Home News ಬೈಂದೂರು: ನದಿತಟದಲ್ಲಿ ಆಟವಾಡುತ್ತಿದ್ದ ಬಾಲಕ ಆಯತಪ್ಪಿ ನೀರಿಗೆ ಬಿದ್ದು ಸಾವು

ಬೈಂದೂರು: ನದಿತಟದಲ್ಲಿ ಆಟವಾಡುತ್ತಿದ್ದ ಬಾಲಕ ಆಯತಪ್ಪಿ ನೀರಿಗೆ ಬಿದ್ದು ಸಾವು

Hindu neighbor gifts plot of land

Hindu neighbour gifts land to Muslim journalist

ನದಿ ದಡದಲ್ಲಿ ಆಡುತ್ತಿದ್ದ ಬಾಲಕನೋರ್ವ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ಬೈಂದೂರಿನಲ್ಲಿ ಭಾನುವಾರ ನಡೆದಿದೆ.

ಮೃತ ಬಾಲಕನನ್ನು ಶಿರೂರು ಗ್ರಾಮದ ಕಳೆದ ಕೇಸರದಿಯ ವೆಂಕಟೇಶ ಮಾನ್ಯ ಅವರ ಪುತ್ರ ಪನ್ನಗ(12) ಎಂದು ಗುರುತಿಸಲಾಗಿದೆ.

ಈತ ನೆರೆಮನೆಯ ಬಾಲಕನೊಡನೆ ಸಿರೂರು ಗ್ರಾಮದ ಕಿರುಹೊಳೆ ಹುಸಿನಗದ್ದೆ ಹೊಳೆಯ ದಡದಲ್ಲಿ ಆಟವಾಡುತ್ತಿದ್ದನು. ಈ ವೇಳೆ ಕಾಲು ಜಾರಿ ನದಿಗೆ ಬಿದ್ದ ಪನ್ನಗ ನೀರಿನಲ್ಲಿ ಮುಳುಗಿ ಮೃತ ಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.