ಕರ್ನಾಟಕಕ್ಕೂ ಚಾಚಿದ ಕೊರೋನಾ ದ ಕರಾಳ ಛಾಯೆ : ಬೆಂಗಳೂರಿನಲ್ಲಿ ಸೋಂಕಿತ ಪತ್ತೆ !

ಮತ್ತೆರಡು ಕೊರೋನಾ ವೈರಸ್ ಸೋಂಕು ತಗುಲಿದ ವ್ಯಕ್ತಿಗಳು ಪತ್ತೆಯಾಗುವುದರೊಂದಿಗೆ ಭಾರತದಲ್ಲಿ ಸ್ವಲ್ಪ ತಣ್ಣಗಾಗಿದ್ದ ಕೊರೋನಾ ವೈರಸ್ ನ ಭಯ ಮತ್ತೆ ಎದ್ದಿದೆ.

ಅಷ್ಟರಲ್ಲಿ ಬೆಂಗಳೂರಿನಲ್ಲಿ ಕೆಲಸ ಮಾಡುವ ಹೈದರಾಬಾದ್ ಮೂಲದ ಟೆಕ್ಕಿಗೆ ಕೊರೋನಾ ವೈರಸ್ ತಗುಲಿದೆ ಎನ್ನುವುದು ದೃಢಪಟ್ಟಿದ್ದು, ಆತಂಕ ಮೂಡಿಸಿದೆ. ಆದರೆ ಲ್ಯಾಬ್ ರಿಪೋರ್ಟ್ ಇನ್ನೂ ಬರಬೇಕಿದೆ.

24 ವರ್ಷದ ಈ ಸಾಫ್ಟ್ ವೇರ್ ಇಂಜಿನಿಯರ್ ದುಬೈನಿಂದ ಆಗಮಿಸಿ ಬೆಂಗಳೂರಿನಲ್ಲಿ ಎರಡು ದಿನ ಉಳಿದುಕೊಂಡಿದ್ದರು. ಫೆಬ್ರವರಿ 20 -22 ರವರೆಗೆ ಟೆಕ್ಕಿ ಉಳಿದುಕೊಂಡಿದ್ದು ತದನಂತರ ಅವರು ಹೈದರಾಬಾದ್ ಗೆ ಬಸ್ ನಲ್ಲಿ ತೆರಳಿದ್ದರು. ಆತನಿಗೆ ಕೊರೋನಾ ಲಕ್ಷಣ ಕಾಣಿಸಿಕೊಂಡಿದ್ದು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆ ಟೆಕ್ಕಿಯೊಂದಿಗೆ ಸಂಪರ್ಕದಲ್ಲಿದ್ದ ಎಲ್ಲರ ಸ್ಕ್ರೀನಿಂಗ್ ಮಾಡಿ ಆರೋಗ್ಯ ತಪಾಸಣೆ ಮಾಡಲು ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ. ಇದರೊಂದಿಗೆ ರಾಜ್ಯದಲ್ಲಿ ಕೂಡ ಕೊರೋನಾ ಆತಂಕ ಶುರುವಾಗಿದೆ. ಕಂಪನಿ ಕೆಲಸದ ನಿಮಿತ್ತ ಬೆಂಗಳೂರಿನಿಂದ ದುಬೈಗೆ ತೆರಳಿದ್ದ ಟೆಕ್ಕಿ ಹಾಂಕಾಂಗ್ ನಿಂದ ಬಂದಿದ್ದ ವ್ಯಕ್ತಿಗಳೊಂದಿಗೆ ನಾಲ್ಕು ದಿನ ಕೆಲಸ ಮಾಡಿದ್ದರು. 

