Home News ಡಿಸಿಪಿ ಧರ್ಮೇಂದ್ರ ಕುಮಾರ ಮೀನಾ ಕಾಲಿನ ಮೇಲೆ ಹರಿದ ರೈತ ಮುಖಂಡನ ಕಾರು | ನಿನ್ನೆ...

ಡಿಸಿಪಿ ಧರ್ಮೇಂದ್ರ ಕುಮಾರ ಮೀನಾ ಕಾಲಿನ ಮೇಲೆ ಹರಿದ ರೈತ ಮುಖಂಡನ ಕಾರು | ನಿನ್ನೆ ಭಾರತ ಬಂದ್ ಸಂದರ್ಭ ನಡೆದ ಅವಘಢ

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು: ಭಾರತ್ ಬಂದ್ ಭದ್ರತೆಯಲ್ಲಿದ್ದ ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ ಮೀನಾ ಅವರ ಕಾಲಿನ ಮೇಲೆ ಕಾರಿನ ಚಕ್ರ ಹರಿಸಲಾಗಿದೆ.
ನಿನ್ನೆ ಭಾರತ ಬಂದ್ ಸಂದರ್ಭ ತುಮಕೂರು ರಸ್ತೆ ಕಡೆಯಿಂದ ಬೆಂಗಳೂರು ಪ್ರವೇಶಿಸುವ ಪ್ರತಿಭಟನಕಾರರನ್ನು ತಡೆಯಲು ಪೊಲೀಸರು ಗೊರಗುಂಟೆಪಾಳ್ಯ ಬಳಿ ಸೇರಿದ್ದರು. ಆಗ ಸ್ಥಳಕ್ಕೆ ಬಂದ ಕಾರು ತಡೆಯಲು ಡಿಸಿಪಿ ಹಾಗೂ ಸಿಬ್ಬಂದಿ‌ ಮುಂದಾಗಿದ್ದರು. ಆದರೆ, ಚಾಲಕ ಕಾರು ನಿಲ್ಲಿಸದೆ ಮುಂದೆ ಹರಿಸಿದ್ದ.
ಎದುರುಗಿದ್ದ ಡಿಸಿಪಿ ಮೇಲೆಯೇ ಕಾರು ಹರಿಸಲು ಚಾಲಕ ಯತ್ನಿಸಿದ್ದ. ಡಿಸಿಪಿ ಪಕ್ಕಕ್ಕೆ ಸರಿಯುತ್ತಿದ್ದಂತೆ, ಅವರ ಎಡಗಾಲಿನ ಪಾದದ ಮೇಲೆಯೆ ಕಾರಿನ ಚಕ್ರ ಹರಿದು ಹೋಗಿದೆ.ಆಗ ಗಾಯಗೊಂಡ ಡಿಸಿಪಿ ಸ್ಥಳದಲ್ಲೇ ಕುಳಿತು ಚೇತರಿಸಿಕೊಂಡರು. ನಂತರ ಪ್ರಾಥಮಿಕ ಚಿಕಿತ್ಸೆ ಪಡೆದುಕೊಂಡರು. ಕಾಲು ಪಕ್ಕಕ್ಕೆ ಎಳೆದುಕೊಂಡ ಪರಿಣಾಮ ಕಾಲು ಮುರಿತದಿಂದ ಅವರು ಪಾರಾಗಿದ್ದಾರೆ.

ಅಲ್ಲಿದ್ದ ಸಿಬ್ಬಂದಿ ಕಾರು ಜಪ್ತಿ‌ ಮಾಡಿ, ಕಾರು ಚಾಲಕನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು.’ಡಿಸಿಪಿ ‌ಕಾಲಿನ ಪಾದಕ್ಕೆ ಪೆಟ್ಟಾಗಿದ್ದು. ಪ್ರಾಥಮಿಕ ‌ಚಿಕಿತ್ಸೆ ಪಡೆದು ಭದ್ರತೆ ಕೆಲಸ ಮುಂದುವರಿಸಿದ್ದಾರೆ’ ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ.