ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಸುವರ್ಣವಕಾಶ | ಸ್ಟಾಫ್ ಸೆಲೆಕ್ಷನ್ ಕಮಿಷನ್ ನಿಂದ 3261 ಹುದ್ದೆಗಳಿಗೆ ಅರ್ಜಿ ಆಹ್ವಾನ

ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ (ಎಸ್‌ಎಸ್‌ಸಿ) ಸೆಲೆಕ್ಷನ್‌ ಪೋಸ್ಟ್‌ (ಫೇಸ್-9) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದೆ. ಪಿಯುಸಿ, ಪದವಿ, ಸ್ನಾತಕ ಪದವಿ ಕೋರ್ಸ್‌ಗಳನ್ನು ಪಾಸ್‌ ಮಾಡಿದ ಅಭ್ಯರ್ಥಿಗಳಿಗೆ ಉದ್ಯೋಗ ಅವಕಾಶಗಳಿದ್ದು, ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಎಸ್‌ಎಸ್‌ಸಿ ಒಟ್ಟು 3261 ಸೆಲೆಕ್ಷನ್‌ ಪೋಸ್ಟ್‌ಗಳಿಗೆ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ಈ ಹುದ್ದೆಗಳನ್ನು ಕೇಂದ್ರ ಸರ್ಕಾರದ ಅಧೀನದ ವಿವಿಧ ಇಲಾಖೆಗಳು ಮತ್ತು ಸಚಿವಾಲಯಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ.

ಹುದ್ದೆಗಳ ವಿವರ

ಹುದ್ದೆಗಳ ಹೆಸರು

*ಜೂನಿಯರ್ ಸೀಡ್ ಅನಾಲಿಸ್ಟ್‌
*ಗರ್ಲ್ಸ್‌ ಕೆಡೆಟ್‌ ಇನ್‌ಸ್ಟ್ರಕ್ಟರ್
*ಮೆಕ್ಯಾನಿಕಲ್‌ ವಿಭಾಗ ಚಾರ್ಜ್‌ಮನ್
*ಸೈಂಟಿಫಿಕ್‌ ಅಸಿಸ್ಟಂಟ್
*ಅಕೌಂಟಂಟ್‌
*ಹೆಡ್‌ ಕ್ಲರ್ಕ್‌
*ರಿಹ್ಯಾಬಿಲಿಟೇಶನ್‌ ಕೌನ್ಸೆಲರ್
*ಸ್ಟಾಫ್‌ ಕಾರ್‌ ಡ್ರೈವರ್
*ಟೆಕ್ನಿಕಲ್ ಸೂಪರಿಂಟೆಂಡಂಟ್‌
*ಕಂಸರ್‌ವೇಶನ್‌ ಅಸಿಸ್ಟಂಟ್‌
*ಟೆಕ್ನಿಕಲ್ ಅಸಿಸ್ಟಂಟ್
*ರಿಸರ್ಚ್‌ ಇನ್ವೆಸ್ಟಿಗೇಟರ್
*ಜೂನಿಯರ್ ಕಂಪ್ಯೂಟರ್ ಆಪರೇಟರ್
*ಸಬ್‌ ಎಡಿಟರ್ (ಹಿಂದಿ)
*ಸಬ್‌ ಎಡಿಟರ್ (ಇಂಗ್ಲಿಷ್‌)
*ಮಲ್ಟಿಟಾಸ್ಕಿಂಗ್ ಸ್ಟಾಫ್‌
*ಸೀನಿಯರ್ ಸೈಂಟಿಫಿಕ್‌ ಅಸಿಸ್ಟಂಟ್‌ (ಬಯೋಲಜಿ)

ಹೀಗೆ ಇನ್ನೂ ಹಲವು ಪದನಾಮಕಗಳ ಹುದ್ದೆಗಳು ಸೇರಿ ಒಟ್ಟು 3261 ಸೆಲೆಕ್ಷನ್‌ ಪೋಸ್ಟ್‌ಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ವಿದ್ಯಾರ್ಹತೆ : ಹುದ್ದೆಗಳಿಗೆ ಅನುಗುಣವಾಗಿ ಪಿಯುಸಿ/ ತತ್ಸಮಾನ, ಪದವಿ, ಸ್ನಾತಕೋತ್ತರ ಪದವಿಯನ್ನು ಹುದ್ದೆಗಳಿಗೆ ಸಂಬಂಧಿಸಿದ ವಿಷಯದಲ್ಲಿ ಪಾಸ್ ಮಾಡಿರಬೇಕು.

ಪ್ರಮುಖ ದಿನಾಂಕಗಳು

ಆನ್‌ಲೈನ್‌ ಅಪ್ಲಿಕೇಶನ್‌ ಸಲ್ಲಿಸಲು ಆರಂಭಿಕ ದಿನಾಂಕ : 24-09-2021

ಆನ್‌ಲೈನ್‌ ಅಪ್ಲಿಕೇಶನ್‌ ಸಲ್ಲಿಸಲು ಕೊನೆ ದಿನಾಂಕ : 25-10-2021 ರ ರಾತ್ರಿ 11-30 ಗಂಟೆವರೆಗೆ

ಆನ್‌ಲೈನ್‌ ಮೂಲಕ ಶುಲ್ಕ ಪಾವತಿಸಲು ಕೊನೆ ದಿನಾಂಕ : 28-10-2021 ರ ರಾತ್ರಿ 11-30 ಗಂಟೆವರೆಗೆ

ಆಫ್‌ಲೈನ್‌ ಚಲನ್‌ ಜೆನೆರೇಟ್‌ ಮಾಡಲು ಕೊನೆ ದಿನಾಂಕ : 28-10-2021 ರ ರಾತ್ರಿ 23-30 ಗಂಟೆವರೆಗೆ

ಚಲನ್ ಮೂಲಕ ಶುಲ್ಕ ಪಾವತಿಸಲು ಕೊನೆ ದಿನಾಂಕ: 01-11-2021

ಕಂಪ್ಯೂಟರ್ ಆಧಾರಿತ ಪರೀಕ್ಷೆ ದಿನಾಂಕ : ಜನವರಿ / ಫೆಬ್ರುವರಿ 2022

ಅರ್ಜಿ ಸಲ್ಲಿಸಲು ರೂ.100 ಶುಲ್ಕ ಪಾವತಿಸಬೇಕು. ಮಹಿಳಾ / ಎಸ್‌ಸಿ / ಎಸ್‌ಟಿ / PWD / ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಶುಲ್ಕವನ್ನು ಆನ್‌ಲೈನ್‌ ಮೂಲಕ ಮತ್ತು ಆಫ್‌ಲೈನ್‌ ಚಲನ್‌ ಮೂಲಕ ಸಹ ಪಾವತಿ ಮಾಡಬಹುದು.

ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ
https://ssc.nic.in/Registration/Home

ನೋಟಿಫಿಕೇಶನ್
https://ssc.nic.in/

Leave A Reply

Your email address will not be published.