ರೆಸ್ಟೋರೆಂಟ್ ನಲ್ಲಿ ಗುಲಾಬ್ ಜಾಮೂನ್ ನೀಡಿದ ತಟ್ಟೆಯಲ್ಲಿ ತೇಲುತ್ತಿತ್ತು ಜಿರಳೆ !! | ತಪ್ಪೊಪ್ಪಿಕೊಳ್ಳದ ರೆಸ್ಟೋರೆಂಟ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಗ್ರಾಹಕ
ಕೆಲವೊಮ್ಮೆ ರೆಸ್ಟೋರೆಂಟ್ಗಳಲ್ಲಿ ಆಹಾರದಲ್ಲಿ ಸೊಳ್ಳೆ ನೊಣ ಬಿದ್ದಿರುವುದು ಮಾಮೂಲು. ಅದನ್ನು ಆಗಲೇ ಮಾಲಕರಿಗೆ ಹೇಳಿ ಬೇರೆ ಆಹಾರ ತರಿಸಿಕೊಂಡು ತಿನ್ನುವವರು ಹಲವರಿದ್ದಾರೆ. ಆದರೆ ಇಲ್ಲೊಂದು ರೆಸ್ಟೋರೆಂಟ್ ನಲ್ಲಿ ನಡೆದಿದ್ದ ಘಟನೆ ಎಲ್ಲರಿಗೂ ಆಶ್ಚರ್ಯ ತರುವಂತಿದೆ.
ಬೆಂಗಳೂರಿನ ರೆಸ್ಟೋರೆಂಟ್‌ನಲ್ಲಿ ಗ್ರಾಹಕನೊಬ್ಬನಿಗೆ ಜಿರಳೆ ಬಿದ್ದಿರುವ ಗುಲಾಬ್ ಜಾಮೂನ್ ನೀಡಲಾಗಿತ್ತು. ಸದ್ಯ ಈ ತಪ್ಪಿಗೆ ರೆಸ್ಟೋರೆಂಟ್ ಬೆಲೆ ತೆತ್ತಿದ್ದು, ಗ್ರಾಹಕನಿಗೆ 55 ಸಾವಿರ ರೂಪಾಯಿ ಪಾವತಿಸುವಂತೆ ನ್ಯಾಯಾಲಯ ಆದೇಶ ಹೊರಡಿಸಿದೆ.
ವಾಸ್ತವವಾಗಿ ಈ ಪ್ರಕರಣ 2016 ರಲ್ಲಿ ದಾಖಲಾಗಿದ್ದು. ಗ್ರಾಹಕರು ಗಾಂಧಿನಗರ ಪ್ರದೇಶದ ಕಾಮತ್ ಹೋಟೆಲ್‌ನಲ್ಲಿ ಜಾಮೂನ್ ಆರ್ಡರ್ ಮಾಡಿದ್ದಾರೆ. ನಂತರ ರೆಸ್ಟೋರೆಂಟ್ ಅದನ್ನು ಪೂರೈಸಿತು. ಆದರೆ ಗ್ರಾಹಕನಿಗೆ ನೀಡಿದ ಪ್ಲೇಟ್ ನಲ್ಲಿ ಸತ್ತ ಜಿರಳೆ ಕಂಡುಬಂದಿದೆ. ಇದರ ಫೋಟೋ ತೆಗೆದುಕೊಳ್ಳಲು ಯತ್ನಿಸಿದ ಗ್ರಾಹಕನ ಫೋನನ್ನು ರೆಸ್ಟೋರೆಂಟ್ ಸಿಬ್ಬಂದಿ ಕಸಿದುಕೊಂಡಿದ್ದಾರೆ. ಹಾಗೆಯೇ ಅವರ ಮೇಲೆ ಹಲ್ಲೆ ಕೂಡ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
2 ವರ್ಷಗಳವರೆಗೆ ಯಾವುದೇ ಉತ್ತರ ನೀಡದ ರೆಸ್ಟೋರೆಂಟ್!!