ನಿನ್ನೆ, ಮಾ.2 ರಂದು ಸಂಜೆ ಕೇಂದ್ರ ಆರೋಗ್ಯ ಮಂತ್ರಿ ಹರ್ಷವರ್ಧನ್ ಅವರು ಭಾರತದಲ್ಲಿ ಕೊರೋನಾ ವೈರಸ್ ನಿಂದ ಬಾಧಿತರಾದ ಮತ್ತೆರಡು ಹೊಸ ರೋಗಿಗಳು ಆಸ್ಪತ್ರೆಗೆ ದಾಖಲಾದ ಬಗ್ಗೆ ಖಚಿತಪಡಿಸಿದರು. ಈವರೆಗೆ ಒಟ್ಟು ಐದು ಪ್ರಕರಣಗಳು ಭಾರತದಿಂದ ರಿಪೋರ್ಟ್ ಆಗಿದ್ದು ಅವುಗಳಲ್ಲಿ ಮೊದಲ ಮೂರು ಪ್ರಕರಣಗಳು ಕೇರಳದಿಂದ ಬಂದಿದ್ದವು. ಮೂರು ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿ ವಾಪಸ್ಸು ಮನೆಗೆ ಹೋಗಿದ್ದಾರೆ. ಬೆಂಗಳೂರಿನಲ್ಲಿ ನಿನ್ನೆ ಪತ್ತೆಯಾದ ಶಂಕಿತ ಸೇರಿದಂತೆ ಒಟ್ಟು ಆರು ಜನ ಕೊರೋ ನಾ ವೈರಸ್ ಬಾದಿತರು ಭಾರತದಲ್ಲಿ ಪತ್ತೆಯಾಗಿರುವುದು.

ಈಗ ಹೊಸದಾಗಿ ಕೊರೋನಾ ವೈರಸ್ ಗೆ ಪಾಸಿಟೀವ್ ಆಗಿರುವ ತೆಲಂಗಾಣದ ವ್ಯಕ್ತಿಯೊಬ್ಬ ಈ ಹಿಂದೆ ದುಬೈ ಪ್ರವಾಸ ಕೈಗೊಂಡಿದ್ದ ಮತ್ತು ದೆಹಲಿಯ ಮೂಲದ ಇನ್ನೊಬ್ಬ ವ್ಯಕ್ತಿಯು ಇಟಲಿ ಪ್ರವಾಸದ ಹಿನ್ನೆಲೆಯುಳ್ಳನಾಗಿದ್ದ. ಇವರಿಬ್ಬರೂ ತಾವಾಗಿಯೇ ರೋಗದ ಲಕ್ಷಣಗಳು ಕಂಡುಬಂದ ಕೂಡಲೇ ಆಸ್ಪತ್ರೆಗೆ ಧಾವಿಸಿದ್ದರು.

ಈವರೆಗೆ ಈ ವ್ಯಾಧಿಯು ಪ್ರಪಂಚದಾದ್ಯಂತ ಒಟ್ಟು 58 ಕ್ಕೂ ಅಧಿಕ ದೇಶಗಳನ್ನು ವ್ಯಾಪಿಸಿದೆ ಮತ್ತು 2912 ಜನರು ಈವರೆಗೆ ತಮ್ಮಪ್ರಾಣ ಕಳೆದುಕೊಂಡಿದ್ದಾರೆ.
ಕೇಂದ್ರ ಆರೋಗ್ಯ ಮಂತ್ರಿ ಹರ್ಷವರ್ಧನ್ ಅವರು ನಿನ್ನೆ ಮಾತನಾಡುತ್ತಾ ಇರಾನ್ ಮತ್ತು ಚೀನಾಕ್ಕೆ ನೀಡಲಾದ ವೀಸಾ ಮತ್ತು ಇ-ವೀಸಾಗಳನ್ನು ಈಗಾಗಲೇ ರದ್ದುಪಡಿಸಲಾಗಿದೆ. ಮುಂಬರುವ ದಿನಗಳಲ್ಲಿ ಇತರ ದೇಶಗಳಲ್ಲಿ ಕೂಡ ವೀಸಾ ರದ್ದು ಪಡಿಸುವ ಚಿಂತನೆ ನಡೆಸಲಾಗಿದೆ ಎಂದರು.

