Home Business ಗಣೇಶ ಹಬ್ಬದ ಪ್ರಯುಕ್ತ ಈತನ ಅಂಗಡಿಯಲ್ಲಿ ಮಾರಾಟಕ್ಕಿದೆಯಂತೆ ಬಂಗಾರದ ಮೋದಕ!!|ಅಂದಹಾಗೇ ಈ ಮೋದಕದ ಬೆಲೆ ಕೇಳಿದ್ರೆ...

ಗಣೇಶ ಹಬ್ಬದ ಪ್ರಯುಕ್ತ ಈತನ ಅಂಗಡಿಯಲ್ಲಿ ಮಾರಾಟಕ್ಕಿದೆಯಂತೆ ಬಂಗಾರದ ಮೋದಕ!!|ಅಂದಹಾಗೇ ಈ ಮೋದಕದ ಬೆಲೆ ಕೇಳಿದ್ರೆ ನೀವು ಶಾಕ್ ಆಗೋದಂತೂ ಖಚಿತ

Hindu neighbor gifts plot of land

Hindu neighbour gifts land to Muslim journalist

ಗಣಪತಿ ಮೋದಕ ಪ್ರಿಯ ಎಂಬುದು ಪುರಾಣದಲ್ಲೇ ಉಲ್ಲೇಖವಾಗಿದೆ. ಹೀಗಾಗಿ ಗಣೇಶ ಚತುರ್ಥಿಯಂದು ಮೋದಕಗಳನ್ನು ತಯಾರಿಸುವುದು ಸಾಮಾನ್ಯ. ಮೋದಕ ತಯಾರಿಸಿ ಅದನ್ನು ಗಣಪನಿಗೆ ನೈವೇದ್ಯವಾಗಿ ಇಡುತ್ತಾರೆ. ಆದರೆ ಇಲ್ಲೊಂದು ಕಡೆ ಈ ಮೋದಕದ ಬೆಲೆಯನ್ನು ಕೇಳಿದವರು ಆಶ್ಚರ್ಯವಾಗುವುದರ ಜೊತೆಗೆ ವಿಶೇಷತೆ ಏನು ಎಂದು ಕೂಡ ಪ್ರಶ್ನೆ ಮಾಡುತ್ತಿದ್ದಾರೆ.

ಮಹಾರಾಷ್ಟ್ರದಲ್ಲಿ ಗಣೇಶ ಹಬ್ಬದ ಸಂಭ್ರಮ ಇನ್ನೂ ಮುಗಿದಿಲ್ಲ. ಸುಮಾರು 10 ದಿನಗಳ ಕಾಲ ಗಣೇಶ ಚತುರ್ಥಿ ಸಂಭ್ರಮ, ಹಾಡು, ಪೂಜೆ ಇದ್ದೇ ಇರುತ್ತದೆ. ಇದೀಗ ಈ ವರ್ಷ ನಾಸಿಕ್‌ನಲ್ಲಿರುವ ಒಂದು ಸಿಹಿತಿಂಡಿಯ ಅಂಗಡಿಯಲ್ಲಿ ಈ ಮೋದಕ ವಿಶೇಷವಾಗಿ ಗ್ರಾಹಕರನ್ನು ಸೆಳೆಯುತ್ತಿದೆ. ಮೋದಕ ಎಷ್ಟು ದುಬಾರಿಯೆಂದರೆ, ಒಂದು ಕೆಜಿ ಮೋದಕದ ಬೆಲೆ ಬರೋಬ್ಬರಿ 12,000 ರೂಪಾಯಿ ಆಗಿದೆ.

ಮೋದಕದ ಬಗ್ಗೆ ಪ್ರತಿಕ್ರಿಯೆ ನೀಡಿದ ಅಂಗಡಿ ಮಾಲೀಕ ದೀಪಕ್ ಚೌಧರಿ, ಈ ಬಂಗಾರದ ಮೋದಕಕ್ಕೆ ಒಳ್ಳೆಯ ಪ್ರತಿಕ್ರಿಯೆ ಬಂದಿದೆ. ಭರ್ಜರಿ ಮಾರಾಟವಾಗುತ್ತಿದೆ. ಉಳಿದ 25 ವಿಧದ ಮೋದಕಕ್ಕಿಂತಲೂ ಇದೇ ಸಿಕ್ಕಾಪಟೆ ಸೇಲ್ ಆಗುತ್ತಿದೆ ಎಂದಿದ್ದಾರೆ.

ಗಣೇಶ ಚತುರ್ಥಿಯಂದು ವಿವಿಧ ರೀತಿಯ ಮೋದಕಗಳನ್ನು ತಯಾರಿಸುವುದು ಸಾಮಾನ್ಯ. ಗಣೇಶನಿಗಾಗಿ ಕೇಸರಿ, ಕಾಜು, ಮೋತಿಚೂರ್ ಮತ್ತು ಖೋಯಾ ಮೋದಕಗಳು ತಯಾರಾಗುತ್ತವೆ. ಆದರೆ ಸಾಗರ್ ಸ್ವೀಟ್ಸ್ ಎಂಬ ಅಂಗಡಿ ಮಾರುತ್ತಿರುವ ಮೋದಕದ ಹೆಸರು ಗೋಲ್ಡನ್ ಮೋದಕ (Golden Modaks). ಈ ಅಂಗಡಿಯಲ್ಲಿ ಸುಮಾರು 26 ವಿಧದ ಮೋದಕಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದು, ಅದರಲ್ಲಿ ಬಂಗಾರದ ಮೋದಕ ಹೆಚ್ಚಿನ ಹಣ ಗಳಿಸುತ್ತಿದೆ. ಈ ಬಂಗಾರದ ಮೋದಕವನ್ನು ಜನರು ತುಂಬ ಖುಷಿಯಿಂದ ಖರೀದಿಸುತ್ತಿದ್ದಾರೆ. ಬೆಳ್ಳಿ ಮೋದಕವೂ ಸಹ ಈ ಅಂಗಡಿಯಲ್ಲಿ ಮಾರಾಟಕ್ಕಿದ್ದು, ಅದರ ಬೆಲೆ ಕೆಜಿಗೆ 1,460 ರೂಪಾಯಿ ಆಗಿದೆ ಎಂದು ತಿಳಿದುಬಂದಿದೆ.