Home News ಕಡಬ: ತಲೆ ಬುರುಡೆ, ಕೊಳೆತ ಅಸ್ಥಿ ಪತ್ತೆಯಾದ ಬೆನ್ನಲ್ಲೇ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲು!! |...

ಕಡಬ: ತಲೆ ಬುರುಡೆ, ಕೊಳೆತ ಅಸ್ಥಿ ಪತ್ತೆಯಾದ ಬೆನ್ನಲ್ಲೇ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲು!! | ಪತಿ ನಾಪತ್ತೆಯಾಗಿ ಎರಡು ತಿಂಗಳುಗಳ ಬಳಿಕ ನಾಪತ್ತೆ ದೂರು ದಾಖಲಿಸಿದ ಪತ್ನಿ

Hindu neighbor gifts plot of land

Hindu neighbour gifts land to Muslim journalist

ಗಂಡ ನಾಪತ್ತೆಯಾಗಿ ಎರಡು ತಿಂಗಳ ಬಳಿಕ ಆತನ ಪತ್ನಿ ಠಾಣೆಯಲ್ಲಿ ದೂರು ದಾಖಲಿಸಿದ್ದು ಕಡಬ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.

ಕಡಬ ತಾಲೂಕಿನ ಕುಂತೂರುಗ್ರಾಮದ ಎರ್ಮಾಳ ಎಂಬಲ್ಲಿನ ಸತೀಶ್(50)ನಾಪತ್ತೆಯಾದ ವ್ಯಕ್ತಿಯಾಗಿದ್ದು ಕಳೆದ ಆಗಸ್ಟ್ ತಿಂಗಳಿನಲ್ಲಿ ಮನೆಯಿಂದ ಹೊರಹೋದವರು ವಾಪಸ್ಸು ಮನೆಗೆ ಬಂದಿಲ್ಲ ಎಂದು ಸತೀಶ್ ಪತ್ನಿ ಗೀತಾ ನಿನ್ನೆ ಕಡಬ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.

ಕೊಳೆತ ಬುರುಡೆ, ದೇಹ ಪತ್ತೆಯಾದ ಸುದ್ದಿ ಬಳಿಕ ದೂರು ಕೊಟ್ಟರೇ ಪತ್ನಿ?!!

ಕೆಲ ದಿನಗಳ ಹಿಂದೆ ಇದೇ ಪರಿಸರದಲ್ಲಿ ಕಾಡಿನಿಂದ ಮಳೆನೀರಿನಲ್ಲಿ ಕೊಳೆತ ಅಸ್ಥಿ, ತಲೆಯ ಬುರುಡೆ ಕೊಚ್ಚಿಕೊಂಡು ಬಂದಿದ್ದು ಇಡೀ ಕಡಬ ತಾಲೂಕಿನಲ್ಲಿ ಸುದ್ದಿಯಾಗಿತ್ತು. ಆದರೆ ಎರಡು ತಿಂಗಳಿನಿಂದ ನಾಪತ್ತೆಯಾಗಿದ್ದ ಪತಿಯ ದೇಹ ಕೊಳೆತಿರಬಹುದೇ ಎಂಬ ಅನುಮಾನದಿಂದ ನಿನ್ನೆ ಪತ್ನಿ ಕಡಬ ಪೊಲೀಸರ ಮೊರೆ ಹೋಗಿದ್ದು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಕುಡಿತದ ಚಟವಿದ್ದ ಸತೀಶ್ ಹಲವು ಬಾರಿ ಮನೆಯಲ್ಲಿ ಜಗಳ ಮಾಡಿ ಹೇಳದೆ ಮನೆ ಬಿಡುತ್ತಿದ್ದೂ,ಈ ಬಾರಿ ಕೂಡಾ ಇದೇ ರೀತಿ ಹೋಗಿರಬಹುದೆಂದು ನಂಬಿದ್ದೆ,ಆದರೆ ಅಸ್ಥಿ,ತಲೆ ಬುರುಡೆ ಸಿಕ್ಕಿದ ಸುದ್ದಿ ತಿಳಿದು ಗಾಬರಿಗೊಂಡು ಪ್ರಕರಣ ದಾಖಲಿಸಿದ್ದಾಗಿ ತಿಳಿಸಿದ್ದಾರೆ.ಸದ್ಯ ಪ್ರಕರಣದ ಸುತ್ತ ಹಲವು ಅನುಮಾನಗಳು ಎದ್ದಿವೆ.

ಬೆಳ್ತಂಗಡಿ| ಅಕ್ರಮ ಮರಳುಗಾರಿಕೆ ವ್ಯಾಪಕ | ಅಧಿಕೃತ ಟೆಂಡರ್‌ದಾರರಿಗೆ ಸಮಸ್ಯೆ