ಮಂಗಳೂರು | ಪೆಟ್ರೋಲ್ ಬಂಕ್ ಮ್ಯಾನೇಜರ್ ಬ್ಯಾಂಕಿಗೆ ಹಣ ಜಮೆ ಮಾಡಲು ತೆರಳುತ್ತಿದ್ದ ವೇಳೆ ದುಷ್ಕರ್ಮಿಗಳಿಂದ ದರೋಡೆ| 4.20 ಲಕ್ಷ ರೂ. ಸುಲಿಗೆ ಮಾಡಿದ ಖದೀಮರು

Share the Article

ಬ್ಯಾಂಕ್ ಗೆ ಹಣ ಕಟ್ಟಲು ತೆರಳುತ್ತಿದ್ದ ವ್ಯಕ್ತಿಯಿಂದ ಸುಲಿಗೆ ಮಾಡಿರುವ ಘಟನೆ ಮಂಗಳೂರಿನ ಚಿಲಿಂಬಿಯಲ್ಲಿ ನಿನ್ನೆ ಮಧ್ಯಾಹ್ನ ನಡೆದಿದೆ.

ಗಾಂಧಿನಗರದ ಆಶೀರ್ವಾದ್ ಪೆಟ್ರೋಲ್ ಬಂಕ್ ಮ್ಯಾನೇಜರ್ ಬೋಜಪ್ಪ ಇವರಿಂದ 4.20 ಲಕ್ಷ ರೂಪಾಯಿ ಸುಲಿಗೆಯಾಗಿದೆ. ಬೋಜಪ್ಪನವರು ಬ್ಯಾಂಕ್‍ಗೆ ಹಣ ಡೆಪಾಸಿಟ್ ಮಾಡಲು ನಗರದ ಚಿಲಿಂಬಿ ಎಂಬಲ್ಲಿಗೆ ಹಣದೊಂದಿಗೆ ಹೋಗುತ್ತಿದ್ದರು. ಈ ವೇಳೆ ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳು ಬೋಜಪ್ಪ ಅವರ ಮೇಲೆ ಬ್ಯಾಟ್ ನಿಂದ ಹಲ್ಲೆ ನಡೆಸಿ ಹಣದ ಬ್ಯಾಗ್ ದೋಚಿ ಪರಾರಿಯಾಗಿದ್ದಾರೆ. ದುಷ್ಕರ್ಮಿಗಳು ಸ್ವಿಗ್ಗಿ ಟೀಶರ್ಟ್ ಧರಿಸಿ ಬಂದಿದ್ದು, ಹಣದೊಂದಿಗೆ ಪರಾರಿಯಾಗಿದ್ದಾರೆ.

ಈ ಬಗ್ಗೆ ಮಂಗಳೂರಿನ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply