Home News ಕಾಲೇಜ್ ಗೆ ಚಕ್ಕರ್ ಹಾಕಿ ಪಾರ್ಕಿನ ಪೊದೆ ಅಲುಗಾಡಿಸಿದ ಹುಡುಗ-ಹುಡುಗಿ | ಸಾರ್ವಜನಿಕರಿಂದ ಭಾರೀ ಆಕ್ರೋಶ...

ಕಾಲೇಜ್ ಗೆ ಚಕ್ಕರ್ ಹಾಕಿ ಪಾರ್ಕಿನ ಪೊದೆ ಅಲುಗಾಡಿಸಿದ ಹುಡುಗ-ಹುಡುಗಿ | ಸಾರ್ವಜನಿಕರಿಂದ ಭಾರೀ ಆಕ್ರೋಶ !

Hindu neighbor gifts plot of land

Hindu neighbour gifts land to Muslim journalist

ಕಾಲೇಜ್ ಗೆ ಚಕ್ಕರ್ ಹೊಡೆದು ಹುಡುಗ-ಹುಡುಗಿಯರು ಪಾರ್ಕ್ನಲ್ಲಿ ಅಸಭ್ಯವಾಗಿ ವರ್ತಿಸುವುದು ಇತ್ತೀಚೆಗೆ ಮಾಮೂಲಾಗಿ ಹೋಗಿದೆ. ಪಾರ್ಕ್ ನಲ್ಲಿ ಯಾರಿದ್ದಾರೆ ಯಾರಿಲ್ಲ ಎಂಬ ಗೋಜಿಗೆ ಹೋಗದೆ ತಮ್ಮ ಲೋಕದಲ್ಲೇ ತೇಲುತ್ತಾ ಇರುತ್ತಾರೆ. ಆದರೆ ಇದು ಸಾರ್ವಜನಿಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇಂತಹ ಘಟನೆ ಇದೀಗ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಮಕ್ಕಳನ್ನು ನಂಬಿ ಪಾಲಕರು ಕಾಲೇಜಿಗೆ ಕಳುಹಿಸಿದರೆ, ಕಾಲೇಜಿಗೆ ಚಕ್ಕರ್ ಹೊಡೆಯುವ ಹುಡುಗ ಹುಡುಗಿಯರು ಪೊದೆ ಮರೆಯಲ್ಲಿ ಅಸಭ್ಯ ವರ್ತನೆಯಲ್ಲಿ ತೊಡಗಿದ್ದ ದೃಶ್ಯ ಚಿಕ್ಕಬಳ್ಳಾಪುರದ ಪಾರ್ಕ್‌ವೊಂದರಲ್ಲಿ ಕಂಡುಬಂದಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಮನೆಯಿಂದ ಪಾಲಕರು ತಮ್ಮ ಮಕ್ಕಳನ್ನು ಕಾಲೇಜಿಗೆ ಕಳುಹಿಸಬೇಕಾದರೆ, ಅವರಿಗೆ ನಮ್ಮ ಮಕ್ಕಳು ಚೆನ್ನಾಗಿ ಕಲಿಯೋದಕ್ಕೆ ಹೊರಗಡೆ ಹೋಗಿದ್ದಾರೆ ಎಂಬ ನಂಬಿಕೆ ಇರುತ್ತದೆ. ಆದರೆ, ವಿದ್ಯಾರ್ಥಿಗಳು ಪಾರ್ಕಿಗೆ ಬಂದು ಪೊದೆ ಮರೆಯಲ್ಲಿ ಬೇಡವಾದ ಕೆಲಸಗಳನ್ನು ಮಾಡಿಕೊಳ್ಳುತ್ತಾ, ಅವರ ಹದಿಹರೆಯದ ವಯಸ್ಸಿನ ಆಸೆಗಳನ್ನು ಈಡೇರಿಸಿಕೊಳ್ಳುತ್ತಿರುವುದು ನಿಜಕ್ಕೂ ಸರಿಯಲ್ಲ. ಹೀಗೆ ಮಾಡುವುದು ಒಂದು ಕಡೆ ಪಾಲಕರಿಗೂ ಮತ್ತು ಸಮಾಜಕ್ಕೂ ಅವರು ಮಾಡುತ್ತಿರುವ ವಂಚನೆ ಎಂದು ಚಿಕ್ಕಾಬಳ್ಳಾಪುರದ ಸ್ಥಳೀಯರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಗಾಂಜಾ ಹಾಗೂ ಧೂಮಪಾನ ಮಾಡಿ ಬಿದ್ದಿರುತ್ತಾರೆ. ಇದೆಲ್ಲವನ್ನು ಗಮನಿಸಿದ್ದೆವು. ಇಷ್ಟೆಲ್ಲ ನಡೆಯುತ್ತಿದ್ದರೂ ಸುಮ್ಮನಾಗಿದ್ದೆವು. ಈಗ ನೋಡಿದರೆ ಹೆಣ್ಣು ಮಕ್ಕಳನ್ನು ಕರೆದುಕೊಂಡು ಬಂದು ಅವರನ್ನು ಇಲ್ಲಿ ಲೈಂಗಿಕವಾಗಿ ಶೋಷಣೆ ಮಾಡುವ ಚಟುವಟಿಕೆಗಳು ನಡೆಯುತ್ತಿವೆ. ಹೆಣ್ಣು ಮಕ್ಕಳು ಕೂಡ ಉದ್ಯೋಗದ ಆಸೆಗೋ? ಅಥವಾ ಇನ್ಯಾವುದೋ ಆಮಿಷಕ್ಕೆ ಒಳಗಾಗಿ ಹದಿಹರೆಯದ ಹುಡುಗರ ಕಾಮದಾಟಕ್ಕೆ ಬಲಿಯಾಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಪಾಪಾ ಆ ಹುಡುಗ-ಹುಡುಗಿಯರಿನ್ನೂ ಚಿಕ್ಕ ವಯಸ್ಸಿನವರು. ಅವರಿಗೆ ಇನ್ನು ಪ್ರಪಂಚ ಏನು ಎಂಬು ಸರಿಯಾಗಿ ತಿಳಿದಿಲ್ಲ. ಇದನ್ನೆಲ್ಲ ನಿಯಂತ್ರಣ ಮಾಡಬೇಕಾದರೆ, ಇಲ್ಲಿರುವಂತಹ ವ್ಯವಸ್ಥೆ ಸರಿಯಾಗಬೇಕು. ಉದ್ಯಾನವನ್ನು ಸರಿಯಾದ ರೀತಿಯ ನಿರ್ವಹಣೆ ಮಾಡಬೇಕು. ಅದೊಂದೇ ಅನೈತಿಕ ಚಟುವಟಿಕೆ ತಡೆಗಟ್ಟಲು ಇರುವ ಒಂದೇ ದಾರಿ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.