Home daily horoscope ಸಮಾಧಿಯನ್ನು ಅಗೆದು ಹೆಣವನ್ನು ಎತ್ತಾಕೊಂಡೋದ ಪಾಪಿಗಳು | ತಾಯಿಯ ಮೃತದೇಹಕ್ಕಾಗಿ ಮಕ್ಕಳ ಹುಡುಕಾಟ | ದಟ್ಟವಾಗಿದೆ...

ಸಮಾಧಿಯನ್ನು ಅಗೆದು ಹೆಣವನ್ನು ಎತ್ತಾಕೊಂಡೋದ ಪಾಪಿಗಳು | ತಾಯಿಯ ಮೃತದೇಹಕ್ಕಾಗಿ ಮಕ್ಕಳ ಹುಡುಕಾಟ | ದಟ್ಟವಾಗಿದೆ ವಾಮಾಚಾರದ ಶಂಕೆ !!

Hindu neighbor gifts plot of land

Hindu neighbour gifts land to Muslim journalist

ಸಾಮಾನ್ಯವಾಗಿ ನಾವೆಲ್ಲರೂ ಚಿನ್ನ,ಹಣ ಕಳ್ಳತನ ಮಾಡುವುದನ್ನು ನೋಡಿರುತ್ತೇವೆ. ಆದ್ರೆ ಇಲ್ಲಿ ವಿಚಿತ್ರ ಏನಪ್ಪಾ ಅಂದ್ರೆ ಸಮಾಧಿ ಅಗೆದು ಮೃತ ದೇಹವನ್ನೇ ಎತ್ತಾಕೊಂಡು ಹೋದ ಘಟನೆ ನಡೆದಿದೆ.

ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಯಾದಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,ಅಂತ್ಯಕ್ರಿಯೆ ನಡೆದು ಮೂರು ತಿಂಗಳ ಬಳಿಕ ಮೃತದೇಹ ನಾಪತ್ತೆಯಾಗಿದೆ.ಸಮಾಧಿಯನ್ನು ಅಗೆದು ಮಹಿಳೆಯ ಶವ ತೆಗೆದುಕೊಂಡು ಹೋಗಲಾಗಿದೆ.ಕಳೆದ ಜೂನ್ ನಲ್ಲಿ ವಯೋಸಹಜ ಕಾಯಿಲೆಯಿಂದ ಲಕ್ಷ್ಮಮ್ಮ ಅವರು ಮೃತಪಟ್ಟಿದ್ದರು. ಅವರ ಜಮೀನಿನಲ್ಲಿ ಕುಟುಂಬದವರು ಅಂತ್ಯಕ್ರಿಯೆ ನೆರವೇರಿಸಿದ್ದರು.

ಸೆಪ್ಟೆಂಬರ್ 21 ರಂದು ರಾತ್ರಿ ಮೃತದೇಹವನ್ನು ಹೊತ್ತುಕೊಂಡು ಹೋಗಲಾಗಿದ್ದು,ವಾಮಾಚಾರಕ್ಕಾಗಿ ಶವ ತೆಗೆದುಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ.ಇದೀಗ ಮೃತರ ಪುತ್ರ ಮೃತದೇಹ ಹುಡುಕಿಕೊಡುವಂತೆ ಅರಸೀಕೆರೆ ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ.