Home News ಪುತ್ತೂರು : ಆಂಟಿಯ ಆಟಾಟೋಪ | ಖೆಡ್ಡಾಕ್ಕೆ ಬಿದ್ದರೆ ಬರ್ಬಾದ್

ಪುತ್ತೂರು : ಆಂಟಿಯ ಆಟಾಟೋಪ | ಖೆಡ್ಡಾಕ್ಕೆ ಬಿದ್ದರೆ ಬರ್ಬಾದ್

Hindu neighbor gifts plot of land

Hindu neighbour gifts land to Muslim journalist

ಪುತ್ತೂರು : ಮನೆಯಲ್ಲಿ ದನ ಇಲ್ಲದೇ ಇದ್ದರೂ ಹಾಲಿನ ಡೈರಿಗೆ ಮಹಿಳೆ ಬರುತ್ತಿದ್ದು, ಇದು ಸಾರ್ವಜನಿಕರ ಸಂಶಯಕ್ಕೆ ಕಾರಣವಾಗಿ ಬಳಿಕ ಸಾರ್ವಜನಿಕರು ರೆಡ್ ಹ್ಯಾಂಡಾಗಿ ಮಹಿಳೆ ಮತ್ತು ಉದ್ಯಮಿಯ ರಾಸಲೀಲೆಯನ್ನು ಪತ್ತೆ ಮಾಡಿರುವ ಸ್ವಾರಸ್ಯಕರ ಸಂಗತಿ ಪುತ್ತೂರಿನ ಹೊರವಲಯದಲ್ಲಿ ನಡೆದಿದೆ.

ಪುತ್ತೂರು ತಾಲೂಕಿನ ಗ್ರಾಮಾಂತರ ಪ್ರದೇಶದ ಹಾಲಿನ ಡೈರಿಯೊಂದರಲ್ಲಿ ಈ ಘಟನೆ ನಡೆದಿದ್ದು, ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದ ಉದ್ಯಮಿ ಆಂಟಿಯೊಬ್ಬರ ಜೊತೆ ಡೈರಿಯ ಕಚೇರಿಯಲ್ಲೇ ರಾಸಲೀಲೆ ಮಾಡುತ್ತಿದ್ದ ಎನ್ನಲಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಇದು ವೈರಲ್ ಆಗಿದೆ.

ಮಹಿಳೆ ಸ್ಥಳೀಯವಾಗಿ ಸಭ್ಯರಂತೆ ಕಾಣುತ್ತಿದ್ದರು. ಬೆಳಿಗ್ಗೆ ಮತ್ತು ಸಂಜೆ ಹಾಲಿನ ಡೈರಿ ಬಾಗಿಲು ತೆರೆಯುತ್ತಿತ್ತು ಹಾಲಿಗೆ ಬರುವವರಾದರೆ ದಿನದಲ್ಲಿ ಎರಡು ಬಾರಿ ಬರುವುದು ಯಾಕೆ ಎಂಬ ಸಂಶಯ ಕೆಲವರಲ್ಲಿತ್ತು.

ಡೈರಿಯ ಪ್ರಮುಖ ಒಬ್ಬ ಉದ್ಯಮಿಯಾಗಿದ್ದು, ಆಂಟಿಯೊಂದಿಗೆ ಅನ್ನೋನ್ಯವಾಗಿದ್ದ ಎನ್ನಲಾಗಿದೆ. ಬೇರೆ ಕಡೆ ಕರೆದು ಕೊಂಡು ಹೋದರೆ ಮನೆಯವರಿಗೆ ಗೊತ್ತಾಗುತ್ತದೆ ಎಂಬ ಕಾರಣಕ್ಕೆ ಹಾಲಿನ ಡೈರಿಗೆ ಕರೆಸಿಕೊಳ್ಳುತ್ತಿದ್ದ ರೈಡ್ ಮಾಡಿದ ಬಳಿಕ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಾಗ ಸಾರ್ವಜನಿಕರು ಎಚ್ಚರಿಕೆ ನೀಡಿ ಕಳಿಸಿದ್ದಾರೆ ಎನ್ನಲಾಗಿದೆ.

