ಕೋಪಬಂದಾಗ ಕೈಗೆ ಸಿಕ್ಕ ವಸ್ತುಗಳನ್ನು ಬಿಸಾಕುವ ಅಭ್ಯಾಸ ಇದೆಯೇ? | ಅಂತಹ ಅಭ್ಯಾಸ ನಿಮಗೆ ಇದ್ದರೆ ಇಂದೇ ಬಿಟ್ಟು ಬಿಡಿ | ಯಾಕಂದ್ರೆ ಇಲ್ಲೊಬ್ಬಳು ಹುಡುಗಿ ತನ್ನ ಬಾಯ್ ಫ್ರೆಂಡ್ ಮೇಲೆ ಸ್ಮಾರ್ಟ್ ಫೋನ್ ಎಸೆದು ದೊಡ್ಡ ಅನಾಹುತವೇ ನಡೆದುಹೋಗಿದೆ ?!

ಕೋಪ ಬಂದಾಗ ಮಾತು ಮೌನವಾಗಿರಬೇಕು ಇಂತಹ ಸಂದರ್ಭದಲ್ಲಿ ದುಡುಕಿ ಯಾವುದೇ ನಿರ್ಧಾರ ಕೈಗೊಳ್ಳಬಾರದು ಎಂಬ ಮಾತಿದೆ. ಹೌದು ನಾವು ಇದನ್ನು ಪಾಲಿಸುವುದು ತುಂಬಾ ಉತ್ತಮ. ಯಾಕೆಂದರೆ ಕೋಪ ಬಂದಾಗ ಪ್ರತಿಯೊಬ್ಬ ಮನುಷ್ಯನು ಮೃಗದಂತೆ ವರ್ತಿಸುವುದು ಅಂತೂ ಸುಳ್ಳಲ್ಲ. ಇದರಿಂದ ಎದುರಾಗುವ ಅಪಾಯ ತಪ್ಪಿಸಲು ಮೌನಿ ಆಗುವುದೇ ಲೇಸು.

ಈ ಕೋಪದ ಬಗೆಗೆ ಇಷ್ಟೆಲ್ಲಾ ಚರ್ಚೆ ಯಾಕೆ ಮಾಡುತ್ತಿದ್ದೇನೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು.ಯಾಕೆಂದರೆ ಕೋಪದಿಂದ ಏನೆಲ್ಲಾ ಆಗಬಹುದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.ಕೋಪ ಬಂದಾಗ ಕೈಗೆ ಸಿಕ್ಕ ವಸ್ತುಗಳನ್ನು ಬಿಸಾಕುವ ಅಭ್ಯಾಸ ನಿಮಗೂ ಇದ್ದರೆ ಇಂದೇ ಬಿಟ್ಟುಬಿಡಿ. ಯಾಕಂದ್ರೆ ಇಲ್ಲೊಬ್ಬಳು ಹುಡುಗಿ ತನ್ನ ಬಾಯ್​ಫ್ರೆಂಡ್​ ಮೇಲೆ ಸ್ಮಾರ್ಟ್​ಫೋನ್ ಎಸೆಯುವ ಮೂಲಕ ಪ್ರಿಯಕರ ಪ್ರಾಣವನ್ನೇ ತೆಗೆದಿದ್ದಾಳೆ!

22 ವರ್ಷ ಪ್ರಾಯದ ರೆಕ್ಸಾನಾ ಅಡೆಲಿನಾ ಎಂಬ ಯುವತಿ 23 ವರ್ಷದ ಬಾಯ್​ ಫ್ರೆಂಡ್​ ಲೂಯಿಸ್​ ಗ್ವಾಂಟೇ ಮೇಲೆ ಫೋನ್​ ಎಸೆದಿದ್ದಾಳೆ. ಆಕೆ ಕೋಪದಿಂದ ಎಸೆದಿದ್ದೇನೋ ಸರಿ. ಆದರೆ ಆಕೆಯ ಫೋನ್​ ಎಸೆತದಿಂದ ಪ್ರಿಯಕರನ ಪ್ರಾಣವೇ ಹೋದ ಘಟನೆ ಅರ್ಜೆಂಟಿನಾದಲ್ಲಿ ನಡೆದಿದೆ.

