ಶ್ರೀ ಕ್ಷೇತ್ರ ರುದ್ರಗಿರಿ ಮೃತ್ಯುಂಜಯ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ । ಇಂದು ಬಿಂಬ ಆಗಮನ
ತಣ್ಣೀರುವಂತ : ಶ್ರೀ ಕ್ಷೇತ್ರ ರುದ್ರಗಿರಿಯಲ್ಲಿ ಈಗ ಬ್ರಹ್ಮಕಲಶೋತ್ಸವದ ಸಂಭ್ರಮ. ಶ್ರೀ ಕ್ಷೇತ್ರ ರುದ್ರಗಿರಿ ಹಲವು ವೈಶಿಷ್ಟ್ಯಗಳ ಕ್ಷೇತ್ರ. 500 ವರ್ಷಕ್ಕೂ ಮಿಕ್ಕಿದ ಇತಿಹಾಸವಿರುವ ರುದ್ರಗಿರಿಯಲ್ಲಿನ ರುದ್ರಗಿರಿ ಶ್ರೀ ಮೃತ್ಯುಂಜಯ ದೇವಸ್ಥಾನದ ಬ್ರಹ್ಮ ಕಲಶೋತ್ಸವ ಹಾಗೂ ಸಪರಿವಾರ ದೈವಗಳ ಪ್ರತಿಷ್ಠೆ ಮತ್ತು ನೇಮೋತ್ಸವದ ಆಮಂತ್ರಣ ಪತ್ರಿಕೆಯ ಬಿಡುಗಡೆಯು ಫೆ. 23 ರಂದು ಕ್ಷೇತ್ರದ ಪ್ರಾಂಗಣದಲ್ಲಿ ನಡೆಯಿತು.
ಮಾ.8 ರಿಂದ ಮಾ.15 ರ ತನಕ ಪ್ರತಿಷ್ಠಾ ಅಷ್ಟ ಬಂಧ ಬ್ರಹ್ಮ ಕಲಶೋತ್ಸವ, ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಸಪಾರಿ ದೈವಗಳ ಪ್ರತಿಷ್ಠೆ ಮತ್ತು ನೇಮೋತ್ಸವವು ಕ್ಷೇತ್ರದಲ್ಲಿ ವಿಜೃಂಬಿಸಲಿದೆ.
ಬ್ರಹ್ಮ ಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಅಳದಂಗಡಿ ಅರಮನೆ ಶ್ರೀ ತಿಮ್ಮಣ್ಣರಸರಾದ ಡಾ। ಪದ್ಮ ಪ್ರಸಾದ ಅಜಿಲರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿ, ತಂತ್ರೀವರ್ಯರ ಹಾಗೂ ವ್ಯವಸ್ಥಾಪನಾ ಸಮಿತಿಯ ಗೌರವಾಧ್ಯಕ್ಷ ಬ್ರಹ್ಮಶ್ರೀ ಕೇಶವ ಜೋಗಿತ್ತಾಯರಿಗೆ ಪ್ರಥಮ ಆಮಂತ್ರಣವನ್ನು ನೀಡುವ ಮೂಲಕ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ ಬ್ರಹ್ಮ ಕಲಶೋತ್ಸವ ಕಾರ್ಯಕ್ರಮದ ಯಶಸ್ವಿಗೆ ಎಲ್ಲರೂ ಪಾಲುದಾರರಾಗಬೇಕು ಎಂದು ಹೇಳಿ ಶುಭ ಹಾರೈಸಿದರು.
ಇಂದು ಬಿಂಬ ಯಾತ್ರೆ !
