ನಿಮಗೂ ನಿಮ್ಮ ಮನೆಯ ಗೋಡೆಗಳಲ್ಲಿ ಫೋಟೋಗಳನ್ನು ಹಾಕುವ ಆಸಕ್ತಿ ಇದೆಯೇ!!?|ಹಾಗಿದ್ದರೆ ಯಾವ ಫೋಟೋ ಹಾಕಿದರೆ ನಿಮ್ಮ ಮನೆಗೆ ಸೂಕ್ತ ಎಂಬುದನ್ನು ನೀವೇ ನೋಡಿ
ಸಾಮಾನ್ಯವಾಗಿ ನಾವು ಮನೆಯ ಗೋಡೆಗಳಲ್ಲಿ ವಿವಿಧ ರೀತಿಯ ಫೋಟೋಗಳನ್ನು ಹಾಕಿರುತ್ತೇವೆ. ಕೆಲವರಿಗೆ ಅದರ ಹುಚ್ಚು ತುಂಬಾನೆ ಇರುತ್ತದೆ. ಕಂಡ ಕಂಡ ಫೋಟೋಗಳನ್ನೆಲ್ಲಾ ಮನೆಗೆ ತಂದಿಡುತ್ತಾರೆ. ಆದರೆ ಆ ಫೋಟೋಗಳು ಸಹ ನಮ್ಮ ಬದುಕಿನ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಮರೆಯಬಾರದು.
ಹೌದು, ನಾವು ಹಾಕುವ ಫೋಟೋಗಳು ನಮ್ಮ ಮೇಲೆ ನಕಾರಾತ್ಮಕ ಮತ್ತು ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಹಾಗಾದ್ರೆ ಮನೆಯಲ್ಲಿ ಯಾವ ಫೋಟೋ ಹಾಕಬೇಕು ಎಂಬುದರ ಬಗ್ಗೆ ಇಲ್ಲಿದೆ ಕೆಲ ಸಲಹೆಗಳು.
ಮನೆಯಲ್ಲಿ ದೇವಿಯ ಚಿತ್ರವನ್ನು ಹಾಕುವುದು ಮನೆಯೊಳಗೆ ಸಕಾರಾತ್ಮಕ ಶಕ್ತಿಯನ್ನು ತರುತ್ತದೆ ಎಂಬ ನಂಬಿಕೆ ಇದೆ. ದೇವಿಯ ಫೋಟೋ ಸರಿಯಾದ ದಿಕ್ಕಿನಲ್ಲಿ ಹಾಕಿದಾಗ ಜೀವನದ ಎಲ್ಲಾ ಅಂಶಗಳನ್ನು ಸುಧಾರಿಸುತ್ತದೆ.
ರಾಧಾ ಕೃಷ್ಣ
ರಾಧಾ ಕೃಷ್ಣ ಎಂದರೆ ಪ್ರತಿಯೊಬ್ಬರಿಗೂ ಬಹಳ ಇಷ್ಟ. ಆ ಫೋಟೋ ನೋಡಲು ಮಾತ್ರ ಸುಂದರವಾಗಿರದೆ, ನಮ್ಮ ಬದುಕನ್ನು ಸಹ ಸುಂದರಗೊಳಿಸುತ್ತದೆ. ಇದು ಮನೆಯಲ್ಲಿ ಪ್ರೀತಿ ಮತ್ತು ಭಕ್ತಿ ಹೆಚ್ಚು ಮಾಡುತ್ತದೆ.. ವಾಸ್ತು ಪ್ರಕಾರ, ಈ ಫೋಟೋ ಮನೆಯಲ್ಲಿ ಜನರ ಸಂಬಂಧವನ್ನು ಸುಧಾರಿಸುತ್ತದೆ.
ಫೀನಿಕ್ಸ್
ಫೀನಿಕ್ಸ್ ಜೀವನಶೈಲಿಯಲ್ಲಿ ಬದಲಾವಣೆಯನ್ನು ತರುತ್ತದೆ ಎಂಬ ನಂಬಿಕೆ ಇದೆ. ಅದು ಜೀವನದಲ್ಲಿ ಹೆಚ್ಚು ಅಭಿವೃದ್ಧಿಗೆ ಕಾರಣವಾಗುತ್ತದೆ ಎನ್ನಲಾಗುತ್ತದೆ. ಫೀನಿಕ್ಸ್ ಫೋಟೋ ಹಾಕುವಾಗ ಅದರ ರೆಕ್ಕೆಗಳು ತೆರೆದಿರುವುದನ್ನ ಹಾಕಿ. ಇದರಿಂದ ಖ್ಯಾತಿ ಹೆಚ್ಚುತ್ತದೆ. ಫೀನಿಕ್ಸ್ ವರ್ಣಚಿತ್ರಗಳು ಉತ್ತಮ ಅವಕಾಶಗಳನ್ನು ಬರಲು ಸಹಾಯ ಮಾಡುತ್ತದೆ.
