ಕಾರು ಮರಕ್ಕೆ ಡಿಕ್ಕಿ ಹೊಡೆದು ಕುಲಸಚಿವ ಸ್ಥಳದಲ್ಲೇ ಸಾವು | ಮರದಲ್ಲಿದ್ದ ಜೇನುನೊಣಗಳಿಂದ ಕಾರಿನ ಮೇಲೆ ದಾಳಿ, ಪತ್ನಿ ಹಾಗೂ ಪುತ್ರ ಗಂಭೀರ

Share the Article

ವೇಗವಾಗಿ ಚಲಿಸುತ್ತಿದ್ದ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಅದರಲ್ಲಿದ್ದ ಕುಲಸಚಿವರು ಸ್ಥಳದಲ್ಲೇ ಸಾವಿನಪ್ಪಿದ್ದು, ಮತ್ತೊಂದೆಡೆ ಮರದಲ್ಲಿದ್ದ ಜೇನುನೊಣಗಳ ದಾಳಿಗೆ ಅವರ ಪುತ್ರ ಹಾಗೂ ಪತ್ನಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗುವಂತಾಗಿದೆ.

ಬೀದರಿನ ಬಸವಕಲ್ಯಾಣದ ಮುಡಬಿ ಬಳಿ ಈ ಕಾರು ಅಪಘಾತ ಸಂಭವಿಸಿದೆ. ಕಲಬುರಗಿಯ ಶ್ರೀ ಶರಣಬಸವೇಶ್ವರ ವಿಶ್ವವಿದ್ಯಾಲಯದ ಕುಲಸಚಿವ ಲಿಂಗರಾಜ ಶಾಸ್ತ್ರಿ (50) ಮೃತಪಟ್ಟವರು. ಅವರ ಪತ್ನಿ ಶ್ರೀದೇವಿ, ಪುತ್ರ ಕೈಲಾಸ್ ಗಂಭೀರವಾಗಿ ಗಾಯಗೊಂಡಿದ್ದಾರೆ.

ಬಸವಕಲ್ಯಾಣದಿಂದ ಕಲಬುರಗಿಗೆ ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಕಾರಿನಲ್ಲಿ ಮೂವರಷ್ಟೇ ಪ್ರಯಾಣಿಸುತ್ತಿದ್ದು, ವೇಗದಲ್ಲಿದ್ದ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಅಪ್ಪಳಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ ಶಾಸ್ತ್ರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಆದರೆ ಮರದಲ್ಲಿದ್ದ ಜೇನುನೊಣಗಳ ದಾಳಿಯಿಂದ ಪುತ್ರ-ಪತ್ನಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯರು ಜೇನು ನೊಣಗಳಿಂದ ಕಾಪಾಡಿ ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮುಡಬಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

Leave A Reply