ಆತನೊಂದಿಗೆ ಲೂಡೋ ಆಡುತ್ತಿದ್ದಾಗಲೂ ಸಿಕ್ಕಿಬಿದ್ದಿದ್ದು, ಬಳಿಕ ಆ ಉದ್ಯಮಿ ಊರು ಬಿಟ್ಟು ಈಗ ಕೇರಳದಲ್ಲಿ ನೆಲಸಿದ್ದಾನೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಉದ್ಯಮಿಗಳನ್ನೇ ಬಲೆಗೆ ಬೀಳಿಸಿ ಅವರಿಂದ ಹಣ ಪೀಕಿಸುವ ಮಹಾತಂತ್ರಗಾರಿಕೆಯನ್ನು ಹೊಂದಿರುವ ಈ ಆಂಟಿಗೆ ಗೃಹ ನಿರ್ಮಾಣ ಮಾಡಿಕೊಟ್ಟ ರಾಜಕಾರಣಿಯೊಬ್ಬ ಕೆಲದಿನಗಳಿಂದ ನಾಪತ್ತೆಯಾಗಿದ್ದಾನೆ.

ತನ್ನ ವಯ್ಯಾರದ ಮಾತಿನ ಮೂಲಕ ಉದ್ಯಮಿಗಳನ್ನೇ ಟಾರ್ಗೆಟ್ ಮಾಡಿ ಅವರ ಜೊತೆ ನಿಂತು ಫೋಟೋ ಕ್ಲಿಕ್ಕಿಸಿ ಬಳಿಕ ಬ್ಲಾಕ್‌ಮೇಲ್ ಮಾಡಿ ಅವರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಸಾರ್ವತ್ರಿಕ ಆರೋಪಗಳು ಕೇಳಿಬಂದಿದೆ.

ಇದು ಹನಿಟ್ರಾಪಿಗಿಂತಲೂ ಕಠೋರವಾಗಿದ್ದು, ಒಂದು ಬಾರಿ ಆಂಟಿಯ ಸೆಳೆತಕ್ಕೊಳಗಾದರೆ ಬಳಿಕ ಆತನನ್ನು ಬೋಳಿಸಿಯೇ ಬಿಡುತ್ತಿದ್ದಾರೆ. ಇತ್ತೀಚೆಗೆ ಪುತ್ತೂರಿನ ಪ್ರಭಾವಿ ರಾಜಕಾರಣಿಯೊಬ್ಬರನ್ನು ಇದೇ ಮಾದರಿಯಲ್ಲಿ ಬಲೆಗೆ ಬೀಳಿಸಿದ್ದು ಮಾತ್ರವಲ್ಲದೆ ತಾನು ಅಂಗಡಿ ಹೊಂದಿರುವ ಕಟ್ಟಡ ಮಾಲಿಕನ ಜೊತೆಯೂ ಸಲ್ಲಾಪ ನಡೆಸಿದ್ದು, ಅದನ್ನು ಇಣುಕಿ ನೋಡಿದ ಮೂವರು ಅಂಗಡಿ ಮಾಲಿಕರನ್ನು ತನ್ನ ಕಟ್ಟಡದಿಂದಲೇ ಖಾಲಿ ಮಾಡಿಸಿದ್ದು ಸುದ್ದಿಯಾಗಿತ್ತು ಪೊಲೀಸರು ಆಂಟಿಯ ವಯ್ಯಾರಕ್ಕೆ ಬ್ರೇಕ್ ಹಾಕದೇ ಇದ್ದರೆ ಇನ್ನಷ್ಟು ಉದ್ಯಮಿಗಳು ಬಲಿಯಾಗುವುದರಲ್ಲಿ ಸಂಶಯವಿಲ್ಲ ಎಂಬ ಮಾತುಗಳೂ ಕೇಳಿ ಬಂದಿದೆ ಎಂದು ಸಂಜೆ ಪತ್ರಿಕೆಯಲ್ಲಿ ವರದಿಯಾಗಿದೆ.