ಕೊಳ್ತಿಗೆ ಗ್ರಾ.ಪಂ. ವ್ಯಾಪ್ತಿಯಲ್ಲಿ 1 ಕೋಟಿ ರೂ ಅನುದಾನದ ವಿವಿಧ ರಸ್ತೆಗಳ ಕಾಮಗಾರಿಗಳಿಗೆ ಶಾಸಕರಿಂದ ಚಾಲನೆ, ಉದ್ಘಾಟನೆ

ಪಾಲ್ತಾಡಿ : ಕೊಳ್ತಿಗೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಶಾಸಕರ ಅನುದಾನದಡಿಯಲ್ಲಿ ಮಂಜೂರಾದ ಸುಮಾರು 1 ಕೋಟಿ ರೂ ವೆಚ್ಚದಲ್ಲಿ ನಡೆಯುವ ವಿವಿಧ ರಸ್ತೆಗಳ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಹಾಗೂ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಗ್ರಾಮದ ಮಾವಿನಕಟ್ಟೆ-ಕಲ್ಲರ್ಪೆ-ದುಗ್ಗಳ ರಸ್ತೆಯ ರೂ. 50 ಲಕ್ಷ ವೆಚ್ಚದ ಹೊಸ ಡಾಮರೀಕರಣ ಹಾಗೂ ರೂ.10 ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆಯ ಗುದ್ದಲಿ ಪೂಜೆ ಮತ್ತು ಈಗಾಗಲೇ ಪೂರ್ಣಗೊಂಡಿರುವ ರೂ. 15 ಲಕ್ಷ ವೆಚ್ಚದ ಕಾಂಕ್ರೀಟೀಕರಣ ರಸ್ತೆ ಉದ್ಘಾಟನೆಯನ್ನು ಶಾಸಕ ಸಂಜೀವ ಮಠಂದೂರು ಅವರು ನೆರವೇರಿಸಿದರು. ಈ ಸಂದರ್ಭದಲ್ಲಿ ಮಾವಿನಕಟ್ಟೆ-ಕಲ್ಲರ್ಪೆ-ದುಗ್ಗಳ ರಸ್ತೆಯಲ್ಲಿ ಕಾರ್ಯಕರ್ತರು ವಾಹನಗಳ ರ‌್ಯಾಲಿಯೊಂದಿಗೆ ಶಾಸಕರನ್ನು ವಿಶೇಷವಾಗಿ ಸ್ವಾಗತಿಸಿದರು.
ಪೆರ್ಲಂಪಾಡಿ-ಸುಬ್ಬನಡ್ಕ ರಸ್ತೆಗೆ ರೂ.10 ಲಕ್ಷ, ಪೆರ್ಲಂಪಾಡಿ-ಕುದ್ಕುಳಿ ರಸ್ತೆಗೆ ರೂ. 10 ಲಕ್ಷ, ಕುಂಟಿಕಾನ-ಅಲಸಂಡೆ ಮಜಲು ರಸ್ತೆಗೆ ರೂ. 10 ಲಕ್ಷ, ಸರಸ್ವತಿಮೂಲೆ-ಮಣಿಕ್ಕರ ರಸ್ತೆಗೆ ರೂ. 10 ಲಕ್ಷ ಅನುದಾನ ನೀಡಿ ರಸ್ತೆಯ ಗುದ್ದಲಿ ಪೂಜೆಯನ್ನು ಶಾಸಕರು ನೆರವೇರಿಸಿದರು.

