ಮುಖವಿಲ್ಲದೇ ಜನಿಸಿದ ಹೆಣ್ಣು ಮಗು | ಕೆಲವು ಗಂಟೆ ಬದುಕಬೇಕಾಗಿದ್ದ ಈ ಮಗು ವೈದ್ಯಕೀಯ ವಿಜ್ಞಾನದ ಭವಿಷ್ಯವನ್ನೇ ತಲೆಕೆಳಗೆ ಮಾಡಿದ್ದಾಳೆ !! | ಈಗ ಹೇಗಿದ್ದಾಳೆ ಗೊತ್ತಾ ಈಕೆ ??
ಜೀವನ ಎಂಬುದು ದೇವರು ಬರೆದ ಹಣೆಬರಹವೆಂದೇ ಅಂದುಕೊಳ್ಳಬಹುದು. ಯಾಕಂದ್ರೆ ಇಲ್ಲಿ ಹುಟ್ಟು ಮತ್ತು ಸಾವು ಮನುಷ್ಯನ ಕೈಯಲ್ಲಿಲ್ಲ. ದೇವರು ಬಯಸಿದ್ರೆ, ಸತ್ತವರೂ ಕೂಡ ಮತ್ತೆ ಹುಟ್ಟಿ ಜೀವ ಮರಳಿ ಬರಬಹುದು.ಇನ್ನು ಕೂತಲ್ಲೇ ವ್ಯಕ್ತಿಯೊಬ್ಬನು ಪ್ರಾಣವೂ ಹೋಗಬಹುದು.ಆದ್ರೆ,ಇದಕ್ಕೂ ಮೀರಿದ ವಿಸ್ಮಯಕಾರಿ ಘಟನೆ ದಕ್ಷಿಣ ಅಮೆರಿಕಾದ ಬ್ರೆಜಿಲ್ ನಲ್ಲಿ ಬೆಳಕಿಗೆ ಬಂದಿದೆ.
ಹೌದು. ಇಲ್ಲಿ ನಡೆದಿರೋದು ಪವಾಡವೇ ಸರಿ. ಅಷ್ಟಕ್ಕೂ ಇಲ್ಲಿ ನಡೆದಿದ್ದೇನೆಂದು ನೀವೇ ನೋಡಿ.ಹೆಣ್ಣು ಮಗುವೊಂದು ಮುಖವಿಲ್ಲದೆ ಜನಿಸಿದ್ದು, ವೈದ್ಯರು ಅದನ್ನ ಉಳಿಸಲು ನಿರಾಕರಿಸಿದ್ದಾರೆ. ಆದ್ರೆ, ನಂತ್ರ ನಡೆದಿದ್ದು ಮಾತ್ರ ಪವಾಡವೇ.
ಹೌದು, ಈ ಮಗು ವೈದ್ಯಕೀಯ ವಿಜ್ಞಾನದ ಭವಿಷ್ಯವನ್ನ ತಲೆಕೆಳಗಾಗಿ ಮಾಡಿ,ಬದುಕುಳಿದಿದ್ದಾಳೆ. ಮಾಧ್ಯಮ ವರದಿಗಳ ಪ್ರಕಾರ, ಮಗುವಿನ ಜನನದ ನಂತರ, ʼಈ ಮಗು ಕೆಲವು ಗಂಟೆಗಳ ಅತಿಥಿʼ ಎಂದ ವೈದ್ಯರು, ಜೀವ ಉಳಿಸಲು ಸಾಧ್ಯವಿಲ್ಲವೆಂದು ಹೇಳಿದರು. ವೈದ್ಯರ ಮಾತು ಕೇಳಿ ಕಾಂಗಾಲಾದ ಪೋಷಕರು, ಆಕೆಯ ಅಂತ್ಯಕ್ರಿಯೆಗೆ ಮುಂಚಿತವಾಗಿಯೇ ವ್ಯವಸ್ಥೆ ಶುರು ಮಾಡಿದ್ರು. ಅದ್ರಂತೆ, ಕುಟುಂಬದವರು ಮಗುವಿನ ಅಂತಿಮ ವಿಧಿವಿಧಾನಗಳನ್ನ ಮಾಡಲು ಆರಂಭಿಸಿದಾಗ ಯಾರೂ ಊಹಿಸಲೂ ಸಾಧ್ಯವಾಗದಂತಹ ಪವಾಡ ಸಂಭವಿಸಿತು. ಮುಖವಿಲ್ಲದ ಈ ಮಗು ಬದುಕುಳಿಯಿತು. ಅದಕ್ಕೀಗಾ ಒಂಬತ್ತು ವರ್ಷ ವಯಸ್ಸು.
