗಳುದೇಹಕ್ಕೆ ಹೋಗುತ್ತವೆ.
ಪೇಪರ್ ಕಪ್‌ಗಳಲ್ಲಿ ಬಿಸಿ ದ್ರಾವಣವನ್ನು ಹಾಕಿದ ವೇಳೆ ಸೂಕ್ಷ್ಮ ಪ್ಲಾಸ್ಟಿಕ್ ಕಣಗಳು ಹಾಗೂ ವಿಷಕಾರಿ ಅಂಶಗಳು ಸೇರಿಕೊಂಡಿರುವುದು ಸಂಶೋಧನೆಯಿಂದ ತಿಳಿದುಬಂದಿದೆ. ಸಾಮಾನ್ಯವಾಗಿ ಪೇಪರ ಕಪ್‌ಗಳು ತೆಳುವಾದ ಪ್ಲಾಸಿಕ್ ಪದರವನ್ನು ಹೊಂದಿರುತ್ತವೆ. ಹೀಗಾಗಿ 15 ನಿಮಿಷದಲ್ಲಿ ಅವು ಬಿಸಿ ನೀರಿನಲ್ಲಿ ಕರಗುತ್ತವೆ ಎಂದು ಐಐಟಿಯ ಸಹಾಯಕ ಪ್ರಾಧ್ಯಾಪಕಿ ಸುಧಾ ಗೋಯಲ್ ತಿಳಿಸಿದ್ದಾರೆ.
‘ನಾವು ನಡೆಸಿದ ಸಂಶೋಧನೆಯಿಂದ 100 ಎಂಎಲ್ ಬಿಸಿ ನೀರನ್ನು ಪೇಪರ್ ಕಪ್‌ಗಳಲ್ಲಿ 15 ನಿಮಿಷಗಳ ಕಾಲ ಇಟ್ಟರೆ 25,000 ಸೂಕ್ಷ್ಮ ಕಣಗಳು ಬಿಡುಗಡೆ ಆಗಿರುವುದು ಕಂಡುಬಂದಿದೆ’ ಎಂದು ಹೇಳಿದ್ದಾರೆ.