ಉದ್ಘಾಟನೆ ಹಾಗೂ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕರು ಗ್ರಾಮಸ್ಥರಿಂದ ಬಂದ ಬೇಡಿಕೆಗೆ ಅನುಗುಣವಾಗಿ ಅಭಿವೃದ್ಧಿ ಕಾಮಗಾರಿ ನಡೆಸಲಾಗುತ್ತಿದೆ. ಕಾಮಗಾರಿ ಗುಣಮಟ್ಟದ ಬಗ್ಗೆ ಆಯಾ ಪ್ರದೇಶದ ಗ್ರಾಮಸ್ಥರು ಸಹಾ ಮುಂಜಾಗ್ರತೆ ವಹಿಸಬೇಕು. ಮುಂದಿನ ದಿನಗಳಲ್ಲಿ ಇನ್ನಷ್ಟು ಗ್ರಾಮದ ರಸ್ತೆಯ ಅಭಿವೃದ್ಧಿಗೆ ಅನುದಾನ ನೀಡುವುದರ ಜೊತೆಗೆ ಗ್ರಾಮಸ್ಥರ ಬೇಡಿಕೆ ಪೂರೈಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ಪುತ್ತೂರು ಎ.ಪಿ.ಎಂ.ಸಿ ನಿರ್ದೇಶಕ ತೀರ್ಥಾನಂದ ಗೌಡ ದುಗ್ಗಳ, ಕೊಳ್ತಿಗೆ ಬಿಜೆಪಿ ಶಕ್ತಿ ಕೇಂದ್ರದ ಸಂಚಾಲಕರಾದ ಸತೀಶ್ ಪಾಂಬಾರು, ಕೊಳ್ತಿಗೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ನಾಗವೇಣಿ, ಸದಸ್ಯರಾದ ಯತೀಂದ್ರ ಗೌಡ ಕೊಚ್ಚಿ, ಚಂದ್ರಾವತಿ ಕೆಮ್ಮತಕಾನ, ಲತಾ ಕೋರಿಕ್ಕಾರ್, ಅಕ್ಕಮ್ಮ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಗಿರಿಜಾ ಧನಂಜಯ ಪೂಜಾರಿ, ಮಾಜಿ ಗ್ರಾಮ ಪಂಚಾಯತ್ ಸದಸ್ಯರುಗಳಾದ ಶಿವರಾಮ ಭಟ್ ಬಿರ್ಣಕಜೆ, ಸುಧೀರ್ ಕಟ್ಟಪುಣಿ, ಕೆ.ಡಿ.ಪಿ ಸದಸ್ಯರಾದ ಭಾಸ್ಕರ್ ರೈ ಕಂಟ್ರಮಜಲು, ಬಾಯಂಬಾಡಿ ಶ್ರೀ ಷಣ್ಮುಖದೇವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನೇಮಿರಾಜ್ ಪಾಂಬಾರು, ಗ್ರಾಮದ ಬಿಜೆಪಿ ಬೂತ್ ಅಧ್ಯಕ್ಷರಾದ ಶಿವಪ್ರಸಾದ್ ಕುರ್ಮಕೋಡಿ, ರತ್ನಾಕರ ಗೌಡ ಪೆರ್ಲಂಪಾಡಿ, ಶ್ರೀನಿವಾಸ ದೊಡ್ಡಮನೆ, ರಜನೀಶ್ ಬೇರಿಕೆ, ಜನಾರ್ದನ ನಾಯ್ಕ, ಕಾರ್ಯದರ್ಶಿಗಳಾದ ಹರಿಪ್ರಸಾದ್ ಆಂತಿಕಡಲು, ಅಶೋಕ್ ಒರ್ಕೊಂಬು, ವೆಂಕಟ್ರಮಣ ಆಚಾರಿ, ಭರತ್ ಮಣಿಕ್ಕರ, ಬಿಜೆಪಿ ಯುವ ಮೋರ್ಚಾ ಪುತ್ತೂರು ಗ್ರಾಮಾಂತರ ಮಂಡಲದ ಉಪಾಧ್ಯಕ್ಷ ಶೋಭಿತ್ ಕೆಮ್ಮಾರ, ಬಿಜೆಪಿ ಯುವ ಮೋರ್ಚಾ ನರಿಮೊಗರು ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿಯಾದ ಮಂಜುನಾಥ್ ದುಗ್ಗಳ, ಬಿಜೆಪಿ ಮುಖಂಡರುಗಳು, ಪಕ್ಷದ ವಿವಿಧ ಜವಾಬ್ದಾರಿ ಹೊಂದಿರುವ ಸದಸ್ಯರುಗಳು, ಬಿಜೆಪಿ ಯುವ ಮೋರ್ಚಾದ ಪದಾಧಿಕಾರಿಗಳು, ಸದಸ್ಯರುಗಳು,‌ ಪಕ್ಷದ ಕಾರ್ಯಕರ್ತರು, ಊರಿನ ನಾಗರಿಕರು ಪಾಲ್ಗೊಂಡಿದ್ದರು.

Leave A Reply

Your email address will not be published.