ಕಾರ್ಕಳ | ನಡುರಾತ್ರಿ ಬೀದಿನಾಯಿಗಳ ದಾಳಿಗೊಳಗಾಗಿ ವೃದ್ಧ ಸಾವು

Share the Article

ಅಂಗಡಿ ಬದಿಯಲ್ಲಿ ಮಲಗಿದ್ದ ವೃದ್ಧರೊಬ್ಬರು ಬೀದಿ ನಾಯಿಗಳ ದಾಳಿಗೊಳಗಾಗಿ ದಾರುಣವಾಗಿ ಮೃತಪಟ್ಟ ಘಟನೆ ಕಾರ್ಕಳದ ಹಿರ್ಗಾನ ಎಂಬಲ್ಲಿ ನಡೆದಿದೆ.

ಹೆರ್ಮುಂಡೆಯ ಸಾಧು ಪೂಜಾರಿ(80) ಮೃತಪಟ್ಟ ವ್ಯಕ್ತಿ ಎಂದು ತಿಳಿದುಬಂದಿದೆ.

ಮೃತ ಸಾಧು ಪೂಜಾರಿ ಅವರು ಕಳೆದ 40 ವರ್ಷಗಳಿಂದ ಮನೆಗೆ ಹೋಗದೇ ಕೂಲಿ ಕೆಲಸ ಮಾಡಿಕೊಂಡು ಹಿರ್ಗಾನ ಮೂಜೂರು ಪರಿಸರದ ಅಂಗಡಿ ಬದಿಯಲ್ಲಿ ರಾತ್ರಿ ಮಲಗುತ್ತಿದ್ದರು. ಸೆಪ್ಟೆಂಬರ್ 21ರ ರಾತ್ರಿ ವಿಪರೀತ ಮದ್ಯ ಸೇವನೆ ಮಾಡಿ, ಹಿರ್ಗಾನ ಸ್ವಾಗತ್ ಕಾಂಪ್ಲೆಕ್ಸ್ ಕಟ್ಟಡದ ಎದುರು ಮಲಗಿದ್ದರು.

ರಾತ್ರಿ ವೇಳೆಗೆ ಬೀದಿ ನಾಯಿಗಳು ಏಕಾಏಕಿ ಅವರ ಮೇಲೆ ದಾಳಿ ನಡೆಸಿ ‌ಕಚ್ಚಿ ಗಾಯಗೊಳಿಸಿವೆ. ಇದರಿಂದ ವಿಪರೀತ ರಕ್ತಸ್ರಾವವಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

Leave A Reply