ದೇವಸ್ಥಾನಕ್ಕೆ ಬೇಕಾಗುವ ಹಲವು ಮೂರ್ತಿಗಳು ಶಿಲ್ಪಿಗಳ ಬಳಿ ರೆಡಿಯಾಗಿದ್ದು, ಇಂದು ಬಿಂಬ ತರಲು ಅಲಂಕೃತಗೊಂಡ ಟೆಂಪೋಗಳು ಹೊರಡಲಿವೆ. ಸಂಜೆಯ ಹೊತ್ತಿಗೆ ಪ್ರತಿಷ್ಠಾಪನೆಗೊಳ್ಳಲಿರುವ ಮೂರ್ತಿಗಳು ( ಬಿಂಬಗಳು ) ದೇವಾಲಯದ ಪ್ರಾಂಗಣದಲ್ಲಿ ಬಂದು ನಿಲ್ಲಲಿದ್ದು, ದೃಷ್ಟಿ ಪಡೆದುಕೊಳ್ಳಲು ( ಜೀವ ತಳೆಯಲು ) ಕಾಯುತ್ತ ನಿಲ್ಲಲಿವೆ.
ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಬೆಳ್ತಂಗಡಿ ತಾಲೂಕು ಶಾಸಕ ಹರೀಶ್ ಪೂಂಜ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿ, ಕಾರ್ಯಕ್ರಮದ ವಿವಿಧ ಸಮಿತಿಯ ಸಂಚಾಲಕರು ಮತ್ತು ಪದಾಧಿಕಾರಿಗಳು ಜವಾಬ್ದಾರಿಯನ್ನು ವಹಿಸಿಕೊಂಡು, ಬ್ರಹ್ಮಕಲಶೋತ್ಸವದ ಸಮಯದಲ್ಲಿ ನಡೆಯಲಿರುವ ಪ್ರತಿಯೊಂದು ಕೆಲಸ ಕಾರ್ಯವನ್ನು ಮುತುವರ್ಜಿಯಿಂದ ನಿರ್ವಹಿಸುವ ಮೂಲಕ ಊರಿನ, ಪರ-ಊರಿನಿಂದ ಬರುವ ಸಾವಿರಾರು ಭಕ್ತಾಧಿಗಳು ಆಗಮಿಸುವ ಸಮಯದಲ್ಲಿ ಸಮಿತಿಯ ಪದಾಧಿಕಾರಿಗಳು, ಸಂಚಾಲಕರು, ಸದಸ್ಯರು ತಮ್ಮ ಜವಾಬ್ದಾರಿಯನ್ನು ಯಾವ ರೀತಿಯಲ್ಲಿ ವಹಿಸಿಕೊಳ್ಳು ಬೇಕು ಎಂದು ಮಾರ್ಗದರ್ಶನ ನೀಡುವ ಮೂಲಕ ಗ್ರಾಮಸ್ಥರು ಉತ್ಸಾಹದಿಂದ ಕೆಲಸ ಮಾಡುವಂತೆ ಪ್ರೇರೇಪಿಸಿ, ಹುರಿದುಂಬಿಸಿದರು.
ಈ ಸಂದರ್ಭದಲ್ಲಿ ಬ್ರಹ್ಮ ಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಜಗದೀಶ್ ನೆಲ್ಲಿಕಟ್ಟೆ, ಕಾರ್ಯಾಧ್ಯಕ್ಷ ಮಾಧವ ಜೋಗಿತ್ತಾಯ, ಶಂಕರ್ ಭಟ್, ಪ್ರಧಾನ ಕಾರ್ಯದರ್ಶಿಗಳಾದ ದುಗ್ಗಪ್ಪ ಗೌಡ ಪೊಸಂದೋಡಿ, ಚಂದ್ರಹಾಸ ಪಕಳ, ಪೂವಪ್ಪ ಬಂಗೇರ ಅಳಕೆ, ಕೋಶಾಧಿಕಾರಿ ಸುರೇಶ್ ಜಿ. ಕರ್ಪಾಡಿ, ಪ್ರಧಾನ ಅರ್ಚಕ ಅಶೋಕ್ ಭಟ್, ವಜ್ರ ಕುಮಾರ್ ಅಂತರ, ಗೌರವ ಸಲಹೆಗಾರರಾದ ಪದ್ಮ ರಾಜ ಅಜಿಲ ಅಂತರ, ರಂಗಪ್ಪ ಪೂಜಾರಿ ಅಳಕೆ, ಭರತ್ ಶೆಟ್ಟಿ ಕೇರಿ, ಮತ್ತು ವಿವಿಧ ಸಮಿತಿ ಸದಸ್ಯರು, ಪದಾಧಿಕಾರಿಗಳು, ಮಹಿಳೆಯರು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಆಡಳಿತ ಮಂಡಳಿ ಅಧ್ಯಕ್ಷ ಸದಾನಂದ ಮಡಪ್ಪಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಅರ್ಥಿಕ ಸಮಿತಿ ಪ್ರಧಾನ ಸಂಚಾಲಕ ಯೋಗೀಶ್ ಪೂಜಾರಿ ಅಳಕೆ ಧನ್ಯವಾದವಿತ್ತರು.
