Home Fashion ವಾಶ್ ರೂಂ ಇಲ್ಲದ ಗುಡಿಸಲಿನ ಬೆಲೆ ಎಷ್ಟು ಗೊತ್ತಾ??! | ಬೆಲೆ ಕೇಳಿದ್ರೆ ಶಾಕ್ ಆಗುವುದಂತೂ...

ವಾಶ್ ರೂಂ ಇಲ್ಲದ ಗುಡಿಸಲಿನ ಬೆಲೆ ಎಷ್ಟು ಗೊತ್ತಾ??! | ಬೆಲೆ ಕೇಳಿದ್ರೆ ಶಾಕ್ ಆಗುವುದಂತೂ ಪಕ್ಕಾ

Hindu neighbor gifts plot of land

Hindu neighbour gifts land to Muslim journalist

ಇತ್ತೀಚಿನ ದಿನಗಳಲ್ಲಿ ದೊಡ್ಡ ದೊಡ್ಡ ಮನೆಯನ್ನು ಇಷ್ಟ ಪಡುವವರಿಗಿಂತಲೂ ಮನಸ್ಸಿಗೆ ಮುದ ನೀಡುವ ಹಸಿರಸಿರಿನಿಂದ ಕಂಗೊಳಿಸುವ ಪ್ರದೇಶವೇ ಇಷ್ಟಪಡುತ್ತಾರೆ.ಇವಾಗ ಅಂತೂ ಕೆಲವರು ಆಸ್ತಿಯ ರೂಪದಲ್ಲಿ ಹಣವನ್ನ ಅಡಗಿಸುವುದು ಉತ್ತಮ ಮಾರ್ಗ ಅಂತಾ ಅನೇಕರು ಭಾವಿಸುತ್ತಾರೆ. ಯಾಕಂದ್ರೆ, ಅದರಿಂದಾಗಿ ಕಾಲಾನಂತರದಲ್ಲಿ ಲಾಭ ಪಡೆಯಬಹುದು ಎಂಬುದು ಉದ್ದೇಶ.

ಹಾಗಾಗಿನೇ ಕೆಲವರು ರಿಯಲ್ ಎಸ್ಟೇಟ್ʼನಲ್ಲಿ ಹಣ ಖರ್ಚು ಮಾಡಿ, ಫ್ಲಾಟ್ ಮತ್ತು ಮನೆಗಳನ್ನ ಖರೀದಿಸುತ್ತಾರೆ.ಏತನ್ಮಧ್ಯೆ, ವಿವಿಧ ದೇಶಗಳಲ್ಲಿ ಅನೇಕ ರೀತಿಯ ಮನೆ ಮಾರಾಟ ಮತ್ತು ಖರೀದಿಗಳಿವೆ. ಕೆಲವೊಮ್ಮೆ ಕೆಲವೊಂದು ವಿಚಿತ್ರ ಕಾರಣಗಳಿಗಾಗಿ ಪ್ರಪಂಚದಾದ್ಯಂತ ಸುದ್ದಿಯಾಗುತ್ವೆ. ಅದ್ರಂತೆ, ಯುಕೆಯ ವೇಲ್ಸ್ ಸ್ನೋಡೋನಿಯಾದಲ್ಲಿ ಅಂತಹದ್ದೇ ಗುಡಿಸಲಿದೆ. ಸಧ್ಯ ಈ ಮನೆಯ ಬೆಲೆ ಮತ್ತು ವಿಶೇಷತೆಗಳು ಸಧ್ಯ ವೈರಲ್ ಆಗಿವೆ.

ಈ ಮನೆ ಪ್ರವಾಸಿಗರಿಗೆ ಸ್ವರ್ಗವಾಗಿದೆ. ಯಾಕಂದ್ರೆ, ಈ ಗುಡಿಸಲಿನಿಂದ ನೀವು ಸರೋವರ ಮತ್ತು ಪರ್ವತ ಶಿಖರಗಳ ನೈಸರ್ಗಿಕ ಸೌಂದರ್ಯವನ್ನ ಆನಂದಿಸಬಹುದು. ಅತಿ ಸಣ್ಣ ಜಮೀನಿನಲ್ಲಿ ನಿರ್ಮಿಸಿರುವ ಈ ಮನೆಯ ಬೆಲೆ 36 ಲಕ್ಷ ರೂಪಾಯಿ. ಆದ್ರೆ, ಈ ಮನೆಗೆ ಶೌಚಾಲಯ ಸೌಲಭ್ಯವಷ್ಟೇ ಅಲ್ಲ ನೀರಿನ ಸೌಲಭ್ಯವೂ ಇಲ್ಲ.

ನೀವು ಪ್ರವೇಶಿಸಿದ ತಕ್ಷಣ, ಸಭಾಂಗಣದಲ್ಲಿ ಎರಡು ಸೋಫಾಗಳು ಕಾಣಿಸಿಕೊಳ್ಳುತ್ತವೆ. ಇದಲ್ಲದೇ ಮಲಗುವ ಕೋಣೆ ಇದೆ. ಇದು ವಾಲ್ ಮೌಂಟೆಡ್ ಬೀರು, ಕುರ್ಚಿ, ಜೊತೆಗೆ ಮಡಿಸುವ ಹಾಸಿಗೆ ಹೊಂದಿದೆ. ಆದಾಗ್ಯೂ, ಅನೇಕ ಜನರು ಈ ಮನೆಯನ್ನು ಖರೀದಿಸಲು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಆದ್ರೂ ಗುಡಿಸಲು ಖರೀದಿಸುವವರಿಗೆ ವಾಶ್‌ರೂಂ ಸೌಲಭ್ಯ ಇರೋದಿಲ್ಲ ಅನೋದು ಸಾಮಾಜಿಕ ಜಾಲತಾಣಗಳಲ್ಲಿ ಹಾಟ್ ಟಾಪಿಕ್ ಆಗಿದೆ.