Home Entertainment ಮದುವೆಯಾಗಿ ಗಂಡನ ಮನೆಗೆ ಕಾಲಿಡಬೇಕಾದ ವಧು ಮನೆಯ ಮೇಲ್ಛಾವಣಿಯಲ್ಲಿ!!|ಕೋಪಗೊಂಡು ಏಣಿ ಸಹಾಯದಿಂದ ಮೇಲ್ಛಾವಣಿ ಹತ್ತಿ ಕುಳಿತುಕೊಂಡ...

ಮದುವೆಯಾಗಿ ಗಂಡನ ಮನೆಗೆ ಕಾಲಿಡಬೇಕಾದ ವಧು ಮನೆಯ ಮೇಲ್ಛಾವಣಿಯಲ್ಲಿ!!|ಕೋಪಗೊಂಡು ಏಣಿ ಸಹಾಯದಿಂದ ಮೇಲ್ಛಾವಣಿ ಹತ್ತಿ ಕುಳಿತುಕೊಂಡ ವಧುವಿನ ವಿಡಿಯೋ ಫುಲ್ ವೈರಲ್

Hindu neighbor gifts plot of land

Hindu neighbour gifts land to Muslim journalist

ಹೆಣ್ಣು ಮದುವೆಯಾಗಿ ಹೋದ ಮೇಲೆ ಅವಳಿಂದ ಗಂಡನ ಮನೆ ಬೆಳಗಬೇಕು ಎಂದು ಪೋಷಕರು ಮನತುಂಬಿ ಹಾರೈಸುತ್ತಾರೆ. ಸುಖವಾಗಿ ನೂರು ಕಾಲ ಬಾಳಲೆಂದು ಬಂಧು-ಬಳಗದವರು ಆಶೀರ್ವಾದ ಮಾಡಿರುತ್ತಾರೆ. ಮದುವೆಯಾದ ನಂತರ ಮೊದಲಬಾರಿಗೆ ತನ್ನ ಗಂಡನ ಮನೆಗೆ ಹೋಗುವ ಸಂಭ್ರಮದಲ್ಲಿ ಹೆಣ್ಣಿರುತ್ತಾಳೆ. ಆದರೆ ಇಲ್ಲೊಬ್ಬಳು ಮದುವೆಯಾಗಿ ಗಂಡನ ಮನೆಗೆ ಬಂದಾಗ ಮಾಡಿದ ರಂಪಾಟ ಅಷ್ಟಿಷ್ಟಲ್ಲ.

ಮದುವೆಯ ಬಳಿಕ ಮನೆಯ ಸೊಸೆಯನ್ನು ಆರತಿ ಬೆಳಗಿ ಒಳಗೆ ಕರೆಸಿಕೊಳ್ಳುವುದು ಪದ್ಧತಿ. ಮನೆಯ ನೆರೆ ಹೊರೆಯವರೆಲ್ಲಾ ಬಂದು ಖುಷಿಯಿಂದ ಸೊಸೆಗೆ ಆರತಿ ಬೆಳಗಿ ಮನೆ ಪ್ರವೇಶ ಮಾಡಿಸುತ್ತಾರೆ. ಅದ್ಯಾಕೋ ಗೊತ್ತಿಲ್ಲ, ಮದುವೆಯ ದಿನವೇ ವಧು ಭಯಂಕರ ಸಿಟ್ಟಿನಲ್ಲಿದ್ದಾಳೆ. ಕೋಪಗೊಂಡ ವಧು ಮನೆಯ ಎದುರಿದ್ದ ಏಣಿ ಸಹಾಯದಿಂದ ಮೇಲ್ಛಾವಣಿ ಹತ್ತಿ ಕುಳಿತುಕೊಂಡಿದ್ದಾಳೆ. ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ತಮಾಷೆ ಮಾಡಿ ನಕ್ಕಿದ್ದಾರೆ, ವಿಡಿಯೋ ನೋಡಿ ಮಜವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ವಿಡಿಯೋಗಳು ವೈರಲ್ ಆಗುತ್ತವೆ. ಅವುಗಳಲ್ಲಿ ಕೆಲವು ಹೊಟ್ಟೆ ಹುಣ್ಣಾಗಿಸುವಷ್ಟು ನಗು ತರಿಸುತ್ತವೆ. ಸಣ್ಣ ಪುಟ್ಟ ಕಾರಣಕ್ಕೆಲ್ಲಾ ಅತಿಯಾಗಿ ಕೋಪಗೊಂಡ ಕೆಲವು ಸನ್ನಿವೇಶಗಳು ಮಜವೆನಿಸುತ್ತದೆ. ಇದೀಗ ವೈರಲ್ ಆದ ವಿಡಿಯೋ ಕೂಡಾ ಅಂಥದ್ದೇ! ಕೋಪಗೊಂಡ ವಧುವಿಗೆ ಏನು ಮಾಡಬೇಕೆಂಬುದೇ ಗೊತ್ತಾಗುತ್ತಿಲ್ಲ. ಸಿಟ್ಟಿನ ಭರದಲ್ಲಿ ಪಕ್ಕದಲ್ಲಿದ್ದ ಏಣಿ ಸಹಾಯದಿಂದ ಮನೆಯ ಮೇಲ್ಛಾವಣಿ ಹತ್ತಿ ಕುಳಿತಿದ್ದಾಳೆ.

ಸೊಸೆಯನ್ನು ಮನೆಯ ಒಳಗೆ ಕರೆದುಕೊಳ್ಳಲು ಅತ್ತೆ ಸಿದ್ಧಳಾಗಿ ನಿಂತಿದ್ದಾಳೆ. ಆ ಸಂದರ್ಭದಲ್ಲಿ ವಧು ನೋಡಿದ್ರೆ ಮನೆಯ ಮೇಲೇರಿ ಕುಳಿತಿದ್ದಾಳೆ. ಓಡಿ ಬಂದ ವರ ಅವಳ ಮನವೊಲಿಸಲು ಪ್ರಯತ್ನಿಸಿದರೂ ಸಹ ಯಾವುದೇ ಪ್ರಯೋಜವಾಗುತ್ತಿಲ್ಲ. ಏಣಿಯ ಸಹಾಯದಿಂದ ಕೆಳಗಿಳಿಯಲು ಹೇಳುತ್ತಿದ್ದರೂ ಕಾಲಿನಿಂದ ಏಣಿಯನ್ನು ದೂರ ತಳ್ಳುತ್ತಿದ್ದಾಳೆ. ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.