Home News ಅಸ್ಸಾಂನಲ್ಲಿ ಪ್ರತಿಭಟನಾಕಾರರ ಮೇಲೆ ದಾಳಿ ಮತ್ತು ಪೋಲಿಸ್ ಗೋಲಿಬಾರ್ ಖಂಡಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ...

ಅಸ್ಸಾಂನಲ್ಲಿ ಪ್ರತಿಭಟನಾಕಾರರ ಮೇಲೆ ದಾಳಿ ಮತ್ತು ಪೋಲಿಸ್ ಗೋಲಿಬಾರ್ ಖಂಡಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪುತ್ತೂರು ವತಿಯಿಂದ ಪ್ರತಿಭಟನೆ

Hindu neighbor gifts plot of land

Hindu neighbour gifts land to Muslim journalist

ಸಂಘಪರಿವಾರದ ಕೋಮು ವೈರಸ್ ನಿವಾರಣೆಗೆ ಸರಿಯಾದ ಚಿಕಿತ್ಸೆ ನೀಡುವ ವೈದ್ಯರನ್ನು ಪಾಪ್ಯುಲರ್ ಫ್ರಂಟ್ ಸಜ್ಜುಗೊಳಿಸಿದೆ:ಜಾಬೀರ್ ಅರಿಯಡ್ಕ

ಪುತ್ತೂರು,ಸೆ.28: ಅಸ್ಸಾಮಿನಲ್ಲಿ ಪ್ರತಿಭಟನಾಕಾರರ ಮೇಲೆ ದಾಳಿ ಮತ್ತು ಪೋಲಿಸರು ನಡೆಸಿದ ದಾರುಣ ಗೋಲಿಬಾರ್ ವಿರುದ್ಧ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪುತ್ತೂರು ಜಿಲ್ಲಾ ಸಮಿತಿ ವತಿಯಿಂದ ಮಿನಿ ವಿಧಾನಸೌಧ ಬಳಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಪಿಎಫ್ಐ ಪುತ್ತೂರು ಜಿಲ್ಲಾ ಸಮಿತಿ ಅಧ್ಯಕ್ಷ ನಿರಾಯುಧ ಜನರ ಪ್ರತಿಭಟನೆಯಲ್ಲಿ ಪೋಲಿಸ್ ನಿಯಮಾವಳಿಗಳನ್ನು ಗಾಳಿಗೆ ತೂರಿ ನೇರವಾಗಿ ಎದೆಯ ಭಾಗಕ್ಕೆ ಗುಂಡು ಹಾರಿಸಿದ್ದು ಫ್ಯಾಶಿಸ್ಟ್ ಸರಕಾರದ ಪೂರ್ವ ನಿಯೋಜಿತ ಕೃತ್ಯ. ಇದು ನಾಗಪುರದ ಶಾಖೆಯ ಸಿದ್ಧಾಂತದ ಭಾಗವಾಗಿದೆ. ಈ ಸಿದ್ಧಾಂತವನ್ನು ನಾವು ಖಂಡಿತವಾಗಿಯೂ ಸೋಲಿಸಲಿದ್ದೇವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತಮ್ಮ ಗುಡಿಸಲುಗಳನ್ನು ಕಳೆದುಕೊಳ್ಳುವ ಭೀತಿಯಿಂದ ಆಶ್ರಯಕ್ಕಾಗಿ ಹೋರಾಡಿ ಪೋಲಿಸರ ಗುಂಡೇಟಿಗೆ ಬಲಿಯಾದವರಿಗೆ ಮೌನ ಪ್ರಾರ್ಥನೆ ಮಾಡಿ ಗೌರವ ಸಲ್ಲಿಸಲಾಯಿತು

ಪ್ರತಿಭಟನೆಯನ್ನು ಉದ್ದೇಶಿಸಿ ಪಿಎಫ್ಐ ರಾಜ್ಯ ಕಾರ್ಯದರ್ಶಿಯವರಾದ ಎ.ಕೆ ಅಶ್ರಫ್ ಮಾತನಾಡಿ, ಅಸ್ಸಾಂ‌ನ ಶಂಕರ್ ಬನಿಯಾರ ಕ್ರೂರ ಹಿಂದುತ್ವ ಫ್ಯಾಸಿಸ್ಟ್‌ರ ಕ್ರೌರ್ಯಗಳು ದಕ್ಷಿಣ ಕನ್ನಡದಲ್ಲಿಯೂ ಅಲ್ಲಲ್ಲಿ ಸಣ್ಣಪುಟ್ಟದಾಗಿ ತಲೆ ಎತ್ತಲಾಗುತ್ತಿದ್ದು, ಪೋಲಿಸ್ ಇಲಾಖೆ ಇವರನ್ನು ಹದ್ದುಬಸ್ತಿನಲ್ಲಿಡದಿದ್ದರೆ ಪಾಪ್ಯುಲರ್ ಫ್ರಂಟ್ ಅವರನ್ನು ತಡೆಯಲು ಸದಾ ಸಿದ್ಧವಾಗಿದೆ ಎಂಬ ಸಂದೇಶವನ್ನು ಈ ಮೂಲಕ ನೀಡುತ್ತಿದ್ದೇವೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಕೂರ್ನಡ್ಕ ಫೀರ್ ಮುಹಲ್ಲಾ ಜುಮಾ ಮಸೀದಿ ಜಮಾಅತ್ ಕಮಿಟಿ ಅಧ್ಯಕ್ಷರಾದ ಕೆ ಎಚ್ ಕಾಸಿಂ ಹಾಜಿ, ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾದ ಇಬ್ರಾಹಿಂ ಹಾಜಿ ಸಾಗರ್ ಸಹಿತ ಹಲವು ನಾಯಕರು ಉಪಸ್ಥಿತರಿದ್ದರು. ಪಾಪ್ಯುಲರ್ ಫ್ರಂಟ್ ಸುಳ್ಯ ಡಿವಿಝನ್ ಅಧ್ಯಕ್ಷರಾದ ಫೈಝಲ್ ಬೆಳ್ಳಾರೆ ನಿರೂಪಿಸಿದರು. ಕುಂಬ್ರ ಡಿವಿಝನ್ ಅಧ್ಯಕ್ಷರಾದ ಶಾಕಿರ್ ಕಟ್ಟತ್ತಾರ್ ಸ್ವಾಗತಿಸಿದರು.