ಎಡಮಂಗಲ : ರಿಕ್ಷಾ ಬೈಕ್ ಡಿಕ್ಕಿ – ಬೈಕ್ ಸವಾರನಿಗೆ ಗಾಯ ಆಸ್ಪತ್ರೆಗೆ ದಾಖಲು

Share the Article

ಕಡಬ : ಎಡಮಂಗಲ ಗ್ರಾಮದ ಮರ್ದೂರಡ್ಕ ಎಂಬಲ್ಲಿ ರಿಕ್ಷಾ ಹಾಗೂ ಬೈಕ್ ಡಿಕ್ಕಿ ಹೊಡೆದುಕೊಂಡು ಬೈಕ್ ಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಅ.5 ರಂದು ನಡೆದಿದೆ.

ಕೇಶವ ಎಂಬವರು ಬೈಕಲ್ಲಿ ಮರ್ದೂರಡ್ಕ ಕಡೆಗೆ ಹೋಗುತ್ತಿದ್ದಾಗ ಎಡಮಂಗಲ ಕಡೆಯಿಂದ ರೋಹಿತ್ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ರಿಕ್ಷಾ ಡಿಕ್ಕಿಹೊಡೆಯಿತು.

ಪರಿಣಾಮ ಬೈಕ್ ಚಾಲಕ ಕೇಶವ ಹಾಗೂ ಬೈಕ್ ರಸ್ತೆಗೆ ಬಿದ್ದು ಕೇಶವರ ಕೈಕಾಲಿಗೆ ಗಾಯವಾಗಿದ್ದು ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ರಿಕ್ಷಾ ಚಾಲಕರ ಮೇಲೆ ದೂರು ದಾಖಲಾಗಿರುವುದಾಗಿ ತಿಳಿದು ಬಂದಿದೆ.

Leave A Reply