ಬ್ರೆಜಿಲ್‌ನ ಬಾರ್ರಾ ಡಿ ಸಾವೊ ಫ್ರಾನ್ಸಿಸ್ಕೋದ ವಿಟ್ಟೋರಿಯಾ ಮಾರ್ಚಿಯೊಲಿ ಒಂಬತ್ತು ವರ್ಷಗಳ ಹಿಂದೆ ಬಹಳ ಅಪರೂಪದ ಸ್ಥಿತಿಯಲ್ಲಿ ಜನಿಸಿದರು. ವಿಟ್ಟೋರಿಯಾ ಮಾರ್ಚಿಯೊಲಿಗೆ ಟ್ರೀಚರ್ ಕಾಲಿನ್ಸ್ ಸಿಂಡ್ರೋಮ್ ಎಂಬ ರೋಗವಿತ್ತು. ಈ ಕಾಯಿಲೆಯಿಂದಾಗಿ, ಅವಳ ಮುಖದ 40 ಮೂಳೆಗಳು ಬೆಳೆಯಲು ಸಾಧ್ಯವಾಗಲಿಲ್ಲ. ಕಾಯಿಲೆಯಿಂದಾಗಿ, ಮಗುವಿನ ಕಣ್ಣು, ಬಾಯಿ ಮತ್ತು ಮೂಗು ಬೆಳವಣಿಗೆಯಾಗಿಲ್ಲ. ಕೆಲವು ಗಂಟೆಗಳಲ್ಲಿ ಮಗು ಸಾವನ್ನಪ್ಪುತ್ತೆ ಎಂದು ವೈದ್ಯರು ಹೇಳಿದ್ದರು. ಆದ್ರೆ, ಎರಡು ದಿನಗಳ ನಂತ್ರ ಮಗುವನ್ನ ತಜ್ಞರ ಮೇಲ್ವಿಚಾರಣೆಯಲ್ಲಿ ಇನ್ನೊಂದು ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಯಲ್ಲಿ ಒಂದು ವಾರದ ವೀಕ್ಷಣೆಯ ನಂತರ, ಆಸ್ಪತ್ರೆಯಿಂದ ವಯಸ್ಸು ಆರೈಕೆಗೆ ಬಿಡುಗಡೆ ಮಾಡಲಾಯಿತು.
ಈ ಮಗು ಕ್ರಮೇಣ ದೊಡ್ಡದಾಯ್ತು. ಆಕೆಯ ಕಣ್ಣು, ಮೂಗು ಮತ್ತು ಬಾಯಿಗಾಗಿ ಎಂಟು ಶಸ್ತ್ರಚಿಕಿತ್ಸೆಗಳನ್ನ ಮಾಡಲಾಯಿತು. ಇನ್ನು ಇತ್ತೀಚೆಗಷ್ಟೇ, ಮಗುವನ್ನ ಅಮೆರಿಕದ ಟೆಕ್ಸಾಸ್‌ನ ಆಸ್ಪತ್ರೆಯಲ್ಲಿ ಮತ್ತೊಂದು ಶಸ್ತ್ರಚಿಕಿತ್ಸೆಗೆ ಒಳಪಡಿಸಿತು. ಇನ್ನು ಆಕೆಯ ಪೋಷಕರಾದ ರೊನಾಲ್ಡೊ ಮತ್ತು ಜೋಸೆಲಿನ್ ಜನರ ನೆರವಿನಿಂದ ಮಗುವಿಗೆ ಹೊಸ ಜೀವನವನ್ನ ನೀಡುವಲ್ಲಿ ನಿರತರಾಗಿದ್ದಾರೆ. ಅದ್ರಂತೆ, ವಿಟ್ಟೋರಿಯಾ ಮಾರ್ಚಿಯೊಲಿ ಎಂಬ ಹೆಸರಿನ ಈ ಹುಡುಗಿ ಆಸ್ಪತ್ರೆಯಲ್ಲಿ ತನ್ನ ಒಂಬತ್ತನೇ ಹುಟ್ಟುಹಬ್ಬವನ್ನ ಕೂಡ ಆಚರಿಸಿಕೊಂಡಳು.
ಬೆಳ್ತಂಗಡಿ| ಅಕ್ರಮ ಮರಳುಗಾರಿಕೆ ವ್ಯಾಪಕ | ಅಧಿಕೃತ ಟೆಂಡರ್‌ದಾರರಿಗೆ ಸಮಸ್ಯೆ