ಆಲಂಕಾರು : ರೇಬಿಸ್ ಗೆ ಶಾಲಾ ವಿದ್ಯಾರ್ಥಿನಿ ಬಲಿ | ಮೂರು ವರ್ಷದ ಹಿಂದೆ ಈಕೆಯ ಅಣ್ಣನೂ ಆಕಸ್ಮಿಕವಾಗಿ ಮೃತಪಟ್ಟಿದ್ದ

ರೇಬಿಸ್ ವೈರಸ್‌ಗೆ ಶಾಲಾ ವಿದ್ಯಾರ್ಥಿನಿಯೋರ್ವರು ಬಲಿಯಾದ ಘಟನೆ ಆಲಂಕಾರಿನಲ್ಲಿ ಗುರುವಾರ ತಡ ರಾತ್ರಿ ಸಂಭವಿಸಿದೆ.

ಆಲಂಕಾರು ಗ್ರಾಮದ ಕೆದಿಲ ವರ್ಗಿಸ್ ಅವರ ಪುತ್ರಿ ಎನ್ಸಿ (17) ಮೃತ ದುರ್ದೈವಿಯಾಗಿದ್ದಾರೆ.

ಕಡಬ ಸರಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿರುವ ಈಕೆಗೆ ಗುರುವಾರ ಬೆಳಿಗ್ಗೆ ಏಕಾಏಕಿ ತಲೆನೋವು ಕಾಣಿಸಿಕೊಂಡಿತ್ತು. ತಕ್ಷಣ ಸ್ಥಳೀಯ ಆಸ್ಪತ್ರೆಯಲ್ಲಿ ಔಷಧಿಯನ್ನು ತೆಗೆದುಕೊಳ್ಳಲಾಗಿತ್ತು. ಆದರೆ, ಸಂಜೆ ವೇಳೆ ತಲೆನೋವು ಉಲ್ಬಣಿಸಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಖಾಸಗಿ ಆಸ್ಪತ್ರೆಗೆ ಸೇರಿಸಿ ಬಳಿಕ ಮಂಗಳೂರು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿತ್ತು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ತಡ ರಾತ್ರಿ ಸಾವನ್ನಪ್ಪಿದಳು. ಸುಮಾರು 4 ತಿಂಗಳ ಹಿಂದೆ ಆಲಂಕಾರು ಪೇಟೆ ಸೇರಿದಂತೆ ಮೃತಳ ಮನೆಯ ಸುತ್ತಮುತ್ತ ಹುಚ್ಚು ನಾಯಿ ದಾಳಿ ಮಾಡಿತ್ತು. ಈ ವೇಳೆ ಅಲಂಕಾರು ಪೇಟೆಯಲ್ಲಿರುವ ಬೀದಿ ನಾಯಿಗಳಿಗೆ ಸೇರಿದಂತೆ ಇಬ್ಬರ ಮೇಲೆ ದಾಳಿ ನಡೆಸಿತ್ತು. ಮೃತಳ ಮನೆಯ ನಾಯಿಯು ಕೆಲವು ತಿಂಗಳುಗಳ ಹಿಂದೆ ರೇಬೀಸ್‌ಗೆ ಒಳಗಾಗಿ ಸಾವನ್ನಪ್ಪಿತ್ತು. ಅದೇ ನಾಯಿಯ ವೈರಸ್ ವಿದ್ಯಾರ್ಥಿನಿಗೂ ತಗಲಿರ ಬಹುದೆಂದು ಅಂದಾಜಿಸಲಾಗಿದೆ.

ಆಲಂಕಾರು ಪೇಟೆಯ ಸೇರಿದಂತೆ ಗ್ರಾಮದ ಹಲವು ಕಡೆಗಳಲ್ಲಿ ಬೀದಿ ನಾಯಿ ಹಾಗೂ ಅಲೆಮಾರಿ ನಾಯಿಗಳ ಕಾಟ ಹೆಚ್ಚಾಗಿದ್ದು, ಇದೀಗ ಸಾರ್ವಜನಿಕರಲ್ಲಿ ಆತಂಕವನ್ನು ಹೆಚ್ಚಿಸಿದೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಸಾರ್ವಜನಿಕವಾಗಿ ಕೇಳಿ ಬರುತ್ತಿದೆ.

ಹಿರಿಯ ಪುತ್ರನ ಆಕಸ್ಮಿಕ ಸಾವು

2018ರ ಏಪ್ರಿಲ್ ತಿಂಗಳಲ್ಲಿ ಮೃತಳ ಅಣ್ಣನೂ ನದಿ ನೀರಿಗೆ ಆಕಸ್ತಿಕವಾಗಿ ಬಿದ್ದು ಸಾವನಪಿದ. ಬಳಿಕೆದ ದಿನಗಳಲ್ಲಿ ಇದ್ದ ಏಕೈಕ ಪುತ್ರಿಯನ್ನು ಅತೀ ಕಾಳಜಿಯಿಂದ ಸಲಹಿದರು. ಆದರೆ, ವಿಧಿಯ ಕ್ರೂರತನಕ್ಕೆ ಇದ್ದ ಒಂದು ಕರುಳಕುಡಿಯನ್ನು ಕಳಕೊಂಡ ಪೋಷಕರ ರೋದನ ಮುಗಿಲು ಮುಟ್ಟಿತ್ತು.

Leave A Reply

Your email address will not be published.