ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ರೈಲಿನಡಿ ಸಿಲುಕಿದ ಮಹಿಳೆ | ಸಾವಿನ ದವಡೆಯಿಂದ ರೋಚಕವಾಗಿ ಪಾರಾದ ಭಯಾನಕ ವಿಡಿಯೋ ವೈರಲ್

Share the Article

ಚಲಿಸುತ್ತಿದ್ದ ರೈಲನ್ನು ಹತ್ತಲು ಹೋಗಿ ಆಗಿರುವ ಅವಘಡಗಳು ಅಷ್ಟಿಷ್ಟಲ್ಲ. ಅದೆಷ್ಟೋ ಮಂದಿ ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಆದರೂ ಜನರು ಇಂಥ ದುಸ್ಸಾಹಸಕ್ಕೆ ಕೈ ಹಾಕುತ್ತಲೇ ಇರುತ್ತಾರೆ.

ಅಂಥದ್ದೇ ಒಂದು ಘಟನೆ ಮಹಾರಾಷ್ಟ್ರದ ಪಾಲ್ಸರ್ ಜಿಲ್ಲೆಯ ವಾಸೈ ರೈಲ್ವೆ ನಿಲ್ದಾಣದಲ್ಲಿ ಘಟನೆ ನಡೆದಿದೆ. ಚಲಿಸುತ್ತಿರುವ ರೈಲನ್ನು ಹತ್ತಲು ಹೋಗಿ ಆಯತಪ್ಪಿ, ಮಹಿಳೆ ರೈಲಿನಡಿ ಬಿದ್ದಿದ್ದಾಳೆ. ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಚಲಿಸುತ್ತಿದ್ದ ರೈಲಿಗೆ ಹತ್ತಲು ಯತ್ನಿಸುವ ವೇಳೆ ಆಯತಪ್ಪಿ ಕೆಳಗೆ ಬಿದ್ದದ್ದು ಹಾಗೂ ಪ್ರಯಾಣಿಕರು ಆಕೆಯನ್ನು ರಕ್ಷಿಸಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.

ಅದೃಷ್ಟವಶಾತ್ ಕೂಡಲೇ ಜನರು ಓಡಿ ಬಂದು ಮಹಿಳೆಯನ್ನು ರೈಲಿನಡಿಯಿಂದ ಎಳೆದು ರಕ್ಷಿಸಿದ್ದಾರೆ. ಭಾರತೀಯ ರೈಲ್ವೆ ಇಲಾಖೆಯು ಈ ವಿಡಿಯೋ ಬಿಡುಗಡೆ ಮಾಡಿದ್ದು, ಜನರು ಜಾಗೃತರಾಗಿ ಇರಬೇಕು ಎಂದು ಮನವಿ ಮಾಡಿಕೊಂಡಿದೆ.

Leave A Reply