Home latest ಪಾಪಿ ಪತಿಯ ಅಕ್ರಮ ಸಂಬಂಧ ಮತ್ತು ಚಿತ್ರಹಿಂಸೆಗೆ ಮನನೊಂದು ನಾಲ್ಕು ತಿಂಗಳ ಗರ್ಭಿಣಿ ಆತ್ಮಹತ್ಯೆ!!

ಪಾಪಿ ಪತಿಯ ಅಕ್ರಮ ಸಂಬಂಧ ಮತ್ತು ಚಿತ್ರಹಿಂಸೆಗೆ ಮನನೊಂದು ನಾಲ್ಕು ತಿಂಗಳ ಗರ್ಭಿಣಿ ಆತ್ಮಹತ್ಯೆ!!

Hindu neighbor gifts plot of land

Hindu neighbour gifts land to Muslim journalist

ಬೆಳಗಾವಿ: ಪತಿಯ ಅಕ್ರಮ ಸಂಬಂಧ ಮತ್ತು ಕಿರುಕುಳ ಸಹಿಸಲಾಗದೇ 4 ತಿಂಗಳ ಗರ್ಭಿಣಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಮನ ಕರಗುವಂತಹ ಘಟನೆ ಬೆಳಗಾವಿ ಜಿಲ್ಲೆಯ ಖಂಜರ್ ಗಲ್ಲಿಯಲ್ಲಿ ನಡೆದಿದೆ.

ಮುಸ್ಕಾನ್ ಮುಜಾವರ (23) ನಾಲ್ಕು ತಿಂಗಳ
ಗರ್ಭಿಣಿಯಾಗಿದ್ದು,ಸೆಪ್ಟೆಂಬರ್ 14 ರಂದು ಆತ್ಮಹತ್ಯೆ
ಮಾಡಿಕೊಂಡಿದ್ದಾಳೆ.

ಮುಸ್ಕಾನ್ 8 ತಿಂಗಳ ಹಿಂದೆಯಷ್ಟೇ ಬೆಳಗಾವಿಯ ಶಹಾಪುರದ ಅಳವಣ ಗಲ್ಲಿ ನಿವಾಸಿ ರೋಹಿಮ್ ಎಂಬಾತನ ಜೊತೆಗೆ ವಿವಾಹವಾಗಿದ್ದರು.ರೋಹಿಮ್ ಜತೆ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯೇ ರೋಹಿಮ್ ಉತ್ತಮ ನಡತೆಯುಳ್ಳ ಯುವಕ ಎಂದು ನಂಬಿಸಿ ಮದುವೆ ಮಾಡಿಸಿ ಕೊಟ್ಟ ಆರೋಪ ಕೇಳಿ ಬಂದಿದೆ.

ಮದುವೆಯಾಗಿ ಒಂದು ತಿಂಗಳು ಸಭ್ಯನಂತಿದ್ದ ರೋಹಿಮ್ ಆ ಬಳಿಕ ತನ್ನ ಇನ್ನೊಂದು ಮುಖವನ್ನು ತೋರಿಸಿದ್ದಾನೆ.ಪ್ರತೀ ದಿನ ಗಾಂಜಾ ಸೇವಿಸಿ ಬಂದು ಪತ್ನಿಗೆ ಕಿರುಕುಳ ನೀಡುತ್ತಿದ್ದ. ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಗರ್ಭಿಣಿ ಎಂದೂ ನೋಡದೇ ಪತ್ನಿಗೆ ಹಿಗ್ಗಾಮುಗ್ಗಾ ಥಳಿಸುತ್ತಿದ್ದ ಎನ್ನಲಾಗಿದ್ದು, ಈತನ ಟಾರ್ಚರ್ ಸಹಿಸಲು ಸಾಧ್ಯವಾಗದೇ,ಮುಸ್ಕಾನ್ ನೇಣಿಗೆ ಶರಣಾಗಿದ್ದಾಳೆ.

ಪತ್ನಿ ನೇಣಿಗೆ ಕೊರಳೊಡ್ಡಿದ ಬೆನ್ನಲ್ಲೇ ರೋಹಿಮ್ ನ ಮತ್ತಷ್ಟು ವಿಚಾರಗಳು ಕೂಡ ಬೆಳಕಿಗೆ ಬಂದಿದೆ.ರೋಹಿಮ್ ದೂರದ ಸಂಬಂಧಿಯಾದ ಮಹಿಳೆಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ ವಿಷಯ ಮುಸ್ಕಾನ್ ಗೆ ಗೊತ್ತಾಗಿದೆ.ಇದನ್ನು ಮುಸ್ಕಾನ್ ಪ್ರಶ್ನಿಸಿದ್ದಳು ಎನ್ನಲಾಗಿದೆ. ಈ ವಿಚಾರಕ್ಕೆ ಸಂಬಧಿಸಿದಂತೆ ಇಬ್ಬರ ನಡುವೆ ಜಗಳ ನಡೆದಿತ್ತು ಎನ್ನಲಾಗಿದೆ.

ಅಂದಿನಿಂದ ಪದೇಪದೆ ಪತ್ನಿಯೊಂದಿಗೆ ಜಗಳವಾಡಿ ಇನ್ನಿಲ್ಲದ ಕಿರುಕುಳ ಹಿಂಸೆ ನೀಡುತ್ತಿದ್ದ.ಅಲ್ಲದೇ ಗಾಂಜಾ ಸೇವಿಸಿ ಬಂದು ಆಕೆ ಮೇಲೆ ದೌರ್ಜನ್ಯ ಎಸಗುತ್ತಿದ್ದ ಹಾಗೂ ವರದಕ್ಷಿಣೆ ಕಿರುಕುಳ, ಚಿತ್ರಹಿಂಸೆ ನೀಡುತ್ತಿದ್ದ ಎಂದು ಆಕೆಯ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ.

ಈ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ರೋಹಿಮ್ ನನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ.