Home Breaking Entertainment News Kannada ಮಲಯಾಳಂ ಚಿತ್ರರಂಗದ ಖ್ಯಾತ ನಟ ನೆಡುಮುಡಿ ವೇಣು ಇನ್ನಿಲ್ಲ

ಮಲಯಾಳಂ ಚಿತ್ರರಂಗದ ಖ್ಯಾತ ನಟ ನೆಡುಮುಡಿ ವೇಣು ಇನ್ನಿಲ್ಲ

Hindu neighbor gifts plot of land

Hindu neighbour gifts land to Muslim journalist

ತಿರುವನಂತಪುರಂ: ಮಲಯಾಳಂ ಚಿತ್ರರಂಗದ ಖ್ಯಾತ ನಟ ನೆಡುಮುಡಿ ವೇಣು (73) ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಮಳಯಾಳ ಮನೋರಮಾ ವರದಿ ಮಾಡಿದೆ.

ಭಾರತೀಯ ಸಿನಿಮಾ ಕ್ಷೇತ್ರದಲ್ಲೇ ಉತ್ತಮ ನಟರ ಸಾಲಿನಲ್ಲಿ ಅವರು ಸ್ಥಾನ ಪಡೆದಿದ್ದರು. 500ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ವೇಣು ವಿಲನ್, ಕಾಮಿಡಿಯನ್ ಸೇರಿದಂತೆ ಹಲವಾರು ಪೋಷಕ ಪಾತ್ರಗಳಲ್ಲಿ ನಟಿಸಿ ಜನಮನ್ನಣೆ ಪಡೆದಿದ್ದರು.

ತಮ್ಮ ವಿಭಿನ್ನ ನಟನಾ ಶೈಲಿಯಿಂದ ಲಕ್ಷಾಂತರ ಅಭಿಮಾನಿಗಳನ್ನು ಸೃಷ್ಟಿಸಿದ್ದ ವೇಣು ಮೂರು ಬಾರಿ ರಾಷ್ಟ್ರೀಯ ಪುಸ್ಕಾರ ಹಾಗೂ ಆರು ರಾಜ್ಯ ಪುರಸ್ಕಾರವನ್ನು
ತಮ್ಮದಾಗಿಸಿಕೊಂಡಿದ್ದರು. ನಿರ್ದೇಶಕರಾಗಿಯೂ, ಚಿತ್ರಕಥೆ

ಬರಹಗಾರರಾಗಿಯೂ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದರು.ಭಾರತೀಯ ಚಿತ್ರರಂಗದ ಹಲವು ನಟರು ನೆಡುಮುಡಿ ವೇಣು ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.