ಇರಾನ್ ಒಂದರಿಂದಲೇ 1086 ಜನ ಪ್ರಯಾಣಿಕರು ಇತ್ತೀಚೆಗೆ ಭಾರತಕ್ಕೆ ಬಂದಿದ್ದರು. ಅವರೆಲ್ಲರನ್ನೂ ಪ್ರತ್ಯೇಕ ಶುಶ್ರೂಷೆಯಲ್ಲಿಟ್ಟು ಅವರ ಆರೋಗ್ಯ ಸ್ಥಿತಿಯ ಬಗ್ಗೆ ಕಣ್ಗಾವಲು ಹಾಕಲಾಗಿದೆ.

ಈವರೆಗೆ ಭಾರತದಲ್ಲಿ ಒಟ್ಟಿ 25,738 ಜನರನ್ನು ಈ ರೀತಿ ಪ್ರತ್ಯೇಕಿಸಿ ಇಡಲಾಗಿದೆ. ಕೆಲವರನ್ನು ಅವರ ಆರೋಗ್ಯ ಸಹಜವಾದ ನಂತರ ವಾಪಸ್ಸು ಮನೆಗೆ ಕಳಿಸಲಾಗಿದೆ.
ಆದರೆ ಭಾರತದಲ್ಲಿ ಒಟ್ಟು 37 ಜನರನ್ನು ಕೋರೋನಾ ಸೋಂಕು ತಗುಲಿದೆ ಎಂಬ ಗುಮಾನಿ ಯಲ್ಲಿ ಕಟ್ಟೆಚ್ಚರದಲ್ಲಿ ಇಡಲಾಗಿದೆ.

ಈವರೆಗೆ ಒಟ್ಟು 3217 ಜನರ ರಕ್ತದ ಮಾದರಿಗಳನ್ನು ಲ್ಯಾಬ್ ಗಳಲ್ಲಿ ಪರಿಶೀಲಿಸಲಾಗಿದೆ. ಇವುಗಳಲ್ಲಿ 5 ಜನರು COVID-19 ವೈರಸ್ನಿಂದ ಸೊಂಕಿತರು ಎಂದು ಈಗಾಗಲೇ ಖಚಿತವಾಗಿದೆ. ಉಳಿದ 23 ರಕ್ತದ ಸ್ಯಾಂಪಲ್ಲುಗಳ ರಿಪೋರ್ಟ್ ಇನ್ನೂ ಬರಬೇಕಿದೆ.

ಆತಂಕದ ವಿಷಯವೆಂದರೆ, ಯುರೋಪಿಯನ್ ಯೂನಿಯನ್ ಕೋರೋಣ ವೈರಸ್ನ ಬಗೆಗಿನ ರಿಸ್ಕನ್ನು ‘ ಸಾಧಾರಣ ದಿಂದ ಹೆಚ್ಚು ‘ ( Moderate to High ) ಎಂದು ಮರು ವ್ಯಾಖ್ಯಾನಿಸಿದೆ. ಅಲ್ಲದೆ, ಹೆಚ್ಚಿನ ರಾ ಮೆಟೀರಿಯಲ್ ಗಳು ಚೀನಾದಿಂದ ಬರಬೇಕಾಗಿತ್ತು ಅವುಗಳಿಲ್ಲದೆ ಭಾರತದ ಉತ್ಪಾದನಾ ಕ್ಷೇತ್ರ ಸೊರಗುವುದು, ಉತ್ಪಾದನೆ ಇಲ್ಲದೆ ಉದ್ಯೋಗ ಸೃಷ್ಟಿ ಯಾಗದೆ ಇರುವುದು ಮತ್ತು ಈಗಾಗಲೇ ಕೆಲಸ ಮಾಡುತ್ತಿರುವ ಜನರು ಉದ್ಯೋಗ ಕಳೆದುಕೊಳ್ಳುವ ಭಯ ಆವರಿಸಿದೆ.

Leave A Reply

Your email address will not be published.