ಈ ಇಡೀ ಘಟನೆಯ ನಂತರ, ಗ್ರಾಹಕ ರಾಜಣ್ಣ ಮೊದಲು ಪೊಲೀಸರಿಗೆ ದೂರು ನೀಡಿದರು ಮತ್ತು ನಂತರ ಜಿಲ್ಲಾ ಗ್ರಾಹಕರ ವೇದಿಕೆಯಲ್ಲಿ ವಿಷಯವನ್ನು ಇಟ್ಟರು ಎಂದು ಹೇಳಲಾಗುತ್ತಿದೆ. ಆದರೆ, ರೆಸ್ಟೋರೆಂಟ್ ಮಾಲೀಕರು ಎರಡು ವರ್ಷಗಳ ಕಾಲ ನೋಟಿಸ್ ಗೆ ಪ್ರತಿಕ್ರಿಯೆ ನೀಡಲಿಲ್ಲ. ನಂತರ ನ್ಯಾಯಾಧೀಶರು ಸೇವೆಯಲ್ಲಿನ ಕೊರತೆಯ ಆಧಾರದ ಮೇಲೆ ಸಂತ್ರಸ್ತ ರಾಜಣ್ಣಗೆ 50,000 ರೂ. ಪಾವತಿವಂತೆ ಆದೇಶ ಹೊರಡಿಸಿದ್ದಾರೆ.
ಅದೇ ಸಮಯದಲ್ಲಿ ಕಾಮತ್ ಹೋಟೆಲ್ ಈ ಆದೇಶದ ವಿರುದ್ಧ ಕರ್ನಾಟಕ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಮೇಲ್ಮನವಿ ಸಲ್ಲಿಸಿತು. ಅವರು ತಮ್ಮ ವಿರುದ್ಧದ ಪ್ರಕರಣದ ಬಗ್ಗೆ ತಿಳಿದಿಲ್ಲವೆಂದು ಹೇಳಿಕೊಂಡರು ಮತ್ತು ತೀರ್ಪನ್ನು ಜಾರಿಗೆ ತರುವ ಸೂಚನೆಯ ನಂತರ ಆ ಬಗ್ಗೆ ನಮಗೆ ತಿಳಿದಿದೆ ಎಂದರು. ಇನ್ನು ರೆಸ್ಟೋರೆಂಟ್ ಸಿಬ್ಬಂದಿ ಯಾರು ಕೂಡ ರಾಜಣ್ಣನ ಮೇಲೆ ದಾಳಿ ಮಾಡಿಲ್ಲ ಎಂದು ರೆಸ್ಟೋರೆಂಟ್ ವಾದಿಸಿದೆ ಎಂದು ಹೇಳಲಾಗುತ್ತಿದೆ. ಆದಾಗ್ಯೂ, ನ್ಯಾಯಾಧೀಶರು ರೆಸ್ಟೋರೆಂಟ್ ವಾದಗಳನ್ನು ಒಪ್ಪಿಲಿಲ್ಲ ಮತ್ತು ಜಿಲ್ಲಾ ಗ್ರಾಹಕರ ವೇದಿಕೆಯ ಆದೇಶವನ್ನು ಎತ್ತಿ ಹಿಡಿದರು.
ಹಾಗಾಗಿ ಗ್ರಾಹಕ ರಾಜಣ್ಣನಿಗೆ 55 ಸಾವಿರ ರೂ. ಪರಿಹಾರ ನೀಡಬೇಕೆಂದು ಕೊನೆಗೂ ಕೋರ್ಟ್ ನಿರ್ಧಾರ ಕೈಗೊಂಡಿದೆ. ಐದು ವರ್ಷ ಆತ ನಿರಂತರವಾಗಿ ಹೋರಾಡಿದಕ್ಕೆ ಕೊನೆಗೂ ಫಲ ದೊರೆತಿದೆ.