Home Karnataka State Politics Updates ಇಂದಿರಾ ಗಾಂಧಿ ಅವರನ್ನು ಬಂಧಿಸಿದ ರೀತಿಯಲ್ಲಿಯೇ ಪ್ರಿಯಾಂಕ ಗಾಂಧಿ ಬಂಧನ ಕಾಂಗ್ರೇಸ್ ಕಿಡಿ | ಭ್ರಷ್ಟಾಚಾರ...

ಇಂದಿರಾ ಗಾಂಧಿ ಅವರನ್ನು ಬಂಧಿಸಿದ ರೀತಿಯಲ್ಲಿಯೇ ಪ್ರಿಯಾಂಕ ಗಾಂಧಿ ಬಂಧನ ಕಾಂಗ್ರೇಸ್ ಕಿಡಿ | ಭ್ರಷ್ಟಾಚಾರ ನಿಯಂತ್ರಣದಡಿ ಇಂದಿರಾ ಗಾಂಧಿ ಬಂಧನವಾಗಿತ್ತು, ದೇಶಕ್ಕಾಗಿ ಹೋರಾಟ ಮಾಡಿದ್ದಕ್ಕಲ್ಲ! -ಬಿಜೆಪಿ

Hindu neighbor gifts plot of land

Hindu neighbour gifts land to Muslim journalist

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ಉತ್ತರ ಪ್ರದೇಶದಲ್ಲಿ ಬಂಧಿಸಿರುವ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಹರಿಹಾಯ್ದಿತ್ತು, 1977 ರಲ್ಲಿ ಇಂದಿರಾ ಗಾಂಧಿ ಅವರನ್ನು ಬಂಧಿಸಿದ ರೀತಿಯಲ್ಲಿಯೇ ಪ್ರಿಯಾಂಕಾ ಅವರನ್ನು ಬಂಧಿಸಲಾಗಿದೆ ಎಂದು ಕಾಂಗ್ರೆಸ್ ಕಿಡಿಕಾರಿದೆ.

ಕಾಂಗ್ರೆಸ್ ಹೇಳಿಕೆಗೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ಸಿಗರೇ 1977 ರಲ್ಲಿ ಇಂದಿರಾ ಗಾಂಧಿ‌ ಅವರ ಬಂಧನವಾಗಿದ್ದೇಕೆಂಬುದು ಗೊತ್ತೇ? ಭ್ರಷ್ಟಾಚಾರ, ಆಡಳಿತಯಂತ್ರ ದುರುಪಯೋಗ ಪ್ರಕರಣ ಸಂಬಂಧ ಭಾರತೀಯ ದಂಡ ಸಂಹಿತೆ, ಭ್ರಷ್ಟಾಚಾರ ನಿಯಂತ್ರಣ ಪ್ರಕರಣದಡಿಯಲ್ಲಿ ಬಂಧನಕ್ಕೊಳಗಾಗಿದ್ದರು. ದೇಶಕ್ಕಾಗಿ ಮಾಡಿದ ಹೋರಾಟಕ್ಕಾಗಿ ಬಂಧನವಾಗಿದ್ದಲ್ಲ ಎಂದು ಸ್ಪಷ್ಟೀಕರಣ ನೀಡಿದೆ.

ಕಾಂಗ್ರೆಸ್ಸಿಗರೇ, 3 ಅಕ್ಟೋಬರ್ 1977 ರಲ್ಲಿ ಇಂದಿರಾ ಗಾಂಧಿ ಅವರ ಬಂಧನ ಆಗಿದ್ದೇಕೆ ಎಂಬುದಕ್ಕೆ ಕಾರಣವೇನೆಂದು ತಿಳಿಸುವಿರಾ? ಪ್ರಿಯಾಂಕ ಗಾಂಧಿಯ ಬಂಧನ ಆಗಿದ್ದೇಕೆ ಎಂಬುದಕ್ಕೆ ಕಾರಣ ನಾವು ಕೊಡುತ್ತೇವೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವವರನ್ನು ಬಂಧಿಸಲೇ ಬೇಕಲ್ಲವೇ? ಎಂದು ಬಿಜೆಪಿ ಪ್ರಶ್ನಿಸಿದೆ.