Home latest ಚಿಕ್ಕಪ್ಪನ ಮಗ ,ಪತ್ನಿಯ ಗುಂಡಿಟ್ಟು ಕೊಂದು ಕೆರೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ಚಿಕ್ಕಪ್ಪನ ಮಗ ,ಪತ್ನಿಯ ಗುಂಡಿಟ್ಟು ಕೊಂದು ಕೆರೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ

Hindu neighbor gifts plot of land

Hindu neighbour gifts land to Muslim journalist

ಕ್ಷುಲ್ಲಕ ಕಾರಣಕ್ಕಾಗಿ ತನ್ನ ಚಿಕ್ಕಪ್ಪನ ಮಗ ಹಾಗೂ ತನ್ನ ಹೆಂಡತಿಯನ್ನು ಬಂದೂಕಿನಿಂದ ಗುಂಡಿಟ್ಟು ಕೊಂದು ನಂತರ ತಾನೂ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿ ಕೊಂಡ ಘಟನೆ ಕೊಡಗಿನ ಪೊನ್ನಂಪೇಟೆಯಲ್ಲಿ ನಡೆದಿದೆ.

ಪೊನ್ನಂಪೇಟೆ ತಾಲೂಕು ಕಿರುಗೂರು ಗ್ರಾಮದ ಮಧು ಹಾಗೂ ಯಶೋದಾ ಗುಂಡೇಟಿನಿಂದ ಮೃತಪಟ್ಟ ದುರ್ದೈವಿಗಳು.ಬಳಿಕ ಆರೋಪಿ ಸಾಗರ್ ಕೆರೆಗೆ ಹಾರಿ ಪ್ರಾಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶುಕ್ರವಾರ ಮಧ್ಯಾಹ್ನ ಈ ಕೃತ್ಯ ನಡೆದಿದ್ದು, ಎರಡು ಕುಟುಂಬಗಳ ಮಧ್ಯೆ ಅಡಿಕೆ ತೋಟಕ್ಕೆ ಸಂಬಂಧಪಟ್ಟಂತೆ ಹಲವಾರು ತಿಂಗಳುಗಳಿಂದ ವ್ಯಾಜ್ಯವಿತ್ತು. ಈ ವಿಷಯ ಅತಿರೇಕಕ್ಕೆ ಹೋಗಿದ್ದು, ಮಾತಿನ ಚಕಮಕಿ ನಂತರ ಐನ್ ಮನೆಯಲ್ಲಿ ಸಾಗರ್ ಮಧು ಜೊತೆ ಚರ್ಚಿಸುತ್ತಿದ್ದರೆ ಸಾಗರ್, ಮಧುಗೆ ಗುಂಡು ಹೊಡೆದಿದ್ದು, ಆತ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗುಂಡು ಹೊಡೆಯುವುದನ್ನು ತಡೆಯಲು ಬಂದ ಸಾಗರ್ ನ ಪತ್ನಿ ಯಶೋದಾಗೂ ಗುಂಡು ತಗುಲಿದ್ದು ಅವರನ್ನು ಚಿಕಿತ್ಸೆಗಾಗಿ ಮೈಸೂರಿಗೆ ಕೊಂಡೊಯ್ಯುವ ಸಂದರ್ಭ ಮೃತಪಟ್ಟಿದ್ದಾರೆ.

ಸಾಗರನ ಮೃತ ದೇಹವನ್ನು ಕೆರೆಯಿಂದ ಹೊರತೆಗೆಯುವಲ್ಲಿ ಗೋಣಿಕೊಪ್ಪ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ವೀರಾಜ ಪೇಟೆಪೊಲೀಸ್ ಉಪಾಧೀಕ್ಷಕಜೈಕುಮಾರ್, ಪೊಲೀಸ್ ವೃತ್ತನಿರೀಕ್ಷಕ ಜಯರಾಮ್, ಪೊನ್ನಂಪೇಟೆ ಪೊಲೀಸ್ ನಿರೀಕ್ಷಕ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದರು. ಗುಂಡೇಟಿನಿಂದ ಮೃತಪಟ್ಟ ಮಧು, ಯಶೋದಾ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಸಾಗರ್‌ ನ ಮೃತದೇಹ ವನ್ನು ಗೋಣಿಕೊಪ್ಪಕ್ಕೆ ತರಲಾಯಿತು.