ಕೆಲವೊಂದು ಚಿತ್ರಗಳನ್ನು ಲೀವಿಂಗ್ ರೂಂನಲ್ಲಿ ಇಟ್ಟರೆ ಉತ್ತಮ ಎಂದು ಹೇಳಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ರಾಧಾ ಕೃಷ್ಟ ಮತ್ತು ಫಿನಿಕ್ಸ್ ಫೋಟೋಗಳನ್ನು ಲೀವಿಂಗ್ ರೂಂನಲ್ಲಿ ಹಾಕಿದ್ರೆ ಉತ್ತಮ ಪರಿಣಾಮ ಬೀರುತ್ತದೆ.
ಧ್ಯಾನಸ್ಥ ಬುದ್ಧ
ಧ್ಯಾನ ಮಗ್ನವಾಗಿರುವ ಬುದ್ಧನ ಮೂರ್ತಿಯ ಫೋಟೋವನ್ನು ಮನೆಯಲ್ಲಿ ಹಾಕುವುದು, ಮನೆಯಲ್ಲಿ ವಾಸಿಸುವ ಪ್ರತಿಯೊಬ್ಬರನ್ನು ಶಾಂತಗೊಳಿಸುತ್ತದೆ ಮತ್ತು ಮನೆಯ ನೆಮ್ಮದಿಯನ್ನು ಹೆಚ್ಚಿಸುತ್ತದೆ.
ಕಾಡು
ಕಾಡು ಅಥವಾ ಹಸಿರನ್ನು ಹೊಂದಿರುವ ಫೋಟೋಗಳು ಪ್ರತಿ ಮನೆಯಲ್ಲಿರಬೇಕು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಏಕೆಂದರೆ ಸಸ್ಯಗಳು ಮತ್ತು ಮರಗಳು ಬೆಳವಣಿಗೆಯನ್ನು ಸೂಚಿಸುತ್ತದೆ. ಇದು ಮನೆಯ ಅಭಿವೃದ್ಧಿಗೆ ಕಾರಣವಾಗುತ್ತದೆ. ನೀವು ಜೀವನದಲ್ಲಿ ಬಯಸುವ ಯಾವುದೇ ಬದಲಾವಣೆಯನ್ನು ತರಲು ಇದು ಸಹಾಯ ಮಾಡುತ್ತದೆ.
ನೀರು
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ನೀರಿನ ಅಂಶವನ್ನು ಹೊಂದಿರುವ ಅಥವಾ ಹರಿಯುತ್ತಿರುವ ನೀರಿನ ಫೋಟೋಗಳನ್ನು ಹಾಕುವುದು ಪ್ರಯೋಜನಗಳನ್ನು ನೀಡುತ್ತದೆ ಹರಿಯುವ ನೀರಿನ ನೀಲಿ ಬಣ್ಣ ಸಾಕಷ್ಟು ಸೂಕ್ತ ಮತ್ತು ಅದನ್ನು ಮನೆಯ ಯಾವುದೇ ಮೂಲೆಯಲ್ಲಿ ಇರಿಸುವುದು ಉತ್ತಮ ಪ್ರಯೋಜನ ನೀಡುತ್ತದೆ.
ಚಿಟ್ಟೆ
ಚಿಟ್ಟೆಗಳ ಫೋಟೋಗಳು ನೊಡಲು ಮನಮೋಹಕವಾಗಿರುತ್ತದೆ. ಅವುಗಳ ಫೋಟೋಗಳನ್ನು ಮನೆಯಲ್ಲಿ ಹಾಕುವುದರಿಂದ ಅದು ಜೀವನದಲ್ಲಿ ಬೆಳವಣಿಗೆಯಾಗಲು ಸಹಾಯ ಮಾಡುತ್ತದೆ. ಇದು ಮನೆಯ ಸುತ್ತ ಸಂತೋಷವನ್ನು ಕೂಡ ತರುತ್ತವೆ.
ಲೀವಿಂಗ್ ರೂಂನಂತೆಯೇ ಮನೆಯ ಬೆಡ್ ರೂಂನಲ್ಲಿ ಸಹ ಹಾಕುವ ಫೋಟೋಗಳು ಹೆಚ್ಚು ಪರಿಣಾಮ ಬೀರುತ್ತದೆ. ಆ ಫೋಟೋಗಳು ದಂಪತಿಗಳ ಸಂಬಂಧದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ಬೆಡ್ ರೂಂನಲ್ಲಿ ಫೋಟೋ ಹಾಕುವ ಮುನ್ನ ಎಚ್ಚರಿಕೆವಹಿಸಿ.
ಬೆಡ್ ರೂಂನಲ್ಲಿ ಪ್ರಕೃತಿಯ ಫೋಟೋಗಳನ್ನು ಹಾಕಿಕೊಳ್ಳುವುದು ಉತ್ತಮ ಎಂದು ಹೇಳಲಾಗುತ್ತದೆ. ಅದು ಮನಸ್ಸಿನ ನೆಮ್ಮದಿಯನ್ನು ಹೆಚ್ಚು ಮಾಡುತ್ತದೆ. ಪ್ರಕೃತಿಯ ಸೌಂದರ್ಯ ಮನಸ್ಸಿಗೆ ಮುದ ನೀಡುತ್ತದೆ ಹಾಗೂ ಶಾಂತಗೊಳಿಸುತ್ತದೆ.