Home Karnataka State Politics Updates ಸಿದ್ದರಾಮಯ್ಯ ಮತ್ತು ಎಚ್‍ಡಿಕೆಗೆ ತಾಕತ್ ಇದ್ರೆ ಜಮಾತ್ ಇ ಇಸ್ಲಾಂ ಬಗ್ಗೆ ಮಾತನಾಡಲಿ | ಗೋ...

ಸಿದ್ದರಾಮಯ್ಯ ಮತ್ತು ಎಚ್‍ಡಿಕೆಗೆ ತಾಕತ್ ಇದ್ರೆ ಜಮಾತ್ ಇ ಇಸ್ಲಾಂ ಬಗ್ಗೆ ಮಾತನಾಡಲಿ | ಗೋ ಹತ್ಯೆಯ ಶಾಪ ಎಚ್‍ಡಿಕೆ ಹಾಗೂ ಸಿದ್ದರಾಮಯ್ಯಗೆ ತಟ್ಟಿದೆ ಎಂದ ಯತ್ನಾಳ್

Hindu neighbor gifts plot of land

Hindu neighbour gifts land to Muslim journalist

ವಿಜಯಪುರ: ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಆರ್‌ಎಸ್‌ಎಸ್‌ಗೆ ಯಾಕೆ ಗಂಟು ಬಿದ್ದಿದ್ದಾರೆ ಗೊತ್ತಿಲ್ಲ. ಇವರಿಬ್ಬರಿಗೆ ತಾಕತ್ ಇದ್ರೆ ಜಮಾತ್ ಇ ಇಸ್ಲಾಂ ಬಗ್ಗೆ ಮಾತನಾಡಲಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗುಡುಗಿದ್ದಾರೆ.

ಮಾಧ್ಯಮಗಳೊಂದಿಗೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಮಡ್ನಳ್ಳಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿಗೆ ನಿಜವಾದ ಗಂಡಸ್ತನ ಇದ್ರೆ ತಾಲಿಬಾನ್ ಹಾಗೂ ಅಫ್ಘಾನಿಸ್ತಾನ ಬಗ್ಗೆ ಮಾತನಾಡಲಿ. ಅದು ಬಿಟ್ಟು ಆರ್‌ಎಸ್‌ಎಸ್‌ ನವರು ಹಿಂದೂ ಪರ ಕೆಲಸ ಮಾಡುತ್ತಾರೆ ಎಂದು ನೀವು ಹೇಳುವ ಅಗತ್ಯವಿಲ್ಲ. ರಾಮ ಮಂದಿರದ ಲೆಕ್ಕ ನಮ್ಮಲ್ಲಿ ಇದೆ ರಾಮಮಂದಿರಕ್ಕೆ ಆರ್‌ಎಸ್‌ಎಸ್‌ ಹಣ ಸಂಗ್ರಹ ಮಾಡಿಲ್ಲ. ರಾಮಮಂದಿರದ ಹಣವನ್ನು ವಿಶ್ವ ಹಿಂದೂ ಪರಿಷತ್ ಮಾಡಿದೆ. ದೇವೇಗೌಡರು ಪ್ರತಿ ಬಾರಿ ಮಾತಾಡುವಾಗ ಅಯ್ಯೋ ರಾಮ, ಅಯ್ಯೋ ರಾಮ ಮಾತಲ್ಲಿ ಅಂತಾರೇ. ನೀವು ನೋಡಿದ್ರೆ ಹೀಗೆ, ರಾಮ ಮಂದಿರದ ಬಗ್ಗೆ ಈ ರೀತಿಯ ಹೇಳಿಕೆ ಕೊಡುತ್ತಿದ್ದೀರಿ. ಮೊದಲು ನೀವೆಷ್ಟು ಹಣ ಕೊಟ್ಟಿದ್ದಿರಿ ಅದನ್ನು ಹೇಳಿ. ಗೋ ಹತ್ಯೆಯ ಶಾಪ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯಗೆ ತಟ್ಟಿದೆ ಎಂದು ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.

ಸಿದ್ದರಾಮಯ್ಯನವರು ಬಾಲಿಶ ಹೇಳಿಕೆ ನೀಡಬಾರದು. ಆಯುಧ ಪೂಜೆಯನ್ನು ಸೈನ್ಯ ಹಾಗೂ ಪೊಲೀಸ್ ಇಲಾಖೆಯಲ್ಲೂ ಮಾಡಲಾಗುತ್ತದೆ. ಸಿದ್ದರಾಮಯ್ಯ ಪ್ರಕಾರ ನಮಾಜ್ ಅಷ್ಟೆ ಮಾಡಬೇಕಾ? ಕೋಮು ಭಾವನೆ ಕೆರಳಿಸುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಇದರಿಂದಲೇ ದೇಶದಲ್ಲಿ ಕಾಂಗ್ರೆಸ್ ನಾಶವಾಗುತ್ತಿದೆ. ಹಿಂದೂ ವಿರೋಧಿ ಮಾಡುತ್ತಿರುವುದಕ್ಕೆ ಕಾಂಗ್ರೆಸ್ ನಾಶವಾಗುತ್ತಿದೆ. ಸಿದ್ದರಾಮಯ್ಯ ತಮ್ಮ ಘನತೆಗೆ ತಕ್ಕ ಹಾಗೆ ನಡೆದುಕೊಳ್ಳಬೇಕು. ಜೆಡಿಎಸ್ ಮತ್ತು ಕಾಂಗ್ರೆಸ್ ಅಲ್ಪಸಂಖ್ಯಾತರ ವೋಟಿಗಾಗಿ ಆರ್‌ಎಸ್‌ಎಸ್‌ನ್ನು ಟಾರ್ಗೆಟ್ ಮಾಡಿದೆ. ಆರ್‌ಎಸ್‌ಎಸ್‌ಗೆ ಬೈದರೆ ಅಲ್ಪಸಂಖ್ಯಾತರು ನಮ್ಮ ಕಡೆಗೆ ಬರುತ್ತಾರೆ ಎಂದು ತಿಳಿದುಕೊಂಡಿದ್ದಾರೆ. ಜೆಡಿಎಸ್ ಹಾಗೂ ಕಾಂಗ್ರೆಸ್ ನವರಿಗೆ ಹಿಂದೂಗಳ ವೋಟ್ ಬೇಡ. ಆದರೆ ಈ ಪಕ್ಷದ ನಾಯಕರು ಹಿಂದೂಗಳ ಭಾವನೆಗಳಿಗೆ ಗೌರವ ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟರು.