Home News ಬೈಕಿನಲ್ಲಿ ಬಂದು ಕರಿಮಣಿ ಸರ ಸುಲಿಗೆ ಮಾಡಿದ ಪ್ರಕರಣ: ಆರೋಪಿಗಳಿಗೆ ಜಾಮೀನು

ಬೈಕಿನಲ್ಲಿ ಬಂದು ಕರಿಮಣಿ ಸರ ಸುಲಿಗೆ ಮಾಡಿದ ಪ್ರಕರಣ: ಆರೋಪಿಗಳಿಗೆ ಜಾಮೀನು

Hindu neighbor gifts plot of land

Hindu neighbour gifts land to Muslim journalist

ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಪಣೋಲಿಬೈಲು ಬಳಿ ನಡೆದು ಕೊಂಡು ಹೋಗುತ್ತಿದ್ದ ಒಂಟಿ ಮಹಿಳೆಯ ಕುತ್ತಿಗೆಯಿಂದ ಬೈಕಿನಲ್ಲಿ ಬಂದಿದ್ದ ಇಬ್ಬರು ವ್ಯಕ್ತಿಗಳು ಚಿನ್ನದ ಕರಿಮಣಿ ಸರವನ್ನು ಬಲವಂತವಾಗಿ ಕಿತ್ತು ಸುಲಿಗೆ ಮಾಡಿ ಪರಾರಿಯಾಗಿದ್ದ ಆರ್ಯಾಪು ನಿವಾಸಿಗಳಾದ ರೋಹಿತ್, ಪ್ರಾಯ 22 ವರ್ಷ, ಮತ್ತು ಲೋಹಿತ್ ಪಿ.ಆರ್ @ ಸಚಿನ್ @ ಸಚ್ಚು, ಪ್ರಾಯ 20 ವರ್ಷ ಇವರನ್ನು ದಿನಾಂಕ: ಸೆ.19ರಂದು ಬಂಧಿಸಿ ಆರೋಪಿಗಳ ವಶದಿಂದ ಸುಲಿಗೆ ಮಾಡಿದ ಮಾಂಗಲ್ಯ ಸರವನ್ನು ಹಾಗೂ ಸುಲಿಗೆ ಮಾಡಲು ಉಪಯೋಗಿಸಿದ ಅಪಾಚಿ ಮೋಟಾರು ಸೈಕಲನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು ಮತ್ತು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು,ಮಾನ್ಯ ನ್ಯಾಯಾಲಯ ಆರೋಪಿಗಳಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು. ಇದೀಗ ಆರೋಪಿಗಳಿಗೆ ಬಂಟ್ವಾಳ ಮಾನ್ಯ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.

ಆರೋಪಿಗಳ ಪರವಾಗಿ ಚಾಣಕ್ಯ ಲಾ ಚೇಂಬರ್ಸ್ ಪುತ್ತೂರು ಇಲ್ಲಿನ ನ್ಯಾಯವಾದಿಗಳಾದ ಶ್ಯಾಮ್ ಪ್ರಸಾದ್ ಕೈಲಾರ್ ಹಾಗೂ ವಿಮಲೇಶ್ ಸಿಂಗಾರಕೋಡಿ ವಾದಿಸಿದರು.