ಈ ಸಂದರ್ಭದಲ್ಲಿ ಬ್ರಹ್ಮ ಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಜಗದೀಶ್ ನೆಲ್ಲಿಕಟ್ಟೆ, ಕಾರ್ಯಾಧ್ಯಕ್ಷ ಮಾಧವ ಜೋಗಿತ್ತಾಯ, ಶಂಕರ್ ಭಟ್, ಪ್ರಧಾನ ಕಾರ್ಯದರ್ಶಿಗಳಾದ ದುಗ್ಗಪ್ಪ ಗೌಡ ಪೊಸಂದೋಡಿ, ಚಂದ್ರಹಾಸ ಪಕಳ, ಪೂವಪ್ಪ ಬಂಗೇರ ಅಳಕೆ, ಕೋಶಾಧಿಕಾರಿ ಸುರೇಶ್ ಜಿ. ಕರ್ಪಾಡಿ, ಪ್ರಧಾನ ಅರ್ಚಕ ಅಶೋಕ್ ಭಟ್, ವಜ್ರ ಕುಮಾರ್ ಅಂತರ, ಗೌರವ ಸಲಹೆಗಾರರಾದ ಪದ್ಮ ರಾಜ ಅಜಿಲ ಅಂತರ, ರಂಗಪ್ಪ ಪೂಜಾರಿ ಅಳಕೆ, ಭರತ್ ಶೆಟ್ಟಿ ಕೇರಿ, ಮತ್ತು ವಿವಿಧ ಸಮಿತಿ ಸದಸ್ಯರು, ಪದಾಧಿಕಾರಿಗಳು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಆಡಳಿತ ಮಂಡಳಿ ಅಧ್ಯಕ್ಷ ಸದಾನಂದ ಮಡಪ್ಪಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಅರ್ಥಿಕ ಸಮಿತಿ ಪ್ರಧಾನ ಸಂಚಾಲಕ ಯೋಗೀಶ್ ಪೂಜಾರಿ ಅಳಕೆ ಧನ್ಯವಾದವಿತ್ತರು.
ನೆನಪಿಡಿ : ಇಂದು ಸಂಜೆ ಅಥವಾ ನಾಳೆ ಮುಂಜಾನೆಯ ಹೊತ್ತಿಗೆ ಶ್ರೀ ಕ್ಷೇತ್ರ ರುದ್ರಗಿರಿ ಮೃತ್ಯುಂಜಯ ದೇವಸ್ಥಾನದ ಕಾರ್ಣಿಕದ ಕುತೂಹಲ ಭರಿತ ಇತಿಹಾಸವನ್ನು ನೀವು ಹೊಸಕನ್ನಡದಲ್ಲಿ ಓದಲಿದ್ದೀರಿ. ಅದು ನೆಲ್ಲಿಗುಡ್ಡೆಯೆ೦ಬ ಏನೂ ಕೃಷಿಮಾಡದೆ 500 ವರ್ಷಗಳಿಗೂ ಮಿಕ್ಕಿ ಪಡೀಲ್ ಬಿದ್ದಿದ್ದ ಗುಡ್ಡದಲ್ಲಿ ಭವ್ಯ ದೇವಸ್ಥಾನವೊಂದು ಎದ್ದು ನಿಂತ ಕಥೆ !