ಅಂದಹಾಗೆಯೇ ಲೂಯಿಸ್​ ಗ್ವಾಂಟೇ ನ್ಯಾಸಿಯಾದ ಮನೆಯಲ್ಲಿದ್ದಾಗ ರೊಕ್ಸನಾ ಮೇಲೆ ಹಲ್ಲೆ ಮಾಡಲು ಯತ್ನಿಸುತ್ತಾನೆ. ಆದರೆ ಇದರಿಂದ ಕೋಪಗೊಂಡ ರೊಕ್ಸನಾ ಆತನಿಂದ ತಪ್ಪಿಸಿಕೊಳ್ಳಲು ತನ್ನ ಕೈಯಲ್ಲಿದ್ದ ಮೊಬೈಲ್​ ಎಸೆದಿದ್ದಾಳೆ. ಪರಿಣಾಮ ಆತನ ತಲೆಯ ಮೇಲೆ ಬಿದ್ದಿದೆ.

ಈ ಘಟನೆ ನಡೆದ ನಂತರದಿಂದ ಲೂಯಿಸ್​ಗೆ ತಲೆ ನೋವು ಕಾಣಿಸಿಕೊಂಡಿದೆ. ಜೋರಾಗಿ ತಲೆ ಸುತ್ತುವ ಸಮಸ್ಯೆ​ ಎದುರಾಗಿದೆ. ಕೊನೆಗೆ ಆಸ್ಪತ್ರೆ ಸೇರಬೇಕಾದ ಪರಿಸ್ಥಿತಿ ಬಂದೊದಗಿತು. ಆಸ್ಪತ್ರೆಗೆ ದಾಖಲಾದ ಲೂಯಿಸ್​ನನ್ನು ವೈದ್ಯರು ಪರೀಕ್ಷೆ ನಡೆಸಿದರು. ಆದರೆ ತಲೆಗೆ ವಿಪರೀತ ಗಾಯವಾಗಿದೆ ಎಂದು ಪರೀಕ್ಷೆ ವೇಳೆ ಗೊತ್ತಾಗಿದೆ. ತಕ್ಷಣ ಶಸ್ತ್ರ ಚಿಕಿತ್ಸೆ ನಡೆಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಆತ ಕೊನೆಯುಸಿರೆಳಿದಿದ್ದಾನೆ.

ಲೂಯಿಸ್​ ಸಾವಿನಿಂದ ಬೇಸರಗೊಂಡ ಆತನ ತಾಯಿ ಕೋರ್ಟ್​ ಮೆಟ್ಟಿಲೇರಿದರು. ಪ್ರಿಯತಮೆ ರೊಕ್ಸನಾ ಮೇಲೆ ಕೇಸ್​ ಮಾಡಿದರು. ಫೋನ್​ ಆತನ ತಲೆಗೆ ಬಡಿದು ಆತ ಸಾವನ್ನಪ್ಪಿದ ಎಂದು ತಾಯಿ ಆರೋಪಿಸಿದರು.ಆದರೆ ರೊಕ್ಸನಾ ತಾನು ರಕ್ಷಣೆಗಾಗಿ ತನ್ನ ಫೋನ್​ ಎಸೆದದ್ದರಿಂದ ಕೋರ್ಟ್​ ಈ ಪ್ರಕರಣವನ್ನು ಖುಲಾಸೆಗೊಳಿಸಿದೆ.

ಸ್ಮಾರ್ಟ್​ಫೋನ್​ನಿಂದಾಗಿ ಆಂತರಿಕವಾಗಿ ಮತ್ತು ಬಾಹ್ಯವಾಗಿ ತೊಂದರೆಯಿದೆ ಎಂದುಬು ಈಗ ಹೆಚ್ಚು ಮನವರಿಕೆಯಾಗಿದೆ. ಸ್ಮಾರ್ಟ್​ಫೋನ್​ನಿಂದ ಹೊರ ಸೂಸುವ ವಿಕಿರಣಗಳಿಂದ ಸಾವು ಸಂಭವಿಸುತ್ತದೆ ಎಂಬುದು ಬಹುತೇಕರಿಗೆ ಗೊತ್ತಿದೆ. ಕ್ಯಾನ್ಸರ್​, ತಲೆನೋವು, ಕುತ್ತಿಗೆ ನೋವಿನಂತಹ ಸಮಸ್ಯೆಗಳಿಗೆ ಸ್ಮಾರ್ಟ್​ಫೋನ್ ಕಾರಣವಾಗಿದೆ. ಇದೀಗ ಬಾಹ್ಯವಾಗಿ ಅಂದರೆ ಮೊಬೈಲ್ ಎಸೆಯುವ ಮೂಲಕ ಪ್ರಿಯಕರ ಪ್ರಾಣ ಹೋದ ಘಟನೆ ಇವೆಲ್ಲದಕ್ಕೆ ಮತ್ತೊಂದು ಉದಾಹರಣೆಯಾಗಿದೆ.

Leave A Reply

Your email address will not be published.