ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಚಿಕಿತ್ಸೆಗೆ ಸ್ಪಂದಿಸದೇ ಸಾವು

Share the Article

ಪುತ್ತೂರು: ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡಿದ್ದ ಬನ್ನೂರು ಕರ್ಮಲ ನಿವಾಸಿ ವೆಲ್ಡರ್ ನಂದ ಕುಮಾರ್ ಅ.6 ರಂದು ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಕಳೆದ ಮಂಗಳವಾರ ನಂದ ಕುಮಾರ್ ವಿಷ ಪದಾರ್ಥ ಸೇವಿಸಿ ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅಲ್ಲಿಂದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟಿದ್ದಾರೆ. ನಂದ ಕುಮಾರ್ ಅವರು ಪುತ್ತೂರಿನಲ್ಲಿ ವೆಲ್ಲಿಂಗ್ ಕೆಲಸ ನಿರ್ವಹಿಸುತ್ತಿದ್ದ ಅವರು ಬಜರಂಗದಳ ಕರ್ಮಲ ಘಟಕದ ಸಾಪ್ತಮಿಕ್ ಮಿಲನ್ ಪ್ರಮುಖ್ ಜವಾಬ್ದಾರಿಯನ್ನು ಹೊಂದಿದ್ದರು. ಮೃತರು ತಂದೆ ರಿಕ್ಷಾ ಚಾಲಕ ಮೋಹನ್, ತಾಯಿ, ಸಹೋದರಿ, ಸಹೋದರನನ್ನು ಅಗಲಿದ್ದಾರೆ.

Leave A Reply