ವಿಶ್ವದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಭಾರತದಲ್ಲಿ ತಯಾರಾಗಲಿದೆ ಮಲೇರಿಯಾ ಲಸಿಕೆ | ವಿಶ್ವದ ಚಿತ್ತ ಇದೀಗ ಭಾರತದತ್ತ!!

ಭಾರತ ಈಗಾಗಲೇ ಕೊರೋನಾ ಲಸಿಕೆ ತಯಾರಿಸಿ ಅದೆಷ್ಟೋ ರಾಷ್ಟ್ರಗಳಿಗೂ ಕಳುಹಿಸಿ, ಎಲ್ಲರೂ ಭಾರತದತ್ತ ತಿರುಗಿನೋಡುವಂತೆ ಮಾಡಿದೆ. ಇದೀಗ ಮತ್ತೆ ಅದೇ ಹಾದಿಯಲ್ಲಿ ಮುನ್ನುಗ್ಗುವ ಇನ್ನೊಂದು ಪ್ರಯತ್ನ ಮಾಡಿದೆ. ವಿಶ್ವದಲ್ಲಿಯೇ ಮೊದಲ ಬಾರಿಗೆ ಮಲೇರಿಯಾ ಲಸಿಕೆಯನ್ನು ಭಾರತ ತಯಾರಿಸಲಿದ್ದು, ಈ ನಿಟ್ಟಿನಲ್ಲಿ ಹೈದರಾಬಾದ್‌ನಲ್ಲಿರುವ ಭಾರತ್ ಬಯೋಟೆಕ್ ಕಂಪೆನಿ ಎಲ್ಲಾ ತಯಾರಿ ನಡೆಸಿದೆ ಎಂದು ತಿಳಿದುಬಂದಿದೆ.

ಮಲೇರಿಯಾ ರೋಗ ನಿರ್ಮೂಲನೆಗೆ ಬಳಸುವ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಇತ್ತೀಚಿಗೆ ಒಪ್ಪಿಗೆ ಸೂಚಿಸಿತ್ತು. ಲಸಿಕೆ ಸಂಶೋಧನೆಯ ವೇಳೆ ಸುಮಾರು 8 ಲಕ್ಷ ಮಕ್ಕಳಿಗೆ ಕನಿಷ್ಟ ಒಂದು ಡೋಸ್ ಲಸಿಕೆಯನ್ನು ನೀಡಿ ಉತ್ತಮ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಈ ಅನುಮತಿ ನೀಡಿದೆ. ಇದರಿಂದಾಗಿ ಲಸಿಕೆ ತಯಾರಿಕೆಗೆ ಕಂಪೆನಿ ಸಿದ್ಧತೆ ನಡೆಸಿದ್ದು, ಜಗತ್ತಿನ ಕಣ್ಣು ಭಾರತದತ್ತ ನೆಟ್ಟಿದೆ.

ಈ ಕುರಿತು ಕಂಪನಿಯ ಅಂತಾರಾಷ್ಟ್ರೀಯ ವ್ಯವಹಾರ ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಡಾ.ರೆಚಸ್ ಮಾಹಿತಿ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಟ್ವಿಟ್ ಮಾಡಿರುವ ರೆಚಸ್, ಲಸಿಕೆ ಹೇಗೆ ಉತ್ಪಾದನೆ ಆಗಲಿದೆ ಎಂದು ತಿಳಿಸಿದ್ದಾರೆ. ‘ಇಂಗ್ಲೆಂಡಿನ ಗ್ಲಾಕ್ಲೋಸ್ಮಿತ್‌ಸ್ಟೈನ್’ ಕಂಪೆನಿಯ ಸಹಭಾಗಿತ್ವದಲ್ಲಿ ಭಾರತ್ ಬಯೋಟೆಕ್ ಮಲೇರಿಯಾ ಲಸಿಕೆ ಉತ್ಪಾದನೆ ಮಾಡಲಿದೆ ಎಂದು ಅವರು ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದಾರೆ.

2028ರವರೆಗೆ ವರ್ಷಕ್ಕೆ ಒಂದು ಕೋಟಿ ಮಲೇರಿಯಾ ಲಸಿಕೆ ಡೋಸ್ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಗ್ಲಾ ಕ್ರೈನ್ ಕಂಪೆನಿ ಜತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.
ಇದಾಗಲೇ ಈ ಕಂಪೆನಿಯು ‘ಆರ್‌ಟಿಎಸ್‌ಎಸ್’ ಎಂಬ ಮಲೇರಿಯಾ ಲಸಿಕೆ ಕಂಡುಹಿಡಿಯುವ ನಿಟ್ಟಿನಲ್ಲಿ ಮುನ್ನ ಸಾಧಿಸಿದ್ದು, ಭಾರತದ ಇದರ ಕೈಜೋಡಿಸಲಿದೆ ಎಂದು ರೆಚಸ್ ತಿಳಿಸಿದ್ದಾರೆ.

ಮಲೇರಿಯಾ ಬಾಧಿತ ದೇಶಗಳಲ್ಲಿ ಆಫ್ರಿಕಾ ಮುಂಚೂಣಿಯಲ್ಲಿದೆ. ಆಫ್ರಿಕಾ ಸೇರಿದಂತೆ ಮಲೇರಿಯಾದಿಂದ ತೀವ್ರವಾಗಿ ಬಾಧಿಸಲ್ಪಟ್ಟ ರಾಷ್ಟ್ರಗಳಿಗೆ ಭಾರತದ ಲಸಿಕೆ ನೀಡಲು ವಿಶ್ವ ಆರೋಗ್ಯ ಸಂಸ್ಥೆ ಸಮ್ಮತಿಸಿದೆ ಎಂದು ಅವರು ಹೇಳಿದ್ದಾರೆ.

Leave A Reply

Your email address will not be published.