ಇಂಡಿಯನ್ ಪ್ರೀಮಿಯರ್ ಲೀಗ್ ನ ಹೈವೋಲ್ಟೇಜ್ ಪಂದ್ಯಕ್ಕೆ ಮೆರಗು ನೀಡಿದ ತುಳುನಾಡಿನ ಪಿಲಿನಲಿಕೆ !!ಆರ್ ಸಿಬಿ – ಸಿಎಸ್ ಕೆ ಪಂದ್ಯದ ವೇಳೆ ಹುಲಿ ಹಾಡಿಗೆ ಕುಣಿದ ಕುಪ್ಪಳಿಸಿದ ಆರ್ ಸಿಬಿ ಅಭಿಮಾನಿಗಳು

Share the Article

ಇಂಡಿಯನ್ ಪ್ರೀಮಿಯರ್ ಲೀಗ್ ನ ಹೈವೋಲ್ಟೇಜ್ ಪಂದ್ಯಗಳಲ್ಲಿ ಒಂದಾದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಿನ್ನೆ ನಡೆದ ಪಂದ್ಯದಲ್ಲಿ ಕ್ರೀಡಾಂಗಣದಲ್ಲಿ ನಮ್ಮ ತುಳುನಾಡಿನ ಪಿಲಿನಲಿಕೆ ಭಾರೀ ಸದ್ದು ಮಾಡಿದೆ.

ಹೌದು, ಈ ಬಾರಿಯ ಐಪಿಎಲ್ ವೀಕ್ಷಿಸಲು ಮೈದಾನದಲ್ಲಿ ಪ್ರೇಕ್ಷಕರಿಗೆ ಸೀಮಿತ ಸಂಖ್ಯೆಯಲ್ಲಿ ಮಾತ್ರ ಅವಕಾಶ ನೀಡಲಾಗಿದೆ. ತಮ್ಮ ನೆಚ್ಚಿನ ಫ್ರಾಂಚೈಸಿಯನ್ನು ಬೆಂಬಲಿಸುತ್ತಾ ಅಭಿಮಾನಿಗಳು ಪಂದ್ಯವನ್ನು ಆನಂದಿಸುತ್ತಾರೆ. ಅದರಂತೆಯೇ ನಿನ್ನೆ ಶಾರ್ಜಾದ ಮೈದಾನದಲ್ಲಿ ಕರಾವಳಿಯ ಅಭಿಮಾನಿಗಳು ತಮ್ಮ ನೆಚ್ಚಿನ ತಂಡವನ್ನು ಹುರಿದುಂಬಿಸುತ್ತಾ ಪಿಲಿನಲಿಕೆಗೆಗೆ ಹೆಜ್ಜೆ ಹಾಕಿದ ವಿಡಿಯೋ ವೈರಲ್ ಆಗಿದೆ.

https://www.instagram.com/reel/CUNwDUVBMEE/?utm_medium=copy_link

ಆರ್ ಸಿಬಿ – ಸಿಎಸ್ ಕೆ ಪಂದ್ಯದ ವೇಳೆ ಹುಲಿ ಕುಣಿತದ ಹಾಡಿಗೆ ಆರ್ ಸಿಬಿ ಅಭಿಮಾನಿಗಳು ಮನಸೋ ಇಚ್ಛೆ ಕುಣಿದಿದ್ದಾರೆ. ಯುವಕರು, ಯುವತಿಯರು ಸೇರಿದಂತೆ ಆರ್ ಸಿಬಿ ಅಭಿಮಾನಿಗಳು ಹುಲಿ ಕುಣಿತವಾಡಿದ ವಿಡಿಯೋ ವೈರಲ್ ಆಗಿದ್ದು, ಇದೀಗ ಎಲ್ಲೆಡೆ ಅದರಂತೆ ಸುದ್ದಿಯಾಗಿಹೋಗಿದೆ.

Leave A Reply