Home News ನಮ್ಮ ಸಾಮರ್ಥ್ಯವನ್ನು ಅರಿಯುವುದೇ ಶಿಕ್ಷಣ: ಬಿ ಸೋಮಶೇಖರ ಶೆಟ್ಟಿ

ನಮ್ಮ ಸಾಮರ್ಥ್ಯವನ್ನು ಅರಿಯುವುದೇ ಶಿಕ್ಷಣ: ಬಿ ಸೋಮಶೇಖರ ಶೆಟ್ಟಿ

Hindu neighbor gifts plot of land

Hindu neighbour gifts land to Muslim journalist

ಉಜಿರೆ: SDM ಶಿಕ್ಷಣ ಸಂಸ್ಥೆಗಳು ಉತ್ತಮ ಗುಣಮಟ್ಟದ ಮತ್ತು ಮೌಲ್ಯಾಧಾರಿತ ಶಿಕ್ಷಣ ನೀಡುವ ಸಂಸ್ಥೆಗಳ ಪಟ್ಟಿಯಲ್ಲಿ ಅಗ್ರಪಂಕ್ತಿಯಲ್ಲಿದೆ ಯಾವುದೇ ವೃತ್ತಿಗೂ ಅದರದ್ದೇ ಆದ ಮಹತ್ವ ಇದೆ. ವ್ಯಕ್ತಿಯಲ್ಲಿ ಕೀಳರಿಮೆ ಸಲ್ಲದು ದೊರೆತ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಸಾಧಿಸಿ ತೋರಿಸಬೇಕು. ಆಗ ಮಾತ್ರ ಉತ್ತಮ ಜೀವನ ನಡೆಸಲು ಸಾಧ್ಯ. ಜೀವನದಲ್ಲಿ ಸಾಧಿಸಲೇಬೇಕೆಂಬ ಛಲ, ಅಚಲವಾದ ವಿಶ್ವಾಸ, ಶಿಸ್ತು, ಏಕಾಗ್ರತೆ ಮುಖ್ಯ ನಮ್ಮ ಸಾಮರ್ಥ್ಯವನ್ನು ಅರಿಯುವುದೇ ಶಿಕ್ಷಣ, ಇಂತಹ ಶಿಕ್ಷಣ ಬದುಕಿಗೆ ಎಷ್ಟು ಅರ್ಥವನ್ನೂ ಕೊಡಬಹುದು. ಈ ಶಿಕ್ಷಣದೊಂದಿಗೆ ನೈತಿಕ ಶಿಕ್ಷಣವನ್ನು ಅಳವಡಿಸಿಕೊಳ್ಳಿ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆ ಉಜಿರೆ ಇಲ್ಲಿನ 2021-22 ನೇ ಸಾಲಿನ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ SDM ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಶ್ರೀ ಬಿ ಸೋಮಶೇಖರ ಶೆಟ್ಟಿ ಇವರು SDM ಶಿಕ್ಷಣ ಸಂಸ್ಥೆಗಳ ಪರವಾಗಿ ಸ್ವಾಗತಿಸಿ ಶುಭಹಾರೈಸಿದರು.

SDM ಮಹಿಳಾ ಐಟಿಐ ಆವರಣದಲ್ಲಿ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಐಟಿಐಯ ಪ್ರಾಂಶುಪಾಲ ವಿ. ಪ್ರಕಾಶ್ ಕಾಮತ್ ಇವರು ಸಂಸ್ಥೆಯು ನಡೆದು ಬಂದ ದಾರಿ, ಸಂಸ್ಥೆಯ ಬೆಳವಣಿಗೆ ಹಾಗೂ ವಿದ್ಯಾರ್ಥಿಗಳ ಕರ್ತವ್ಯಗಳ ಬಗ್ಗೆ ಮಾಹಿತಿಯನ್ನು ನೀಡಿ ಶುಭ ಹಾರೈಸಿದರು. ಕುಮಾರಿ ರಮ್ಯಾ ನಿರೂಪಿಸಿದ ಈ ಕಾರ್ಯಕ್ರಮದಲ್ಲಿ ಕುಮಾರಿ ಪೂರ್ವಿಕ ಸ್ವಾಗತಿಸಿ, ಕುಮಾರಿ ಸುಶ್ಮಿತಾ ಇವರು ಧನ್ಯವಾದ ನೀಡಿದರು.