ಕೆಎಸ್‌ಆರ್‌ಟಿಸಿ ದ.ಕ.ಜಿಲ್ಲೆಗೆ ಸಂಬಂಧಿಸಿದ ಹುದ್ದೆಗಳಲ್ಲಿ ಸ್ಥಳೀಯರಿಗೆ ಆಧ್ಯತೆಗೆ ಮಾತುಕತೆ-ಎಸ್.ಅಂಗಾರ
ದ.ಕ. ಜಿಲ್ಲೆಗೆ ಸಂಬಂಧಿಸಿದ ಹುದ್ದೆಗಳಲ್ಲಿ ಸ್ಥಳೀಯರಿಗೆ ಪ್ರಾಧ್ಯಾನ ನೀಡಬೇಕು ಎಂಬ ಬೇಡಿಕೆ ಇದೆ. ಇದನ್ನು ಈ ಹಿಂದಿನ ಸಾರಿಗೆ ಸಚಿವ ಸವದಿ ಅವರ ಗಮನಕ್ಕೂ ತರಲಾಗಿದೆ. ಜಿಲ್ಲಾವಾರು ಅಥವಾ ವಿಭಾಗವಾರು ನೇಮಕಾತಿಗೆ ಆದ್ಯತೆ ನೀಡಿದರೆ ಕರ್ತವ್ಯ ನಿರ್ವಹಣೆಗೆ ಅನುಕೂಲಕಾರಿ. ಈ ಬಗ್ಗೆ ಸರಕಾರದ ಮಟ್ಟದಲ್ಲಿ ಮಾತುಕತೆ ನಡೆಸುವುದಾಗಿ ಸಚಿವ ಎಸ್.ಅಂಗಾರ ಹೇಳಿದರು.
ಪುತ್ತೂರು ಮುಕ್ರಂಪಾಡಿ ವಿಭಾಗೀಯ ಕಚೇರಿ ಆವರಣದಲ್ಲಿ ಮಂಗಳವಾರ ನಡೆದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪುತ್ತೂರು ವಿಭಾಗದ ದಶಮಾನೋತ್ಸವ, ನಿವೃತ್ತ ನೌಕರರ ಸಮ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಬಳಿಕ ನಿವೃತ್ತ ನೌಕರರ ಬೇಡಿಕೆ ಆಲಿಸಿ ಮಾತನಾಡಿದ ಸಚಿವ ಅಂಗಾರ ಅವರು,ಕೆಎಸ್ಸಾರ್ಟಿಸಿ ನಿವೃತ್ತ ನೌಕರರಿಗೆ ಕಳೆದ ಒಂಬತ್ತು ತಿಂಗಳಿನಿಂದ ಗ್ರಾಚ್ಯುಟಿ ಪಾವತಿಯಾಗದಿರುವ ಬಗ್ಗೆ ಗುರುವಾರ ಸಾರಿಗೆ ಸಚಿವರ ಗಮನಕ್ಕೆ ತಂದು ಶೀಘ್ರ ಪಾವತಿಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ನೌಕರರಿಗೆ ಸಿಗಬೇಕಾದ ಸವಲತ್ತುಗಳನ್ನು ಸಕಾಲದಲ್ಲಿ ಒದಗಿಸುವುದು ಸರಕಾರದ ಜವಾಬ್ದಾರಿ. ಆದರೆ ಪ್ರಸ್ತುತ ಕೋವಿಡ್ ಸಂಕಷ್ಟದಿಂದ ಉಂಟಾಗಿರುವ ಆರ್ಥಿಕ ನಷ್ಟದ ಬಗ್ಗೆಯು ನಿವೃತ್ತ ನೌಕರರು ಯೋಚನೆ ಮಾಡಬೇಕು. ಕೊಂಚ ವಿಳಂಬವಾದರೂ ಸಹಕಾರ ನೀಡ
ಬೇಕು. ಹಾಲಿ ಸರಕಾರ ನಿವೃತ್ತ ನೌಕರರ ಹಿತ ಕಾಯಲು ಬದ್ಧ ವಾಗಿದೆ ಎಂದರು.